ನಿಸರ್ಗ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿ

ದೆಹಲಿ: ಕೊರೊನಾ ಕೂಪದಲ್ಲಿ ಭಯದಿಂದ ನರಳುವಾಗಲೇ ಸೈಕ್ಲೋನ್​ಗಳ ಸರಮಾಲೆ ಭಾರತದ ಕರಾವಳಿಯನ್ನು ತತ್ತರಿಸುವಂತೆ ಮಾಡಿದೆ. ನಿನ್ನೆ ಕೂಡ ಸುಳಿಗಾಳಿಯೊಂದು ಭಾರತದ ಕರಾವಳಿಯನ್ನ ಸೋಕಿ ಹೋಗಿದೆ. ಅರಬ್ಬಿ ಸಮುದ್ರದಿಂದ ಸುರುಳಿ ಸುತ್ತುತ್ತಾ ಬಂದ ರಾಕ್ಷಸ ಗಾಳಿ, ಅಕ್ಷರಶಃ ರಕ್ಕಸನಂತೆಯೇ ಭಾರತದ ನೆಲಕ್ಕೆ ಅಪ್ಪಳಿಸಿ ನೂರಾರು ಅವಾಂತರ ಸೃಷ್ಟಿಸಿದೆ. ಈ ರಾಕ್ಷಸ ಗಾಳಿಗೆ ಮನೆಯ ಛಾವಣಿಗಳು ಹಾರಿ ಹೋಗಿವೆ. ಮರಗಳು ಧರೆಗೆ ಉರುಳಿವೆ. ಇದಿಷ್ಟೇ ಅಲ್ಲ ನಿಂತಲ್ಲೇ ಕಾರು, ಬೈಕ್ ಪಲ್ಟಿಯಾಗಿವೆ. ವಿದ್ಯುತ್ ಕಂಬಗಳು ನಿಸರ್ಗ ಚಂಡಮಾರುತದ ಚಂಡಿ ಅವತಾರವನ್ನ […]

ನಿಸರ್ಗ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿ
Follow us
ಆಯೇಷಾ ಬಾನು
|

Updated on:Jun 04, 2020 | 3:15 PM

ದೆಹಲಿ: ಕೊರೊನಾ ಕೂಪದಲ್ಲಿ ಭಯದಿಂದ ನರಳುವಾಗಲೇ ಸೈಕ್ಲೋನ್​ಗಳ ಸರಮಾಲೆ ಭಾರತದ ಕರಾವಳಿಯನ್ನು ತತ್ತರಿಸುವಂತೆ ಮಾಡಿದೆ. ನಿನ್ನೆ ಕೂಡ ಸುಳಿಗಾಳಿಯೊಂದು ಭಾರತದ ಕರಾವಳಿಯನ್ನ ಸೋಕಿ ಹೋಗಿದೆ. ಅರಬ್ಬಿ ಸಮುದ್ರದಿಂದ ಸುರುಳಿ ಸುತ್ತುತ್ತಾ ಬಂದ ರಾಕ್ಷಸ ಗಾಳಿ, ಅಕ್ಷರಶಃ ರಕ್ಕಸನಂತೆಯೇ ಭಾರತದ ನೆಲಕ್ಕೆ ಅಪ್ಪಳಿಸಿ ನೂರಾರು ಅವಾಂತರ ಸೃಷ್ಟಿಸಿದೆ.

ಈ ರಾಕ್ಷಸ ಗಾಳಿಗೆ ಮನೆಯ ಛಾವಣಿಗಳು ಹಾರಿ ಹೋಗಿವೆ. ಮರಗಳು ಧರೆಗೆ ಉರುಳಿವೆ. ಇದಿಷ್ಟೇ ಅಲ್ಲ ನಿಂತಲ್ಲೇ ಕಾರು, ಬೈಕ್ ಪಲ್ಟಿಯಾಗಿವೆ. ವಿದ್ಯುತ್ ಕಂಬಗಳು ನಿಸರ್ಗ ಚಂಡಮಾರುತದ ಚಂಡಿ ಅವತಾರವನ್ನ ಬಿಡಿಸಿ ಬಿಡಿಸಿ ಹೇಳ್ತಿವೆ.

ಮತ್ತೊಂದು ಮಹಾವಿಪತ್ತಿನಿಂದ ಮುಂಬೈ ಜಸ್ಟ್ ಮಿಸ್! ಮುಂಬೈ ನಗರ ಕೊರೊನಾದಿಂದ ನಲುಗಿದೆ. ದಿನವೊಂದಕ್ಕೆ ಸಾವಿರಾರು ಜನರಿಗೆ ಕೊರೊನಾ ಅಟ್ಯಾಕ್ ಆಗುತ್ತಿದೆ. ಈಮಧ್ಯೆ ಮುಂಬೈಗೆ ಮತ್ತೊಂದು ಆತಂಕ ಶುರುವಾಗಿತ್ತು.‌ ಭಾರಿ ಭೀತಿ ಹುಟ್ಟುಹಾಕಿದ್ದ ನಿಸರ್ಗ ಸೈಕ್ಲೋನ್‌ ಹೊಡೆತದಿಂದ ಮುಂಬೈ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ನಿನ್ನೆ ಮಧ್ಯಾಹ್ನ 1 ಗಂಟೆ ವೇಳೆಗೆ ಮಹಾರಾಷ್ಟ್ರದ ಅಲಿಬಾಗ್​ಗೆ ಪ್ರವೇಶಿಸಿದ ಸೈಕ್ಲೋನ್‌ ತನ್ನ ವೇಗವನ್ನ ತಗ್ಗಿಸಿದ್ದು, ಭಾರಿ ಅನಾಹುತ ತಪ್ಪಿದೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ಸೈಕ್ಲೋನ್‌ಗೆ ಇಬ್ಬರು ಬಲಿಯಾಗಿದ್ದಾರೆ. ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ವಿದ್ಯುತ್ ತಂತಿ ಸ್ಪರ್ಶಿಸಿ 2 ಜಾನುವಾರು ಕೂಡ ಮೃತಪಟ್ಟಿವೆ.

150ರ ಲೆಕ್ಕ.. 40 ಕಿಲೋಮೀಟರ್ ಪಕ್ಕಾ! ಅಂದಹಾಗೆ ಮಹಾರಾಷ್ಟ್ರ ಪ್ರವೇಶಿಸುವ ಮುನ್ನ ನಿಸರ್ಗ ಸೈಕ್ಲೋನ್ ದಕ್ಷಿಣದ ಕಡೆ ತನ್ನ ಪಥ ಬದಲಿಸಿದ್ದು ಇದರ ಪ್ರಭಾವ ಕಡಿಮೆಯಾಗಲು ಕಾರಣವಾಗಿದೆಯಂತೆ. ಅರಬ್ಬಿ ಸಮುದ್ರದಲ್ಲಿ ಹುಟ್ಟಿದ್ದ ನಿಸರ್ಗ ಸೈಕ್ಲೋನ್‌ ಮಹಾರಾಷ್ಟ್ರದಲ್ಲಿ ಭಾರೀ ಆತಂಕ ಮೂಡಿಸಿತ್ತು. ಮೊದಲೇ ಕೊರೊನಾದಿಂದ ಕಂಗಾಲಾಗಿದ್ದ ಮುಂಬೈಗೆ ನಿಸರ್ಗ ಮತ್ತೊಂದು ಶಾಪವಾಗುತ್ತೆ ಅಂತಾ ಹೇಳಲಾಗಿತ್ತು. ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿತ್ತು.

ಇದು 150 ಕಿಲೋ ಮೀಟರ್​ಗೂ ತಲುಪುವ ಸಾಧ್ಯತೆ ಇದೆ‌ ಎನ್ನಲಾಗಿತ್ತು. ಆದ್ರೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಅಲಿಬಾಗ್‌ ಸಮೀಪ ಭೂಮಿಗಪ್ಪಳಿಸಿದ ನಿಸರ್ಗ ಸೈಕ್ಲೋನ್‌ ತನ್ನ ವೇಗವನ್ನ 40 ಕಿಲೋ ಮೀಟರ್​ಗೆ ತಗ್ಗಿಸಿತು. ಹೀಗಾಗಿ ಮುಂಬೈ ಜನ ನಿಟ್ಟುಸಿರುಬಿಟ್ರು. ಮಹಾನಗರಿ ಮುಂಬೈನಲ್ಲಿ ಗಾಳಿ ಮತ್ತು ಮಳೆ ಆಗ್ತಿರೋದನ್ನ ಬಿಟ್ರೆ ಭಾರಿ ಅನಾಹುತಗಳು ಸಂಭವಿಸಿಲ್ಲ. ಹೀಗಿದ್ದರೂ ಮುಂಬೈನಲ್ಲಿ ಇಂದು ಮಧ್ಯಾಹ್ನದವರೆಗೂ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.

ಒಟ್ನಲ್ಲಿ ಕರಾವಳಿಗೆ ಅಪ್ಪಳಿಸುವ ಮೊದಲೇ ಭಾರಿ ಆತಂಕ ಸೃಷ್ಟಿಸಿದ್ದ ನಿಸರ್ಗ ಚಂಡಮಾರುತ ವೀಕ್ ಆಗಿದೆ. ಇದು ಅಪಾಯದ ಮುನ್ಸೂಚನೆಯಲ್ಲಿದ್ದ ಪ್ರದೇಶಗಳಲ್ಲಿ ನೆಮ್ಮದಿ ತಂದಿದೆ. ಆದ್ರೂ ಒಂದು ಬಲಿ ಪಡೆದಿರುವ ನಿಸರ್ಗ ಸೈಕ್ಲೋನ್ ಇನ್ನೂ ತಣ್ಣಗಾಗಿಲ್ಲ. ಮಧ್ಯಪ್ರದೇಶದ ಹಲವು ಜಿಲ್ಲೆಗಳು ನಿಸರ್ಗ ಸೈಕ್ಲೋನ್ ಸುಳಿಗೆ ಸಿಲುಕಿ, ಭಾರಿ ಮಳೆಯ ಪರಿಣಾಮ ಎದುರಿಸುವ ಸಾಧ್ಯತೆ ಇದೆ. ಹೀಗಾಗಿ ಅಪಾಯದ ಮುನ್ಸೂಚನೆ ಇರುವ ಪ್ರದೇಶಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

Published On - 7:49 am, Thu, 4 June 20

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ