ನೂತನ ರಾಮ ಮಂದಿರ ನಿರ್ಮಾಣವಾದ ಬಳಿಕ ಅಯೋಧ್ಯೆಯಲ್ಲಿ ಇದು ಮೊದಲ ರಾಮನವಮಿ, ಮೋದಿ ಸಂದೇಶ ಇಲ್ಲಿದೆ

|

Updated on: Apr 17, 2024 | 10:12 AM

ಅಯೋಧ್ಯೆಯ ರಾಮ ಮಂದಿರವು ದೀಪಾಲಂಕೃತವಾಗಿದೆ, ರಾಮನವಿಮಗೆ ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಬೆಳಗ್ಗೆ 3 ಗಂಟೆಯಿಂದಲೇ ರಾಮನವಮಿ ಕಾರ್ಯಕ್ರಮಗಳು ಶುರುವಾಗಿವೆ. ರಾಮ ಮಂದಿರ ನಿರ್ಮಾಣವಾದ ಬಳಿಕ ಇದೇ ಮೊದಲ ಬಾರಿಗೆ ರಾಮನವಮಿ ಆಚರಿಸುತ್ತಿದ್ದು ತುಂಬಾ ವಿಶೇಷವಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.

ನೂತನ ರಾಮ ಮಂದಿರ ನಿರ್ಮಾಣವಾದ ಬಳಿಕ ಅಯೋಧ್ಯೆಯಲ್ಲಿ ಇದು ಮೊದಲ ರಾಮನವಮಿ, ಮೋದಿ ಸಂದೇಶ ಇಲ್ಲಿದೆ
ನರೇಂದ್ರ ಮೋದಿ
Follow us on

ಅಯೋಧ್ಯೆ(Ayodhya)ಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ಇದೇ ಮೊದಲ ಬಾರಿಗೆ ರಾಮನವಮಿ(Ram Navami) ಆಚರಿಸಲಾಗುತ್ತಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ(Narendra Modi) ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು ಜನತೆಗೆ ರಾಮನವಮಿ ಶುಭಾಶಯ ತಿಳಿಸಿದ್ದಾರೆ. ಅವರು ಸರಣಿ ಟ್ವೀಟ್​ ಮಾಡಿ, ಈ ವರ್ಷದ ಆರಂಭದಲ್ಲಿ ರಾಮ ಮಂದಿರ ಉದ್ಘಾಟನೆ ನೆರವೇರಿಸಲಾಯಿತು ಇದಾದ ಬಳಿಕ ಇದು ಮೊದಲ ರಾಮನವಮಿ ಆಚರಣೆ ಮಾಡಲಾಗುತ್ತಿದೆ. ಐದು ಶತಮಾನಗಳ ಕಾಯುವಿಕೆಯ ನಂತರ ಇಂದು ಅಯೋಧ್ಯೆಯಲ್ಲಿ ಈ ರೀತಿ ರಾಮನವಮಿಯನ್ನು ಆಚರಿಸುವ ಸೌಭಾಗ್ಯ ನಮಗೆ ಸಿಕ್ಕಿದೆ.

ಅಸಂಖ್ಯಾತ ರಾಮನ ಭಕ್ತರು ಮತ್ತು ರಾಮ ಮಂದಿರ ನಿರ್ಮಾಣಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಸಂತರನ್ನು ನೆನಪಿಸಿಕೊಳ್ಳುವ ಮತ್ತು ಗೌರವ ಸಲ್ಲಿಸುವ ಸಂದರ್ಭವೂ ಆಗಿದೆ ಎಂದು ಮೋದಿ ಹೇಳಿದರು. ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ರಾಮಲಲ್ಲಾನ ಪ್ರತಿಷ್ಠಾಪನೆ ಸಮಾರಂಭವನ್ನು ಮೋದಿ ನೆನಪಿಸಿಕೊಂಡರು.

ಪ್ರಭು ಶ್ರೀರಾಮನು ಭಾರತದ ಜನರ ಹೃದಯ ಮತ್ತು ಮನಸ್ಸಿನಲ್ಲಿ ನೆಲೆಸಿದ್ದಾನೆ, ಪ್ರತಿಯೊಬ್ಬರ ಆತ್ಮದಲ್ಲಿ ಆಳವಾಗಿ ಹುದುಗಿದ್ದಾನೆ. ರಾಮಮಂದಿರದ ಮಹಾ ಉದ್ಘಾಟನೆಯ ನಂತರ ಮೊದಲ ರಾಮನವಮಿಯಂದು ಭಕ್ತರನ್ನು ಸ್ವಾಗತಿಸಲು ಅಯೋಧ್ಯೆಯನ್ನು ಅಲಂಕರಿಸಲಾಗಿದೆ.

ಮತ್ತಷ್ಟು ಓದಿ: Ram Navami: ಮಂದಿರ ನಿರ್ಮಾಣದ‌ ಬಳಿಕ ಮೊದಲ ರಾಮನವಮಿ; ಅಯೋಧ್ಯೆಯಲ್ಲಿ ಬಾಲರಾಮನ ಸ್ಪರ್ಶಿಸಲಿದೆ ಸೂರ್ಯರಶ್ಮಿ

ಇಡೀ ದೇವಾಲಯದ ಸಂಕೀರ್ಣವನ್ನು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗಿದೆ. ಸುಡು ಬಿಸಿಲಿನಲ್ಲಿ ಭಕ್ತರ ಸಂಚಾರಕ್ಕೆ ಅನುಕೂಲವಾಗುವಂತೆ ಜನ್ಮಭೂಮಿ ಮಾರ್ಗದಲ್ಲಿ ಕೆಂಪು ಹಾಸು ಹಾಸಲಾಗಿದೆ.

ಮೋದಿ ಪೋಸ್ಟ್​

ಮಂದಿರ ಉದ್ಘಾಟನೆಯಾದ ಬಳಿಕ ಆಚರಿಸುತ್ತಿರುವ ಮೊದಲ ರಾಮನವಮಿ ಆಗಿರುವ ಕಾರಣದಿಂದ ಹೆಚ್ಚಿನ ಸಂಖ್ಯೆ ರಾಮಭಕ್ತರು ಸೇರುವ ನಿರೀಕ್ಷೆಯಿದೆ. ರಾಮನವಮಿ ಸಂಭ್ರಮದಲ್ಲಿ ಅಯೋಧ್ಯೆಗೆ 40 ಲಕ್ಷ ಜನ ಭಕ್ತರು ಬರುವ ನಿರೀಕ್ಷೆಯಿದೆ. ಇಂದು ರಾಮನಿಗೆ ಉಣಬಡಿಸಲು 56 ಬಗೆಯ ಭೋಗ್ ಪ್ರಸಾದಗಳನ್ನು ಸಿದ್ಧಪಡಿಸಲಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ