ನಮಗೆ ಸ್ನೇಹವೇ ಮೊದಲು ಎಂದ ಮೋದಿ; ಮಾಲ್ಡೀವ್ಸ್​​ಗೆ ಭಾರತದಿಂದ 4,850 ಕೋಟಿ ರೂ. ಸಾಲ ಘೋಷಣೆ

'ಮಾಲ್ಡೀವ್ಸ್ ಕೇವಲ ಭಾರತದ ನೆರೆಯ ರಾಷ್ಟ್ರ ಮಾತ್ರವಲ್ಲ, ಸಹ-ಪ್ರಯಾಣಿಕ ಕೂಡ. ನಮ್ಮ ಸ್ನೇಹ ಪ್ರಕಾಶಮಾನವಾಗಿ ಉಳಿಯುತ್ತದೆ' ಎಂದು ಮಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರೊಂದಿಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ನಮಗೆ ಸ್ನೇಹವೇ ಮೊದಲು ಎಂದಿದ್ದಾರೆ. ಹಾಗೇ ಮಾಲ್ಡೀವ್ಸ್‌ಗೆ ಭಾರತದಿಂದ 4,850 ಕೋಟಿ ರೂ. ಸಾಲವನ್ನು ಘೋಷಿಸಿದ್ದಾರೆ.

ನಮಗೆ ಸ್ನೇಹವೇ ಮೊದಲು ಎಂದ ಮೋದಿ; ಮಾಲ್ಡೀವ್ಸ್​​ಗೆ ಭಾರತದಿಂದ 4,850 ಕೋಟಿ ರೂ. ಸಾಲ ಘೋಷಣೆ
Pm Modi In Male

Updated on: Jul 25, 2025 | 7:36 PM

ಮಾಲೆ, ಜುಲೈ 25: ಜುಲೈ 24ರಂದು ಭಾರತ ಮತ್ತು ಮಾಲ್ಡೀವ್ಸ್ (Maldives) ತಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದು, ರಾಜತಾಂತ್ರಿಕ ಸಂಬಂಧಗಳ 60ನೇ ವರ್ಷವನ್ನು ಆಚರಿಸುತ್ತಿವೆ. ಈ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎರಡೂ ರಾಷ್ಟ್ರಗಳ ನಡುವಿನ ಶಾಶ್ವತ ಸ್ನೇಹದ ಮಹತ್ವವನ್ನು ಪುನರುಚ್ಚರಿಸಿದ್ದಾರೆ. ದ್ವೀಪ ರಾಷ್ಟ್ರದ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸಲು 4,850 ಕೋಟಿ ರೂ. (USD 565 ಮಿಲಿಯನ್) ಮೌಲ್ಯದ ಹೊಸ ಸಾಲವನ್ನು ಘೋಷಿಸಿದ್ದಾರೆ.

ಮಾಲ್ಡೀವ್ಸ್​ನ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಮಾಲೆಗೆ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳನ್ನು ಶ್ಲಾಘಿಸಿದ್ದಾರೆ. ಎರಡೂ ರಾಷ್ಟ್ರಗಳು ತಮ್ಮ ರಾಜತಾಂತ್ರಿಕ ಸಂಬಂಧಗಳ 60 ವರ್ಷಗಳನ್ನು ಆಚರಿಸುತ್ತಿವೆ. ಈ ಸಂಬಂಧಗಳ ಬೇರುಗಳು ಆ ಇತಿಹಾಸಕ್ಕಿಂತ ಹಳೆಯವು ಮತ್ತು ಸಮುದ್ರದಷ್ಟು ಆಳವಾಗಿವೆ. ನಮಗೆ ಯಾವಾಗಲೂ ಸ್ನೇಹವೇ ಮೊದಲು ಎಂದು ಹೇಳಿದ್ದಾರೆ.

ಇದನ್ನೂ ಓದಿ: Video: ಮಾಲ್ಡೀವ್ಸ್​​ನಲ್ಲಿ ಪ್ರಧಾನಿ ಮೋದಿಗೆ ಅಧ್ಯಕ್ಷ ಮುಯಿಝು ಅವರಿಂದ ಅಭೂತಪೂರ್ವ ಸ್ವಾಗತ

ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರೊಂದಿಗೆ ಪ್ರಧಾನಿ ಮೋದಿ ಎರಡೂ ದೇಶಗಳ ಸಾಂಪ್ರದಾಯಿಕ ದೋಣಿಗಳನ್ನು ಒಳಗೊಂಡ ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು. ಇದು ಅವರ ಹಂಚಿಕೆಯ ಕಡಲ ಪರಂಪರೆಯನ್ನು ಸಂಕೇತಿಸುತ್ತದೆ. “ನಾವು ಕೇವಲ ನೆರೆಹೊರೆಯವರಲ್ಲ, ಸಹ-ಪ್ರಯಾಣಿಕರು ಕೂಡ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ” ಎಂದು ಮೋದಿ ಹೇಳಿದ್ದಾರೆ.


“ಭಾರತ ಮಾಲ್ಡೀವ್ಸ್‌ನ ಹತ್ತಿರದ ನೆರೆಹೊರೆ. ಮಾಲ್ಡೀವ್ಸ್‌ನ ಅತ್ಯಂತ ವಿಶ್ವಾಸಾರ್ಹ ಸ್ನೇಹಿತ ಎಂದು ಭಾರತ ಹೆಮ್ಮೆಪಡುತ್ತದೆ. ಅದು ಬಿಕ್ಕಟ್ಟಿನಾಗಿರಲಿ ಅಥವಾ ಸಾಂಕ್ರಾಮಿಕ ರೋಗವಾಗಲಿ ಭಾರತ ಯಾವಾಗಲೂ ಮೊದಲ ಪ್ರತಿಕ್ರಿಯೆ ನೀಡುವವರಾಗಿ ಮಾಲ್ಡೀವ್ಸ್ ಜೊತೆ ನಿಂತಿದೆ. ಅಗತ್ಯ ಸರಕುಗಳನ್ನು ಲಭ್ಯವಾಗುವಂತೆ ಮಾಡುವುದಾಗಲಿ ಅಥವಾ COVID ನಂತರ ಆರ್ಥಿಕತೆಯನ್ನು ನಿರ್ವಹಿಸುವುದಾಗಲಿ ಭಾರತ ಯಾವಾಗಲೂ ಒಟ್ಟಾಗಿ ಕೆಲಸ ಮಾಡಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ ಪ್ರದರ್ಶನ

ಮಾಲ್ಡೀವ್ಸ್‌ಗೆ ಭಾರತ 4,850 ಕೋಟಿ ರೂ. ಸಾಲವನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಎರಡೂ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಪ್ರಾರಂಭವಾಗಿದೆ ಎಂದು ಭಾರತದ ಪ್ರಧಾನಿ ಹೇಳಿದ್ದಾರೆ. “ನಮ್ಮ ಆರ್ಥಿಕ ಪಾಲುದಾರಿಕೆಯನ್ನು ವೇಗಗೊಳಿಸಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ಹಂಚಿಕೆಯ ಹೂಡಿಕೆಯನ್ನು ವೇಗಗೊಳಿಸಲು ನಾವು ಶೀಘ್ರದಲ್ಲೇ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಅಂತಿಮಗೊಳಿಸುವತ್ತ ಕೆಲಸ ಮಾಡುತ್ತೇವೆ. ಮುಕ್ತ ವ್ಯಾಪಾರ ಒಪ್ಪಂದದ ಕುರಿತಾದ ಮಾತುಕತೆಗಳು ಸಹ ಪ್ರಾರಂಭವಾಗಿವೆ” ಪ್ರಧಾನಿ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ