‘ಒನ್ ನೇಷನ್, ಒನ್ ಮಾರ್ಕೆಟ್’, ಅನ್ನದಾತರಿಗೆ ಮೋದಿ ಸರ್ಕಾರದ ಭರ್ಜರಿ ಗಿಫ್ಟ್!
ದೆಹಲಿ: ಮೋದಿ ಸರ್ಕಾರ ಕೊರೊನಾ ಕಷ್ಟಕಾಲದಲ್ಲಿ ರೈತರಿಗೆ ನೆರವಾಗುವ ಕಾಯ್ದೆ ಜಾರಿಗೆ ತಂದಿದೆ. ಅಂದಹಾಗೆ ಅಗತ್ಯವಸ್ತು ಕಾಯ್ದೆಗೆ ಸದ್ಯ ಕೇಂದ್ರದಿಂದ ತಿದ್ದುಪಡಿ ತರಲಾಗಿದೆ. ಹಾಗಾದ್ರೆ ಮಾರುಕಟ್ಟೆ ಮೇಲೆ ಇದರ ಎಫೆಕ್ಟ್ ಏನು? ರೈತರಿಗೆ ಇದರಿಂದ ಆಗುವ ಲಾಭ ಏನು? ಗ್ರಾಹಕರ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ.. ಅದ್ಯಾವಾಗ ಪೀಡೆ ‘ಕೊರೊನಾ’ ಚೀನಾ ಅನ್ನೋ ವೈರಸ್ಗಳ ಕಾರ್ಖಾನೆಯಿಂದ ಭಾರತದತ್ತ ತೂರಿ ಬಂತೋ ಗೊತ್ತಿಲ್ಲ. ಭಾರತದ ಪರಿಸ್ಥಿತಿ ಹಾಗೂ ಆರ್ಥಿಕ ಸ್ಥಿತಿಗತಿ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಸಿಲುಕುತ್ತಲೇ ಸಾಗಿದೆ. ಅನ್ನದಾತ […]
ದೆಹಲಿ: ಮೋದಿ ಸರ್ಕಾರ ಕೊರೊನಾ ಕಷ್ಟಕಾಲದಲ್ಲಿ ರೈತರಿಗೆ ನೆರವಾಗುವ ಕಾಯ್ದೆ ಜಾರಿಗೆ ತಂದಿದೆ. ಅಂದಹಾಗೆ ಅಗತ್ಯವಸ್ತು ಕಾಯ್ದೆಗೆ ಸದ್ಯ ಕೇಂದ್ರದಿಂದ ತಿದ್ದುಪಡಿ ತರಲಾಗಿದೆ. ಹಾಗಾದ್ರೆ ಮಾರುಕಟ್ಟೆ ಮೇಲೆ ಇದರ ಎಫೆಕ್ಟ್ ಏನು? ರೈತರಿಗೆ ಇದರಿಂದ ಆಗುವ ಲಾಭ ಏನು? ಗ್ರಾಹಕರ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ..
ಅದ್ಯಾವಾಗ ಪೀಡೆ ‘ಕೊರೊನಾ’ ಚೀನಾ ಅನ್ನೋ ವೈರಸ್ಗಳ ಕಾರ್ಖಾನೆಯಿಂದ ಭಾರತದತ್ತ ತೂರಿ ಬಂತೋ ಗೊತ್ತಿಲ್ಲ. ಭಾರತದ ಪರಿಸ್ಥಿತಿ ಹಾಗೂ ಆರ್ಥಿಕ ಸ್ಥಿತಿಗತಿ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಸಿಲುಕುತ್ತಲೇ ಸಾಗಿದೆ. ಅನ್ನದಾತ ಕೂಡ ಈ ಸಂಕಷ್ಟದ ಸುಳಿಗೆ ಸಿಲುಕಿ ನರಳುತ್ತಿದ್ದಾನೆ. ಆದರೆ ಇದೆಲ್ಲವನ್ನೂ ಸರಿಪಡಿಸಲು ಕೇಂದ್ರದ ಮೋದಿ ಸರ್ಕಾರ ಮುಂದಾಗಿದ್ದು, ಹಲವು ಕ್ರಮ ಕೈಗೊಂಡಿದೆ. ಇದೀಗ ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಮೇಜರ್ ಸರ್ಜರಿ ಮಾಡ್ತಿದೆ.
ದೇಶದ ಕೋಟ್ಯಂತರ ಅನ್ನದಾತರಿಗೆ ಮೋದಿ ಸರ್ಕಾರದ ಭರ್ಜರಿ ಗಿಫ್ಟ್! ಅಷ್ಟಕ್ಕೂ ಕೊರೊನಾ ಕಷ್ಟಕಾಲದಲ್ಲಿ ಬರೊಬ್ಬರಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿರುವ ಕೇಂದ್ರಸರ್ಕಾರ ಒಂದೊಂದೇ ಯೋಜನೆಗಳನ್ನ ಜಾರಿಗೆ ತರ್ತಿದೆ. ಈ ಮೂಲಕ ಆರ್ಥಿಕಸ್ಥಿತಿ ಸುಧಾರಿಸಲು ಮುಂದಾಗಿದೆ. ಇನ್ನು ಕೃಷಿ ವಲಯದ ಸುಧಾರಣೆಗಾಗಿ, 1955ರ ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಈ ಮೂಲಕ ರೈತರು ತಮ್ಮ ಉತ್ಪನ್ನವನ್ನು ತಮ್ಮ ರಾಜ್ಯದಿಂದ ಹೊರಗೂ ಮಾರಾಟ ಮಾಡಲು ಅನುವು ಮಾಡಿಕೊಟ್ಟಿದೆ. ಸ್ಥಳೀಯ ‘ಎಂಪಿಎಂಸಿ’ ಮಾರುಕಟ್ಟೆಯಲ್ಲೇ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂಬ ನಿರ್ಬಂಧ ತೆಗೆದುಹಾಕಿದೆ. ದೇಶದ ಅನ್ನದಾತರಿಗೆ ಈ ಮೂಲಕ ಮೋದಿ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ.
ದಶಕಗಳ ಸಮಸ್ಯೆಗೆ ಎಳ್ಳುನೀರು.. ಸಂಕಷ್ಟದಿಂದ ಅನ್ನದಾತ ಪಾರು!? ಅಂದಹಾಗೆ ದೇಶದ ರೈತರು ಹಲವು ದಶಕಗಳಿಂದ ತಮ್ಮ ಬೆಳೆಗಳನ್ನು ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ ಅಂದ್ರೆ ಎಪಿಎಂಸಿಗಳಲ್ಲಿ ಮಾರಾಟ ಮಾಡ್ತಿದ್ರು. ಈ ರೀತಿಯ ಮಾರುಕಟ್ಟೆ ವ್ಯವಸ್ಥೆಯಿಂದ ರೈತರಿಗೆ ಅನ್ಯಾಯ ಆಗ್ತಿದೆ ಅನ್ನೋ ಆರೋಪಗಳಿದ್ದವು.
ಈ ಹಿನ್ನೆಲೆಯಲ್ಲಿ ಮಹತ್ವದ ತಿದ್ದುಪಡಿಗೆ ಮುಂದಾಗಿರುವ ಕೇಂದ್ರ, ಎಂಪಿಎಂಸಿಯಲ್ಲೇ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂಬ ನಿಯಮವನ್ನು ಅಧಿಕೃತವಾಗಿ ಮುರಿದಿದೆ. ಇನ್ಮುಂದೆ ದೇಶದ ಯಾವ ಪ್ರದೇಶದ ರೈತರಾದರೂ, ಇನ್ಯಾವುದೋ ರಾಜ್ಯಕ್ಕೆ ತೆರಳಿ ತಮ್ಮ ಉತ್ಪನ್ನಗಳನ್ನ ಮಾರಬಹುದಾಗಿದೆ. ಈ ಮೂಲಕ ದಶಕಗಳ ಸಮಸ್ಯೆಗೆ ಎಳ್ಳುನೀರು ಬಿಟ್ಟು, ಸಂಕಷ್ಟದಿಂದ ಅನ್ನದಾತರನ್ನ ಪಾರು ಮಾಡಲಾಗಿದೆ.
ಒಟ್ನಲ್ಲಿ ಅಗತ್ಯವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಆಲೂಗಡ್ಡೆ, ಈರುಳ್ಳಿ, ಬೇಳೆಕಾಳು ಸೇರಿದಂತೆ ಎಣ್ಣೆಯನ್ನ ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಟ್ಟಿದೆ. ಇಷ್ಟುದಿನ ಮಧ್ಯವರ್ತಿಗಳ ಬಳಿಯೇ ರೈತರು ತಮ್ಮ ಉತ್ಪನ್ನ ಮಾರಬೇಕಿತ್ತು. ಇದರಿಂದ ನ್ಯಾಯಯುತ ಬೆಲೆ ಅಸಾಧ್ಯವಾಗಿತ್ತು ಎಂಬ ಆರೋಪವಿತ್ತು. ಇದೀಗ ಕಾಯ್ದೆಗೆ ತಿದ್ದುಪಡಿ ತಂದು ನಿರ್ಬಂಧಗಳಿಗೆ ಎಳ್ಳುನೀರು ಬಿಡಲಾಗಿದೆ. ಇದು ರೈತರಿಗೆ ಅದೆಷ್ಟು ಸಹಕಾರಿ ಅನ್ನೋದನ್ನ ಕಾದು ನೋಡ್ಬೇಕು.
Published On - 7:00 am, Thu, 4 June 20