ನವದೆಹಲಿ, ನವೆಂಬರ್ 8: ಸ್ಥಳೀಯ ಉತ್ಪನ್ನಗಳ ತಯಾರಕರಿಗೆ ಹಾಗೂ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದನ್ನು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ದೀಪಾವಳಿ (Diwali) ಹಬ್ಬದ ಪ್ರಯುಕ್ತ ನಮೋ ಆ್ಯಪ್ನಲ್ಲಿ (NaMo app) ಪ್ರಚಾರ ಅಭಿಯಾನವೊಂದನ್ನು ಘೋಷಿಸಿದ್ದಾರೆ. ಇದರಂತೆ ದೀಪಾಳಿಗಾಗಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ಆ ವಸ್ತುವಿನೊಂದಿಗೆ ಅಥವಾ ಅದರ ತಯಾರಕರೊಂದಿಗೆ ಸೆಲ್ಫಿ ತೆಗೆದು ನಮೋ ಆ್ಯಪ್ನಲ್ಲಿ ಪೋಸ್ಟ್ ಮಾಡುವಂತೆ ನಾಗರಿಕರ ಬಳಿ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ಥಳೀಯ ಉತ್ಪನ್ನಗಳ ಬಳಕೆಗೆ ಮನವಿ ಮಾಡಿದ್ದಾರೆ.
‘ಈ ದೀಪಾವಳಿಯಲ್ಲಿ, ನಮೋ ಅಪ್ಲಿಕೇಶನ್‌ನಲ್ಲಿ #VocalForLocal ಥ್ರೆಡ್‌ಗಳೊಂದಿಗೆ ಭಾರತದ ಉದ್ಯಮಶೀಲತೆ ಮತ್ತು ಸೃಜನಶೀಲ ಮನೋಭಾವದ ಉತ್ಸಾವನ್ನು ಆಚರಿಸೋಣ. ಸ್ಥಳೀಯವಾಗಿ ತಯಾರಿಸಲಾದ ಉತ್ಪನ್ನಗಳನ್ನು ಖರೀದಿಸಿ ಮತ್ತು ನಂತರ ಉತ್ಪನ್ನ ಅಥವಾ ತಯಾರಕರೊಂದಿಗೆ ಸೆಲ್ಫಿ ತೆಗೆದು ನಮೋ ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಮಾಡಿ. ನಿಮ್ಮ ಸಾಲಿಗೆ ಸೇರಿಕೊಳ್ಳಲು ಮತ್ತು ಸಕಾರಾತ್ಮಕ ಮನೋಭಾವವನ್ನು ಎಲ್ಲೆಡೆ ಹರಡುವಂತೆ ಮಾಡಲು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ಆಹ್ವಾನಿಸಿ. ಸ್ಥಳೀಯ ಪ್ರತಿಭೆಗಳನ್ನು ಬೆಂಬಲಿಸಲು, ಭಾರತೀಯರ ಸೃಜನಶೀಲತೆಯನ್ನು ಪ್ರೋತ್ಸಾಹಿಸಲು ಮತ್ತು ನಮ್ಮ ಸಂಪ್ರದಾಯಗಳನ್ನು ಪ್ರವರ್ಧಮಾನಕ್ಕೆ ತರಲು ಡಿಜಿಟಲ್ ಮಾಧ್ಯಮದ ಶಕ್ತಿಯನ್ನು ಬಳಸೋಣ’ ಎಂದು ಮೋದಿ ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಹೀಗೆ ಸಾರ್ವಜನಿಕರು ನಮೋ ಆ್ಯಪ್ನಲ್ಲಿ ಅಪ್ಲೋಡ್ ಮಾಡಿದ ಸೆಲ್ಫಿಗಳ ಪೈಕಿ ಆಯ್ದ ಕೆಲವನ್ನು ಪ್ರಧಾನಿಯವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ: Vocal For Local: ‘ಅನುಪಮಾ’ ದೀಪಾವಳಿಯ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ; ವಿಶೇಷವೇನು?
This Diwali, let us celebrate India’s entrepreneurial and creative spirit with #VocalForLocal threads on NaMo app. https://t.co/NoVknVXclo
Buy products which have been made locally and then post a selfie with the product or the maker on the NaMo App. Invite your friends and…
— Narendra Modi (@narendramodi) November 8, 2023
ಜನಪ್ರಿಯ ಕಿರುತೆರೆ ಧಾರಾವಾಹಿ ‘ಅನುಪಮಾ’ದಲ್ಲಿ ರೂಪಾಲಿ ಗಂಗೂಲಿಯವರು ಸ್ಥಳೀಯ ಉತ್ಪನ್ನಗಳೊಂದಿಗೆ ವಿಶೇಷ ರೀತಿಯಲ್ಲಿ ದೀಪಾವಳಿ ಆಚರಿಸಿಕೊಂಡಿದ್ದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಅನುಪಮಾ’ ರೀತಿಯಲ್ಲಿ ಜನರು ದೀಪಾವಳಿಯನ್ನು ಆಚರಿಸಬೇಕು ಎಂದು ಮನವಿಯನ್ನೂ ಮಾಡಿದ್ದರು. ‘ಅನುಪಮಾ’ ದೀಪಾವಳಿ ವಿಡಿಯೋ ಕೇಂದ್ರ ಸರ್ಕಾರದ ‘ವೋಕಲ್ ಫಾರ್ ಲೋಕಲ್’, ‘ಮೇಕ್ ಇನ್ ಇಂಡಿಯಾ’, ‘ಡಿಜಿಟಲ್ ಇಂಡಿಯಾ’ ಮತ್ತು ‘ಆತ್ಮನಿರ್ಭರ್ ಭಾರತ್’ಗಳ ಒಂದು ನೋಟವನ್ನು ಒಳಗೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ