ಬೋಸ್ 125ನೇ ಜನ್ಮ ದಿನಾಚರಣೆ: ಪ್ರಧಾನಿ ಮೋದಿ ಬಂಗಾಳ ಭೇಟಿ, ಮಮತಾ ನಾಡಲ್ಲಿ ಗರಿಗೆದರಿದ ರಾಜಕೀಯ..

| Updated By: ಸಾಧು ಶ್ರೀನಾಥ್​

Updated on: Jan 22, 2021 | 1:02 PM

ಈ ವರ್ಷದಿಂದ ನೇತಾಜಿಯ ಜನ್ಮ ದಿನಾಚರಣೆಯನ್ನು ಶೌರ್ಯದ ದಿನವಾಗಿ ಆಚರಿಸಲು ಮೋದಿ ಸರ್ಕಾರ ನಿರ್ಧರಿಸಿದೆ.

ಬೋಸ್ 125ನೇ ಜನ್ಮ ದಿನಾಚರಣೆ: ಪ್ರಧಾನಿ ಮೋದಿ ಬಂಗಾಳ ಭೇಟಿ, ಮಮತಾ ನಾಡಲ್ಲಿ ಗರಿಗೆದರಿದ ರಾಜಕೀಯ..
ನೇತಾಜಿ ಸುಭಾಷ್​ ಚಂದ್ರ ಬೋಸ್ ಮತ್ತು ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ ಜನವರಿ 23 ರಂದು ಪಶ್ಚಿಮ ಬಂಗಾಳಕ್ಕೆ ಏಕದಿನ ಪ್ರವಾಸ ಕೈಗೊಳ್ಳಲಿದ್ದಾರೆ. ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯಂದು ಅವರು ಕೋಲ್ಕತ್ತಾದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಚರಿತ್ರೆ  ಆಧರಿತ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಮಮತಾ ನಾಡಲ್ಲಿ ಗರಿಗೆದರಿದ ರಾಜಕೀಯ..
ಅಸೆಂಬ್ಲಿ ಚುನಾವಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿಯವರ ಭೇಟಿ ಬಹಳ ವಿಶೇಷವಾಗಿದೆ. ಮೋದಿಯವರ ಈ ಮೊದಲ ಭೇಟಿ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹವನ್ನು ಹೆಚ್ಚಿಸಲಿದೆ. ವಾಸ್ತವವಾಗಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯನ್ನು ಸ್ಮರಣೀಯವಾಗಿಸಲು ಮೋದಿ ಸರ್ಕಾರ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ವರ್ಷವಿಡೀ ನಡೆಯುವ ಕಾರ್ಯಕ್ರಮಗಳ ನೀಲನಕ್ಷೆ ಬಗ್ಗೆ ಕೆಲಸ ಮಾಡುತ್ತಿದೆ.

ಜನವರಿ 23 ರಂದು ನೇತಾಜಿಯ 125 ನೇ ಜನ್ಮ ದಿನಾಚರಣೆಯಂದು ಮೂರು ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ. ಮೊದಲ ಕಾರ್ಯಕ್ರಮ ಕೋಲ್ಕತ್ತಾದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಎರಡನೇ ಕಾರ್ಯಕ್ರಮ ಕಟಕ್‌ನಲ್ಲಿ ನಡೆಯಲಿದ್ದು, ಅಲ್ಲಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ನಡೆಯಲಿದೆ. ಮೂರನೇ ಕಾರ್ಯಕ್ರಮ ಜಬಲ್‌ಪುರದಲ್ಲಿ ನಡೆಯಲಿದೆ.

ಶೌರ್ಯದ ದಿನವಾಗಿ ಆಚರಿಸಲು ಮೋದಿ ಸರ್ಕಾರ ನಿರ್ಧರಿಸಿದೆ..
ಈ ವರ್ಷದಿಂದ ನೇತಾಜಿಯ ಜನ್ಮ ದಿನಾಚರಣೆಯನ್ನು ಶೌರ್ಯದ ದಿನವಾಗಿ ಆಚರಿಸಲು ಮೋದಿ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಸಚಿವಾಲಯವೂ ಅಧಿಸೂಚನೆ ಹೊರಡಿಸಿದೆ. ಜನವರಿ 23 ರಂದು ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಒಂಬತ್ತು ಕಿಲೋಮೀಟರ್ ಉದ್ದದ ಕಾಲ್ನಡಿಗೆ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ.

ಬಂಗಾಳ ಚುನಾವಣೆಯ ವಿಷಯದಲ್ಲಿ, ನೇತಾಜಿಯ 125 ನೇ ಜನ್ಮ ದಿನಾಚರಣೆ ಟಿಎಂಸಿ ಮತ್ತು ಬಿಜೆಪಿ ಇಬ್ಬರಿಗೂ ಬಹಳ ಮುಖ್ಯವಾಗಿದೆ. ವಾಸ್ತವವಾಗಿ ಬಿಜೆಪಿ ಬಂಗಾಳಿ ನೆಲದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಟಿಎಂಸಿ ತನ್ನನ್ನು ಬಂಗಾಳಿ ಸಂಸ್ಕೃತಿಯ ರಕ್ಷಕ ಎಂದು ಸಾಬೀತುಪಡಿಸಲು ಯತ್ನಿಸುತ್ತಿದೆ.

ಲಸಿಕೆ ಬಂದಿದೆ ಎಂದು ಮೈ ಮರೆಯಬೇಡಿ: ಪ್ರಧಾನಿ ನರೇಂದ್ರ ಮೋದಿ