ಟ್ರಂಪ್ ಜೊತೆ ಫೋಟೋ ತೆಗೆಸಿಕೊಳ್ಳುವಾಗ ನೆಲದ ಮೇಲಿದ್ದ ಭಾರತ ಧ್ವಜದ ಗುರುತನ್ನೆತ್ತಿ ಜೇಬಲ್ಲಿಟ್ಟುಕೊಂಡ ಮೋದಿ; ವಿಡಿಯೋ ವೈರಲ್
ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ಇಂದು ನಡೆದ ಕ್ವಾಡ್ ನಾಯಕರ ಶೃಂಗಸಭೆಯ ಗ್ರೂಪ್ ಫೋಟೋ ಕಾರ್ಯಕ್ರಮದ ವೇಳೆ, ನೆಲದ ಮೇಲೆ ಅಂಟಿಸಲಾಗಿದ್ದ ಭಾರತದ ತ್ರಿವರ್ಣ ಧ್ವಜದ ಗುರುತಿನ ಕಾಗದವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗೌರವಪೂರ್ವಕವಾಗಿ ಎತ್ತಿಕೊಂಡು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ರಾಷ್ಟ್ರಧ್ವಜಕ್ಕೆ ಅವರು ತೋರಿದ ಈ ಗೌರವದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಸಮೂಹ ಛಾಯಾಚಿತ್ರಕ್ಕಾಗಿ ವೇದಿಕೆಯ ಮೇಲೆ ನಿಲ್ಲುವಾಗ, ಪ್ರತಿಯೊಬ್ಬ ನಾಯಕರು ಎಲ್ಲಿ ನಿಲ್ಲಬೇಕು ಎಂಬುದನ್ನು ಸೂಚಿಸಲು ಆಯಾ ದೇಶದ ಧ್ವಜದ ಚಿತ್ರವಿರುವ ಸ್ಟಿಕ್ಕರ್ ಅನ್ನು ನೆಲದ ಮೇಲೆ ಹಾಕಲಾಗಿತ್ತು. ಈ ವೇಳೆ ಮೋದಿ ತೋರಿದ ರಾಷ್ಟ್ರಭಕ್ತಿ ಮೆಚ್ಚುಗೆಗೆ ಪಾತ್ರವಾಗಿದೆ.

ಮನಿಲಾ, ನವೆಂಬರ್ 17: ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆದ ಕ್ವಾಡ್ ನಾಯಕರ ಶೃಂಗಸಭೆಯ ಗ್ರೂಪ್ ಫೋಟೋ ವೇಳೆ ನೆಲದ ಮೇಲೆ ಅಂಟಿಸಲಾಗಿದ್ದ ಭಾರತದ ರಾಷ್ಟ್ರಧ್ವಜದ ಗುರುತಿನ ಕಾಗದವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗೌರವದಿಂದ ಎತ್ತಿಕೊಂಡು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ರಾಷ್ಟ್ರಧ್ವಜದ ಬಗ್ಗೆ ಪ್ರಧಾನಿ ತೋರಿದ ಗೌರವಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕ್ವಾಡ್ ಶೃಂಗಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಮುಂತಾದ ಜಾಗತಿಕ ನಾಯಕರ ಜೊತೆ ಫೋಟೋ ತೆಗೆಸಿಕೊಳ್ಳಲು ವೇದಿಕೆಯ ಮೇಲೆ ನಿಲ್ಲುವಾಗ, ಪ್ರತಿಯೊಬ್ಬ ನಾಯಕರು ನಿಲ್ಲಬೇಕಾದ ಸ್ಥಳವನ್ನು ಸೂಚಿಸಲು ಆಯಾ ದೇಶದ ಧ್ವಜದ ಗುರುತುಗಳನ್ನು ನೆಲದ ಮೇಲೆ ಇಡಲಾಗಿತ್ತು. ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ ಅವರು, ತಮ್ಮ ಕಾಲಿನ ಬಳಿ ನೆಲದ ಮೇಲೆ ಭಾರತದ ತ್ರಿವರ್ಣ ಧ್ವಜದ ಚಿಹ್ನೆ ಇರುವುದನ್ನು ಕಂಡರು. ತಕ್ಷಣವೇ ಕೆಳಕ್ಕೆ ಬಾಗಿ ಆ ಕಾಗದದ ಗುರುತನ್ನು ನೆಲದಿಂದ ಎತ್ತಿಕೊಂಡು, ಅದನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡರು.
ಇದನ್ನೂ ಓದಿ: ಮತ್ತೆ ಪ್ರಧಾನಿ ಮೋದಿಯನ್ನು ಹೊಗಳಿದ ಟ್ರಂಪ್; ‘ಗಟ್ಟಿ ವ್ಯಕ್ತಿ, ಶ್ರೇಷ್ಟ ನಾಯಕ’ ಎಂದು ಕೊಂಡಾಡಿದ ಅಮೆರಿಕ ಅಧ್ಯಕ್ಷ
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಪಕ್ಕದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಸನಾಯೆ ತಕೈಚಿ ಉಪಸ್ಥಿತರಿದ್ದರು. ಮೋದಿ ಅವರ ಈ ನಡೆಯನ್ನು ಗಮನಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಅದನ್ನು ಉಳಿಸಿಕೊಳ್ಳಿ” (ಸೇವ್ ಇಟ್) ಎಂದು ಹೇಳಿ ಮೋದಿಯವರ ಬೆನ್ನು ತಟ್ಟಿದ್ದಾರೆ.
VIDEO | Philippines: PM Narendra Modi picks up a piece of paper from the floor while standing together with Quad leaders in Manila.
(Source: Third Party)
(Full video available on PTI Videos – https://t.co/d8jp61yd2p) https://t.co/W02MUE2w5q
— Press Trust of India (@PTI_News) November 17, 2026
ಅಂತಾರಾಷ್ಟ್ರೀಯ ವೇದಿಕೆಯಲ್ಲಿಯೂ ರಾಷ್ಟ್ರಧ್ವಜದ ಚಿಹ್ನೆಯು ಕಾಲಡಿಯಲ್ಲಿ ತುಳಿಯಲ್ಪಡದಂತೆ ಎಚ್ಚರವಹಿಸಿದ ಪ್ರಧಾನಿ ಮೋದಿ ಅವರ ನಡೆಯನ್ನು ಅನೇಕರು ಕೊಂಡಾಡಿದ್ದಾರೆ. ಇದು ರಾಷ್ಟ್ರಧ್ವಜದ ಬಗ್ಗೆ ಅವರಿಗಿರುವ ಅಪಾರ ಗೌರವಕ್ಕೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




