PM Modi Birthday: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ, ರಾಷ್ಟ್ರಪತಿ ಮುರ್ಮು ಹಾಗೂ ಕೇಂದ್ರ ಸಚಿವರಿಂದ ಶುಭಾಶಯ

ಪ್ರಧಾನಿ ನರೇಂದ್ರ ಮೋದಿ (Narendra Modi)ಇಂದು ತಮ್ಮ 73ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಕೇಂದ್ರ ಸಚಿವರು ಶುಭಾಶಯ ಕೋರಿದ್ದಾರೆ. ಮೋದಿಯವರ ಹುಟ್ಟುಹಬ್ಬದ ಜತೆಗೆ ಇಂದು ವಿಶ್ವಕರ್ಮ ಜಯಂತಿ ಕೂಡ, ಪ್ರಧಾನಿ ವಿಶ್ವಕರ್ಮ ಯೋಜನೆಗೆ ಇಂದು ಚಾಲನೆ ಸಿಗಲಿದೆ

PM Modi Birthday: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ, ರಾಷ್ಟ್ರಪತಿ ಮುರ್ಮು ಹಾಗೂ ಕೇಂದ್ರ ಸಚಿವರಿಂದ ಶುಭಾಶಯ
ನರೇಂದ್ರ ಮೋದಿ

Updated on: Sep 17, 2023 | 10:06 AM

ನವದೆಹಲಿ, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿ (Narendra Modi)ಇಂದು ತಮ್ಮ 73ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಕೇಂದ್ರ ಸಚಿವರು ಶುಭಾಶಯ ಕೋರಿದ್ದಾರೆ.
ಮೋದಿಯವರ ಹುಟ್ಟುಹಬ್ಬದ ಜತೆಗೆ ಇಂದು ವಿಶ್ವಕರ್ಮ ಜಯಂತಿ ಕೂಡ, ಪ್ರಧಾನಿ ವಿಶ್ವಕರ್ಮ ಯೋಜನೆಗೆ ಇಂದು ಚಾಲನೆ ಸಿಗಲಿದೆ.

ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ರಾಷ್ಟ್ರಪತಿ ಮುರ್ಮು ಶುಭಾಶಯ
ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿ, ದೃಢಸಂಕಲ್ಪ, ದೃಢವಾದ ನಾಯಕತ್ವದಿಂದ ಅಮೃತಕಾಲದಲ್ಲಿ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿ ಹಾಡಲಿ ಎಂಬುದು ನನ್ನ ಶುಭ ಹಾರೈಕೆ ನೀವು ಯಾವಾಗಲೂ ಆರೋಗ್ಯವಾಗಿ, ಸಂತೋಷವಾಗಿರಲೆಂದು ಹಾರೈಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಗೃಹ ಸಚಿವ ಅಮಿತ್ ಶಾ ಟ್ವೀಟ್​
ದೃದೃಷ್ಟು, ದಣಿವರಿಯದ ವ್ಯಕ್ತಿ, ನಿಸ್ವಾರ್ಥ ಸೇವೆಯ ಮೂಲಕ ಕೋಟ್ಯಂತರ ಜನರ ಜೀವನದಲ್ಲಿ ಸಮೃದ್ಧಿ ಹಾಗೂ ವಿಶ್ವಾಸವನ್ನು ತಂದೆ ದೇಶದ ಜನಪ್ರಿಯ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಬರೆದಿದ್ದಾರೆ.

ಸಚಿವ ರಾಜ್​ನಾಥ್ ಸಿಂಗ್ ಅಭಿನಂದನೆ

 

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾರಿಂದ ಶುಭಾಶಯ

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ