
ನವದೆಹಲಿ, ಸೆಪ್ಟೆಂಬರ್ 4: ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Terror Attack) ನಂತರ ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸಿದ್ದಕ್ಕಾಗಿ ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಲಾರೆನ್ಸ್ ಜೊತೆಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ಬಗ್ಗೆ ಎರಡೂ ದೇಶಗಳು ಸಾಮಾನ್ಯ ಕಳವಳಗಳನ್ನು ಹಂಚಿಕೊಳ್ಳುತ್ತವೆ ಎಂದು ಹೇಳಿದ್ದಾರೆ.
“ಭಯೋತ್ಪಾದನೆಯ ವಿರುದ್ಧ ಏಕತೆಯಿಂದ ಹೋರಾಡುವುದು ಎಲ್ಲಾ ರಾಷ್ಟ್ರಗಳ ಕರ್ತವ್ಯ ಎಂದು ನಾವು ನಂಬುತ್ತೇವೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತದ ಜನರ ಬಗ್ಗೆ ಸಹಾನುಭೂತಿ ಮತ್ತು ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ಅವರ ಬೆಂಬಲಕ್ಕಾಗಿ ಪ್ರಧಾನಿ ವಾಂಗ್ ಮತ್ತು ಸಿಂಗಾಪುರ ಸರ್ಕಾರಕ್ಕೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ” ಎಂದು ಪ್ರಧಾನಿ ಹೇಳಿದ್ದಾರೆ.
#WATCH | Delhi: Prime Minister Narendra Modi meets Singapore PM Lawrence Wong at Hyderabad House in Delhi.
(Source: DD News) pic.twitter.com/Qkt2fasiGA
— ANI (@ANI) September 4, 2025
ಇದನ್ನೂ ಓದಿ: ದಸರಾಗೆ ಮೋದಿ ಸರ್ಕಾರದ ಉಡುಗೊರೆ; ನೂತನ ಜಿಎಸ್ಟಿಯಿಂದ ಈ ವಸ್ತುಗಳ ಬೆಲೆ ಇಳಿಕೆ
ದೆಹಲಿಯಲ್ಲಿ ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನಮ್ಮ ಸಂಬಂಧಗಳು ರಾಜತಾಂತ್ರಿಕತೆಯನ್ನು ಮೀರಿವೆ. ಭಯೋತ್ಪಾದನೆಯ ಬಗ್ಗೆ ನಮಗೆ ಒಂದೇ ರೀತಿಯ ಕಾಳಜಿಗಳಿವೆ. ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವುದು ಎಲ್ಲಾ ಮಾನವೀಯ ರಾಷ್ಟ್ರಗಳ ಕರ್ತವ್ಯ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
#WATCH | Delhi | Singapore PM Lawrence Wong says, “…Singapore is the largest foreign investor in India, accounting for around a quarter of India’s foreign direct investment inflows and our cooperation now spans a wide and diverse range of fields. Last year, PM Modi and I agreed… pic.twitter.com/wtPpRsTi5j
— ANI (@ANI) September 4, 2025
“ತಂತ್ರಜ್ಞಾನ ಮತ್ತು ನಾವೀನ್ಯತೆ ನಮ್ಮ ಪಾಲುದಾರಿಕೆಯ ಬಲವಾದ ಸ್ತಂಭಗಳಾಗಿವೆ. ನಾವು AI, ಕ್ವಾಂಟಮ್ ಮತ್ತು ಇತರ ಡಿಜಿಟಲ್ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ” ಎಂದು ಮೋದಿ ಅವರು ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಗಮನ ಹರಿಸುವುದಾಗಿ ಪುನರುಚ್ಚರಿಸಿದರು.
#WATCH | Prime Minister Narendra Modi holds delegation-level talks with Singapore PM Lawrence Wong in Delhi.
(Source: DD News) pic.twitter.com/41f4jGzgt5
— ANI (@ANI) September 4, 2025
ಇದನ್ನೂ ಓದಿ: ಕಾಂಗ್ರೆಸ್-ಆರ್ಜೆಡಿಯಿಂದ ದೇಶದ ಎಲ್ಲ ತಾಯಂದಿರಿಗೆ ಅವಮಾನ; ಅಮ್ಮನನ್ನು ನೆನೆದು ಭಾವುಕರಾದ ಪ್ರಧಾನಿ ಮೋದಿ
ಆರ್ಥಿಕ ಸಹಯೋಗದ ಬಗ್ಗೆ ಚರ್ಚಿಸಿದ ಮೋದಿ, ಪರಸ್ಪರ ವ್ಯಾಪಾರವನ್ನು ವೇಗಗೊಳಿಸಲು ದ್ವಿಪಕ್ಷೀಯ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ ಮತ್ತು ಆಸಿಯಾನ್ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದಗಳಂತಹ ವ್ಯಾಪಾರ ಒಪ್ಪಂದಗಳನ್ನು ಪರಿಶೀಲಿಸುವ ಬಗ್ಗೆ ಮಾತನಾಡಿದರು. ಚೆನ್ನೈನಲ್ಲಿರುವ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರ ಮತ್ತು ಸುಸ್ಥಿರ ಕೈಗಾರಿಕಾ ಉದ್ಯಾನವನಗಳಂತಹ ಉಪಕ್ರಮಗಳ ಮೂಲಕ ಭಾರತದ ಮುಂದುವರಿದ ಉತ್ಪಾದನೆಯನ್ನು ಬೆಂಬಲಿಸುವಲ್ಲಿ ಸಿಂಗಾಪುರದ ಪಾತ್ರವನ್ನು ಅವರು ಒತ್ತಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ