ಭಾರತದಲ್ಲಿ ಕ್ಷಯ ರೋಗದ ವಿರುದ್ಧದ ಹೋರಾಟ ವೇಗ ಸಾಧಿಸಿದೆ; ಪ್ರಧಾನಿ ಮೋದಿ ಶ್ಲಾಘನೆ

2015ರಿಂದ ಭಾರತದಲ್ಲಿ ಕ್ಷಯರೋಗದ ಪ್ರಮಾಣ ಕಡಿಮೆಯಾಗಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದು ಜಾಗತಿಕ ಕುಸಿತದ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಮತ್ತು ಚಿಕಿತ್ಸಾ ವ್ಯಾಪ್ತಿಯ ವಿಸ್ತರಣೆಗೆ ಇದು ಸಲ್ಲುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕ್ಷಯರೋಗ ವರದಿ 2025ರ ಪ್ರಕಾರ, ಪ್ರತಿ ವರ್ಷ ಹೊರಹೊಮ್ಮುವ ಹೊಸ ಪ್ರಕರಣಗಳನ್ನು ಸೂಚಿಸುವ ಭಾರತದ ಕ್ಷಯರೋಗದ ಪ್ರಮಾಣವು 2015ರಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 237ರಿಂದ 2024ರಲ್ಲಿ 187ಕ್ಕೆ ಶೇ. 21ರಷ್ಟು ಕಡಿಮೆಯಾಗಿದೆ.

ಭಾರತದಲ್ಲಿ ಕ್ಷಯ ರೋಗದ ವಿರುದ್ಧದ ಹೋರಾಟ ವೇಗ ಸಾಧಿಸಿದೆ; ಪ್ರಧಾನಿ ಮೋದಿ ಶ್ಲಾಘನೆ
Prime Minister Narendra Modi

Updated on: Nov 13, 2025 | 7:47 PM

ನವದೆಹಲಿ, ನವೆಂಬರ್ 13: ಭಾರತದ ಕ್ಷಯರೋಗ ವಿರುದ್ಧದ ಹೋರಾಟವು ಗಮನಾರ್ಹ ವೇಗವನ್ನು ಸಾಧಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. 2015ರಿಂದ ಭಾರತದಲ್ಲಿ ಕ್ಷಯರೋಗ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡುಬಂದಿದೆ ಎಂದು ಇತ್ತೀಚಿನ WHO ಜಾಗತಿಕ ಕ್ಷಯರೋಗ ವರದಿ ಸೂಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಕ್ಷಯರೋಗದ ವಿರುದ್ಧದ ಭಾರತದ ಹೋರಾಟವು ಗಮನಾರ್ಹ ವೇಗವನ್ನು ಸಾಧಿಸುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


” WHO (ವಿಶ್ವ ಆರೋಗ್ಯ ಸಂಸ್ಥೆ)ಯ ಇತ್ತೀಚಿನ ಜಾಗತಿಕ ಕ್ಷಯರೋಗ ವರದಿ-2025 ಭಾರತವು 2015ರಿಂದ ಕ್ಷಯರೋಗ ಪ್ರಕರಣಗಳಲ್ಲಿ ಶ್ಲಾಘನೀಯ ಇಳಿಕೆಯನ್ನು ದಾಖಲಿಸಿದೆ. ಇದು ಜಾಗತಿಕ ಟಿಬಿ ಪ್ರಕರಣಗಳ ಕುಸಿತದ ದರಕ್ಕಿಂತ 2 ಪಟ್ಟು ಹೆಚ್ಚು ಎಂದು ಎತ್ತಿ ತೋರಿಸುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Delhi Blast Case: ದೆಹಲಿಯ ಕಾರು ಸ್ಫೋಟವನ್ನು ಭಯೋತ್ಪಾದಕ ದಾಳಿ ಎಂದು ಘೋಷಿಸಿದ ಮೋದಿ ಸರ್ಕಾರ

“ಭಾರತದಲ್ಲಿನ ಕ್ಷಯರೋಗದ ಪ್ರಕರಣಗಳ ಇಳಿಕೆ ಜಗತ್ತಿನ ಬೇರೆಲ್ಲ ಭಾಗಗಳಿಗಿಂತ ತೀವ್ರ ಕುಸಿತಗಳಲ್ಲಿ ಒಂದಾಗಿದೆ. ಚಿಕಿತ್ಸೆಯ ಯಶಸ್ಸಿನಲ್ಲಿ ನಿರಂತರ ಏರಿಕೆಯೂ ಅಷ್ಟೇ ಸಂತೋಷದಾಯಕವಾಗಿದೆ. ಈ ಯಶಸ್ಸನ್ನು ಸಾಧಿಸಲು ಶ್ರಮಿಸಿದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಆರೋಗ್ಯಕರ ಮತ್ತು ಸದೃಢ ಭಾರತವನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ!” ಎಂದು ಮೋದಿ ಹೇಳಿದ್ದಾರೆ.

ಭಾರತದ ಕ್ಷಯರೋಗ ಪ್ರಕರಣಗಳು (ಪ್ರತಿ ವರ್ಷ ಹೊರಹೊಮ್ಮುವ ಹೊಸ ಪ್ರಕರಣಗಳು) ಶೇ. 21ರಷ್ಟು ಕಡಿಮೆಯಾಗಿದೆ. 2015ರಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 237 ಇದ್ದುದು 2024ರಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 187ಕ್ಕೆ ಇಳಿದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕ್ಷಯರೋಗ ವರದಿ 2025ರ ಪ್ರಕಾರ ಜಾಗತಿಕವಾಗಿ ಕಂಡುಬರುವ ಶೇ. 12ರಷ್ಟು ಇಳಿಕೆಯ ವೇಗಕ್ಕಿಂತ ಇದು 2 ಪಟ್ಟು ಹೆಚ್ಚಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ