ತಮಿಳುನಾಡು: ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ರೈಲ್ವೆ ಪೊಲೀಸ್​ ಕಾನ್​ಸ್ಟೆಬಲ್ ಆತ್ಮಹತ್ಯೆ

ತಮಿಳುನಾಡಿನ ತಿರುಚ್ಚಿ ರೈಲು ನಿಲ್ದಾಣದಲ್ಲಿ ರೈಲ್ವೇ ಸಂರಕ್ಷಣಾ ಪಡೆಯ (ಆರ್‌ಪಿಎಫ್) ಹೆಡ್ ಕಾನ್‌ಸ್ಟೆಬಲ್ (40) ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2006 ರಲ್ಲಿ ಆರ್‌ಪಿಎಫ್‌ಗೆ ಸೇರ್ಪಡೆಗೊಂಡ ಮಂಜುನಾಥ್ ಅವರನ್ನು ತಿರುಚ್ಚಿ ರೈಲ್ವೆ ನಿಲ್ದಾಣಕ್ಕೆ ನಿಯೋಜಿಸಲಾಗಿತ್ತು. ಮಂಗಳವಾರ ರಾತ್ರಿ ಕೊಲ್ಲಂನಿಂದ ಚೆನ್ನೈಗೆ ತೆರಳುತ್ತಿದ್ದ ರೈಲು ಬರುತ್ತಿದ್ದಂತೆ ಕರ್ತವ್ಯ ನಿರತರಾಗಿದ್ದಾಗ ರೈಲ್ವೇ ಹಳಿ ಮೇಲೆ ತಲೆ ಇಟ್ಟಿದ್ದಾರೆ  ಇವರ ತಲೆ ಮೇಲೆ ರೈಲು ಹರಿದು ಕಾನ್​ಸ್ಟೆಬಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಮಿಳುನಾಡು: ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ರೈಲ್ವೆ ಪೊಲೀಸ್​ ಕಾನ್​ಸ್ಟೆಬಲ್ ಆತ್ಮಹತ್ಯೆ
Image Credit source: India Today
Follow us
ನಯನಾ ರಾಜೀವ್
|

Updated on: Nov 08, 2023 | 1:04 PM

ತಮಿಳುನಾಡಿನ ತಿರುಚ್ಚಿ ರೈಲು ನಿಲ್ದಾಣದಲ್ಲಿ ರೈಲ್ವೇ ಸಂರಕ್ಷಣಾ ಪಡೆಯ (ಆರ್‌ಪಿಎಫ್) ಹೆಡ್ ಕಾನ್‌ಸ್ಟೆಬಲ್ (40) ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2006 ರಲ್ಲಿ ಆರ್‌ಪಿಎಫ್‌ಗೆ ಸೇರ್ಪಡೆಗೊಂಡ ಮಂಜುನಾಥ್ ಅವರನ್ನು ತಿರುಚ್ಚಿ ರೈಲ್ವೆ ನಿಲ್ದಾಣಕ್ಕೆ ನಿಯೋಜಿಸಲಾಗಿತ್ತು. ಮಂಗಳವಾರ ರಾತ್ರಿ ಕೊಲ್ಲಂನಿಂದ ಚೆನ್ನೈಗೆ ತೆರಳುತ್ತಿದ್ದ ರೈಲು ಬರುತ್ತಿದ್ದಂತೆ ಕರ್ತವ್ಯ ನಿರತರಾಗಿದ್ದಾಗ ರೈಲ್ವೇ ಹಳಿ ಮೇಲೆ ತಲೆ ಇಟ್ಟಿದ್ದಾರೆ  ಇವರ ತಲೆ ಮೇಲೆ ರೈಲು ಹರಿದು ಕಾನ್​ಸ್ಟೆಬಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆರ್‌ಪಿಎಫ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಂಜುನಾಥನ ಶವವನ್ನು ಹೊರತೆಗೆದ ನಂತರ ಶವಪರೀಕ್ಷೆಗೆ ಕಳುಹಿಸಲಾಗಿದೆ. ಆತ್ಮಹತ್ಯೆಗೆ ಕಾರಣ ಏನೆಂಬುದರ ಕುರಿತು ತನಿಖೆ ಆರಂಭಿಸಲಾಗಿದೆ.

ಮತ್ತೊಂದು ಘಟನೆ: ರೈಲಿನಲ್ಲಿ ಶವದೊಂದಿಗೆ ಪ್ರಯಾಣಿಸಿದ ಜನ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲಿನ ಜನರಲ್​ ಕೋಚ್​ನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಉಳಿದ ಪ್ರಯಾಣಿಕರು ಅನಿವಾರ್ಯವಾಗಿ ಶವದ ಜತೆ ಸುಮಾರು 600 ಕಿಮೀ ಪ್ರಯಾಣಿಸಲು ಒತ್ತಾಯಿಸಲಾಯಿತು.

ರೈಲು ಚೆನ್ನೈನಿಂದ ಹಜರತ್ ನಿಜಾಮುದ್ದೀನ್‌ಗೆ ತೆರಳುತ್ತಿತ್ತು. ಪ್ರಯಾಣಿಕರು ರೈಲ್ವೇ ಅಧಿಕಾರಿಗಳಿಗೆ ಹಲವು ಬಾರಿ ಮುನ್ಸೂಚನೆ ನೀಡಿದರೂ, ಅವರು ಉತ್ತರ ಪ್ರದೇಶದ ಝಾನ್ಸಿ ತಲುಪುವವರೆಗೂ ಶವವನ್ನು ತೆಗೆಯಲಿಲ್ಲ, ಅಲ್ಲಿ ಅದನ್ನು ಸರ್ಕಾರಿ ರೈಲ್ವೆ ಪೊಲೀಸರು (GRP) ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಮತ್ತಷ್ಟು ಓದಿ: ಚಲಿಸುತ್ತಿದ್ದ ಜೈಪುರ ಎಕ್ಸ್​ಪ್ರೆಸ್​ ರೈಲಿನಲ್ಲಿ ಗುಂಡಿನ ದಾಳಿ, ನಾಲ್ವರು ಸಾವು

ಉತ್ತರ ಪ್ರದೇಶದ ಬಂದಾ ಜಿಲ್ಲೆಯ 36 ವರ್ಷದ ರಾಮ್‌ಜೀತ್ ಯಾದವ್ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಅವರ ಸೋದರ ಮಾವ ಗೋವರ್ಧನರೊಂದಿಗೆ ಮರಳಿ ಬಂದಾಗೆ ಪ್ರಯಾಣಿಸುತ್ತಿದ್ದರು.

ಭಾನುವಾರ, ರೈಲು ನಾಗ್ಪುರ ತಲುಪಿದಾಗ ರಾಮ್‌ಜೀತ್ ಅವರ ಆರೋಗ್ಯವು ಹಠಾತ್ತನೆ ಹದಗೆಟ್ಟಿತು ಮತ್ತು ಅವರು ರೈಲಿನಲ್ಲೇ ಸಾವನ್ನಪ್ಪಿದ್ದಾರೆ ಎಂದು ಗೋವರ್ಧನ್ ಹೇಳಿದರು. ಆದರೆ ಹಲವಾರು ಪ್ರಯತ್ನಗಳ ಹೊರತಾಗಿಯೂ ಅವರನ್ನು ಬದುಕಿಸುವಲ್ಲಿ ವಿಫಲರಾದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ