ಘಾತುಕ ಹಾಗೂ ಭಯೋತ್ಪಾದಕ ಶಕ್ತಿಗಳು ಕೆಲಕಾಲದವರೆಗೆ ಮೆರೆದಾಡಬಹುದು; ಅವರ ಅಸ್ತಿತ್ವ ಶಾಶ್ವತವಲ್ಲ: ಪ್ರಧಾನಿ ಮೋದಿ

| Updated By: ganapathi bhat

Updated on: Aug 20, 2021 | 2:22 PM

Narendra Modi: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ, ಗುಜರಾತ್​​ನ ಸೋಮನಾಥ್​ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಸೋಮನಾಥ್ ಎಕ್ಸಿಬಿಷನ್ ಸೆಂಟರ್, ಪಾರ್ವತಿ ದೇವಾಲಯ ಸಹಿತ ವಿವಿಧ ಯೋಜನೆಗಳ ಉದ್ಘಾಟನೆ ಮಾಡಿದರು.

ಘಾತುಕ ಹಾಗೂ ಭಯೋತ್ಪಾದಕ ಶಕ್ತಿಗಳು ಕೆಲಕಾಲದವರೆಗೆ ಮೆರೆದಾಡಬಹುದು; ಅವರ ಅಸ್ತಿತ್ವ ಶಾಶ್ವತವಲ್ಲ: ಪ್ರಧಾನಿ ಮೋದಿ
ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us on

ದೆಹಲಿ: ಘಾತುಕ ಮತ್ತು ಭಯೋತ್ಪಾದಕ ಶಕ್ತಿಗಳು ಕೆಲವು ಕಾಲದವರೆಗೆ ಮೆರೆದಾಡಬಹುದು ಆದರೆ, ಅವರ ಅಸ್ತಿತ್ವ ಶಾಶ್ವತವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು (ಆಗಸ್ಟ್ 20) ಹೇಳಿದರು. ಪ್ರಧಾನಿ ಮೋದಿ ಗುಜರಾತ್​ನ ಸೋಮನಾಥ ದೇವಾಲಯಕ್ಕೆ ವರ್ಚುವಲ್ ವಿಧಾನದ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಸೋಮನಾಥ ದೇವಾಲಯದ ಉದಾಹರಣೆ ಜೊತೆಗೆ ವಿವರಿಸಿದ ಅವರು, ಆ ದೇವಾಲಯ ಶತಕಗಳಿಂದ ಹಲವು ಬಾರಿ ಹಾನಿಗೆ ಒಳಗಾಗಿದ್ದರೂ ಇನ್ನೂ ಉಳಿಯುವಲ್ಲಿ ಸಮರ್ಥವಾಗಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ, ಗುಜರಾತ್​​ನ ಸೋಮನಾಥ್​ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಸೋಮನಾಥ್ ಎಕ್ಸಿಬಿಷನ್ ಸೆಂಟರ್, ಪಾರ್ವತಿ ದೇವಾಲಯ ಸಹಿತ ವಿವಿಧ ಯೋಜನೆಗಳ ಉದ್ಘಾಟನೆ ಮಾಡಿದರು. ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರವಾದಿಗಳು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಮೋದಿ ಹೀಗೆ ತಿಳಿಸಿದರು.

ಘಾತುಕ ಕೃತ್ಯಗಳನ್ನು ಮಾಡಲು ಹಪಹಪಿಸುವ ಶಕ್ತಿಗಳು ಮತ್ತು ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಭಯೋತ್ಪಾದಕ ಮಾರ್ಗವನ್ನು ಅನುಸರಿಸುವ ಜನರು ಕೆಲವು ಕಾಲದವರೆಗೆ ಮಾತ್ರ ಮೆರೆದಾಡಬಹುದು. ಆದರೆ, ಅವರ ಅಸ್ತಿತ್ವ ಶಾಶ್ವತ ಅಲ್ಲ. ಅವರು ಮಾನವತೆಯನ್ನು ಸತತವಾಗಿ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು.

ವರ್ಚುವಲ್ ಭಾಷಣದಲ್ಲಿ ಮಾತನಾಡಿ, ದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮದ ಮಹತ್ವವನ್ನು ಕೂಡ ಒತ್ತಿ ಹೇಳಿದರು. ಇದು ಕೂಡ ಯುವಜನರಿಗೆ ಉದ್ಯೋಗವನ್ನು ನೀಡುತ್ತದೆ. ಇದರಿಂದ ನಮ್ಮ ಹಿನ್ನೆಲೆಯ ಬಗ್ಗೆಯೂ ಯುವಜನರಿಗೆ ಜ್ಞಾನ ಲಭಿಸುತ್ತದೆ. ಭಯೋತ್ಪಾದನೆಯಿಂದ ನಂಬಿಕೆಯನ್ನು ಕೆಡಹಲು ಸಾಧ್ಯವಿಲ್ಲ. ನಾವು ಇತಿಹಾಸದಿಂದ ಇದನ್ನು ಕಲಿಯಬೇಕು ಎಂದು ನರೇಂದ್ರ ಮೋದಿ ತಿಳಿಸಿದರು.

ನರೇಂದ್ರ ಮೋದಿ, ನವ ಭಾರತ ನಿರ್ಮಾಣದ ತಮ್ಮ ಆಲೋಚನೆಯನ್ನು ಹಂಚಿಕೊಂಡರು. ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ರಾಮ ಮಂದಿರ ನವ ಭಾರತದ ಭದ್ರ ಅಡಿಪಾಯ ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸೋಮನಾಥ್​​ನ ಅಭಿವೃದ್ಧಿ ಕಾರ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಅಮಿತ್ ಶಾ ಹೇಳಿದರು. ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆ ಪ್ರಕಾರ, ಸೋಮನಾಥ್ ವಾಯುವಿಹಾರವು ಸುಮಾರು 47 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಹಾಗೂ ಹಳೆ (ಜುನಾ) ಸೋಮನಾಥ ದೇವಾಲಯವು ಶ್ರೀ ಸೋಮನಾಥ್ ಟ್ರಸ್ಟ್ ಮೂಲಕ ಒಟ್ಟು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ.

ಈ ದೇವಾಲಯವನ್ನು ಇಂಧೋರ್​ನ ರಾಣಿ ಅಹಲ್ಯಾಬಾಯಿ ಪುನರ್ ನಿರ್ಮಿಸಿದ್ದಳು ಎಂದು ಹೇಳಲಾಗಿದೆ. ಇದೀಗ ಹಳೆಯ ದೇವಾಲಯವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ತೀರ್ಥಯಾತ್ರೆಗೆ ಸಹಾಯ ಆಗುವಂತೆ ದೊಡ್ಡ ಸ್ಥಳಾವಕಾಶದೊಂದಿಗೆ ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಕಚೇರಿಯಿಂದ ಆಕ್ಷೇಪ: ಪುಣೆಯ ಮೋದಿ ದೇಗುಲದಲ್ಲಿರುವ ನರೇಂದ್ರ ಮೋದಿ ಪ್ರತಿಮೆ ತೆರವು

ಅಫ್ಘಾನಿಸ್ತಾನ ತಾಲಿಬಾನ್ ವಶ: ನರೇಂದ್ರ ಮೋದಿ ಈ ಪರಿಸ್ಥಿತಿ ಊಹಿಸಿದ್ದರು; ಹಾಗಾಗಿ ಭಾರತದಲ್ಲಿ ಸಿಎಎ ಜಾರಿ: ಪ್ರತಾಪ್ ಸಿಂಹ

(PM Modi lays foundation stone for Parvati temple in Gujarat Somnath and other Projects comments on Taliban)

Published On - 2:10 pm, Fri, 20 August 21