Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Modi: ಭಾರತದ ಪ್ರಜಾಪ್ರಭುತ್ವದ ಯಶಸ್ಸು ಕೆಲವರಿಗೆ ನೋವುಂಟು ಮಾಡಿದೆ: ಮೋದಿ

ಭಾರತದ ಪ್ರಜಾಪ್ರಭುತ್ವದ ಯಶಸ್ಸು ಕೆಲವರಿಗೆ ನೋವುಂಟು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವದ ಸ್ಥಿತಿಯನ್ನು ಟೀಕಿಸಿದ್ದಕ್ಕಾಗಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

Narendra Modi: ಭಾರತದ ಪ್ರಜಾಪ್ರಭುತ್ವದ ಯಶಸ್ಸು ಕೆಲವರಿಗೆ ನೋವುಂಟು ಮಾಡಿದೆ: ಮೋದಿ
ಪ್ರಧಾನಿ ನರೇಂದ್ರ ಮೋದಿImage Credit source: Telegraph
Follow us
ನಯನಾ ರಾಜೀವ್
|

Updated on: Mar 19, 2023 | 8:41 AM

ಭಾರತದ ಪ್ರಜಾಪ್ರಭುತ್ವದ ಯಶಸ್ಸು ಕೆಲವರಿಗೆ ನೋವುಂಟು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವದ ಸ್ಥಿತಿಯನ್ನು ಟೀಕಿಸಿದ್ದಕ್ಕಾಗಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ವ್ಯಂಗ್ಯವಾಡಿದ್ದಾರೆ. ‘ಇಂಡಿಯಾ ಟುಡೇ ಕಾನ್‌ಕ್ಲೇವ್‌’ನಲ್ಲಿ ಮಾತನಾಡಿದ ಮೋದಿ, ದೇಶವು ಆತ್ಮವಿಶ್ವಾಸ ಮತ್ತು ಸಂಕಲ್ಪದಿಂದ ತುಂಬಿರುವಾಗ ಮತ್ತು ವಿಶ್ವದ ಬುದ್ಧಿಜೀವಿಗಳು ಭಾರತದ ಬಗ್ಗೆ ಆಶಾವಾದಿಯಾಗಿರುವಾಗ, ನಿರಾಶಾವಾದದ ಬಗ್ಗೆ ಮಾತನಾಡುತ್ತಾರೆ, ದೇಶವನ್ನು ಕೆಟ್ಟದಾಗಿ ತೋರಿಸುತ್ತಾರೆ ಮತ್ತು ದೇಶದ ನೈತಿಕತೆಯನ್ನು ಘಾಸಿಗೊಳಿಸುತ್ತಾರೆ ಎಂದಿದ್ದಾರೆ.

ಯಾರನ್ನೂ ಹೆಸರಿಸದ ಮೋದಿ, ಕೆಲವು ಶುಭ ಕಾರ್ಯಗಳು ನಡೆಯುವಾಗ ದೃಷ್ಟಿಬೊಟ್ಟು ಇಡುವುದು ಸಂಪ್ರದಾಯ. ಹೀಗೆ ಹಲವು ಶುಭ ಕಾರ್ಯಗಳು ನಡೆಯುವಾಗ ಕೆಲವರು ಈ ಕಪ್ಪು ಟೀಕೆಗಳು ಇದ್ದೇ ಇರುತ್ತವೆ ಎಂದಿದ್ದಾರೆ.

ಮತ್ತಷ್ಟು ಓದಿ: Rahul Gandhi: ನಾನು ಲಂಡನ್​​ನಲ್ಲಿ ಭಾರತದ ವಿರುದ್ಧ ಏನನ್ನೂ ಹೇಳಿಲ್ಲ: ರಾಹುಲ್ ಗಾಂಧಿ

ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳ ಯಶಸ್ಸು ಕೆಲವು ಜನರನ್ನು ನೋಯಿಸುತ್ತಿದೆ ಮತ್ತು ಅದಕ್ಕಾಗಿಯೇ ಅವರು ದಾಳಿ ಮಾಡುತ್ತಿದ್ದಾರೆ. ಇಂತಹ ದಾಳಿಗಳ ಹೊರತಾಗಿಯೂ ದೇಶವು ತನ್ನ ಗುರಿಗಳನ್ನು ಈಡೇರಿಸಿಕೊಳ್ಳುವತ್ತ ಧೈರ್ಯದಿಂದ ಮುನ್ನುಗ್ಗಲಿದೆ ಎಂಬ ವಿಶ್ವಾಸವಿದೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಲಂಡನ್​ಗೆ ತೆರಳಿದ್ದಾಗ, ನಮ್ಮ ಸಂಸತ್​ನಲ್ಲಿ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ, ನಮಗೆ ಮಾತನಾಡಲು ಅವಕಾಶವೇ ಸಿಗುವುದಿಲ್ಲ, ಮಾತನಾಡುತ್ತಿರುವಾಗ ಆಗಾಗ ಮೈಕ್ ಆಫ್ ಮಾಡಲಾಗುತ್ತದೆ ಎಂದು ದೂರಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ