ದೆಹಲಿ ವಾಯು ಮಾಲಿನ್ಯ: ಅವಧಿಗೂ ಮುನ್ನವೇ ಶಾಲೆಗಳಿಗೆ ಚಳಿಗಾಲದ ರಜೆ ಘೋಷಣೆ

ಒಂದು ವಾರದಿಂದ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿರುವುದರಿಂದ ದೆಹಲಿ ಸರ್ಕಾರವು ಶಾಲೆಗಳಿಗೆ ನವೆಂಬರ್ 9 ರಿಂದ 18 ರವರೆಗೆ  ರಜೆಯನ್ನು ಘೋಷಿಸಿದೆ. ಪ್ರತಿ ವರ್ಷವೂ ಡಿಸೆಂಬರ್​ನಲ್ಲಿ ತುಂಬಾ ಚಳಿ ಇರುವ ಕಾರಣ ಒಂದು ವಾರಗಳ ಕಾಲ ಚಳಿಗಾಲದ ರಜೆ ನೀಡಲಾಗುತ್ತಿತ್ತು. ಆದರೆ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿರುವ ಕಾರಣ ನವೆಂಬರ್ 9-18 ರವರೆಗೆ ರಜೆ ಘೋಷಿಸಲಾಗಿದೆ.

ವಾಯು ಮಾಲಿನ್ಯImage Credit source: Mint
Follow us
ನಯನಾ ರಾಜೀವ್
|

Updated on:Nov 08, 2023 | 2:28 PM

ಒಂದು ವಾರದಿಂದ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿರುವುದರಿಂದ ದೆಹಲಿ ಸರ್ಕಾರವು ಶಾಲೆಗಳಿಗೆ ನವೆಂಬರ್ 9 ರಿಂದ 18 ರವರೆಗೆ  ರಜೆಯನ್ನು ಘೋಷಿಸಿದೆ. ಪ್ರತಿ ವರ್ಷವೂ ಡಿಸೆಂಬರ್​ನಲ್ಲಿ ತುಂಬಾ ಚಳಿ ಇರುವ ಕಾರಣ ಒಂದು ವಾರಗಳ ಕಾಲ ಚಳಿಗಾಲದ ರಜೆ ನೀಡಲಾಗುತ್ತಿತ್ತು. ಆದರೆ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿರುವ ಕಾರಣ ನವೆಂಬರ್ 9-18 ರವರೆಗೆ ರಜೆ ಘೋಷಿಸಲಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ದ ಅಂಕಿಅಂಶಗಳ ಪ್ರಕಾರ ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಬೆಳಿಗ್ಗೆ 7 ಗಂಟೆಗೆ 421 ದಾಖಲಾಗಿದೆ.

ಆನಂದ್ ವಿಹಾರ್, ದ್ವಾರಕಾ, ಶಾದಿಪುರ್, ಮಂದಿರ ಮಾರ್ಗ, ಐಟಿಒ, ಆರ್‌ಕೆ ಪುರಂ, ಪಂಜಾಬಿ ಬಾಗ್, ಉತ್ತರ ಕ್ಯಾಂಪಸ್, ಮಥುರಾ ರಸ್ತೆ, ರೋಹಿಣಿ, ಪಟ್‌ಪರ್‌ಗಂಜ್, ಓಖ್ಲಾ, ಇಂಡಿಯಾ ಗೇಟ್, ಮುಂಡ್ಕಾ ಸೇರಿದಂತೆ ಹಲವಾರು ವಾಯು ನಿಗಾ ಕೇಂದ್ರಗಳು ಬೆಳಗ್ಗೆ 6 ಗಂಟೆಗೆ 400 ಕ್ಕಿಂತ ಹೆಚ್ಚಿನ AQI ದಾಖಲಿಸಿವೆ.

ಮತ್ತಷ್ಟು ಓದಿ:  Delhi Air Pollution: ದೆಹಲಿ ವಾಯು ಮಾಲಿನ್ಯ, ಪಂಜಾಬ್​ಗೆ ಸುಪ್ರೀಂ ಛೀಮಾರಿ, ಹುಲ್ಲು ಸುಡುವುದನ್ನು ನಿಲ್ಲಿಸಲು ಸೂಚನೆ

ಆನಂದ್ ವಿಹಾರ್‌ನಲ್ಲಿ ಎಕ್ಯೂಐ 452, ಆರ್‌ಕೆ ಪುರಂನಲ್ಲಿ 433, ಪಂಜಾಬಿ ಬಾಗ್‌ನಲ್ಲಿ 460 ಮತ್ತು ಐಟಿಒದಲ್ಲಿ 413 ದಾಖಲಾಗಿದೆ. ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 10 ಮತ್ತು 12ನೇ ತರಗತಿಗಳನ್ನು ಹೊರತುಪಡಿಸಿ ದೈಹಿಕ ತರಗತಿಗಳನ್ನು ನವೆಂಬರ್ 10ರವರೆಗೆ ಸ್ಥಗಿತಗೊಳಿಸುವಂತೆ ದೆಹಲಿಯ ಎಲ್ಲಾ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದರು.

ಶಾಲೆಗಳನ್ನು ಮುಚ್ಚುವುದರಿಂದ ವಿದ್ಯಾರ್ಥಿಗಳ ಅಧ್ಯಯನದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದನ್ನು ತಡೆಯಲು, ಚಳಿಗಾಲದ ರಜಾದಿನವನ್ನು ಈ ರಜೆಗಳಿಗೆ ಸರಿಹೊಂದಿಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:27 pm, Wed, 8 November 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್