AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರೂ ಕಾಯ್ದೆ ರದ್ದತಿಗೆ ಪಟ್ಟುಹಿಡಿದಿರುವ ರೈತ ಸಂಘಟನೆಗಳು.. ಇಂದು ಮಹತ್ವದ 11ನೇ ಸುತ್ತಿನ ಸಭೆ

ಈ ಎಲ್ಲ ಬೆಳವಣಿಗೆಗಳ ಜತೆ, 11 ನೇ ಸುತ್ತಿನ ಸಭೆ ಇಂದು ನಡೆಯಲಿದೆ. ಈಗಾಗಲೇ ಎಲ್ಲ 10 ಸಭೆಗಳು ವಿಫಲವಾಗಿದ್ದು, ಇಂದಿನ ಸಭೆಯಲ್ಲಿ ನಡೆಯಲಿರುವ ಕೇಂದ್ರ ಯಾವ ಪ್ರಸ್ತಾಪ ಮುಂದಿಡಲಿದೆ ಎಂಬ ಕುತೂಹಲ ವ್ಯಕ್ತವಾಗಿದೆ.

ಮೂರೂ ಕಾಯ್ದೆ ರದ್ದತಿಗೆ ಪಟ್ಟುಹಿಡಿದಿರುವ ರೈತ ಸಂಘಟನೆಗಳು.. ಇಂದು ಮಹತ್ವದ 11ನೇ ಸುತ್ತಿನ ಸಭೆ
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.
guruganesh bhat
| Updated By: ಸಾಧು ಶ್ರೀನಾಥ್​|

Updated on: Jan 22, 2021 | 11:56 AM

Share

ದೆಹಲಿ: ಕೃಷಿ ಕಾಯ್ದೆಗಳನ್ನು 18 ತಿಂಗಳ ಕಾಲ ಅಮಾನತ್ತಿನಲ್ಲಿರಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ರೈತ ಒಕ್ಕೂಟಗಳು ತಿರಸ್ಕರಿಸಿವೆ. ತಾತ್ಕಾಲಿಕ ರದ್ದತಿ ಅಥವಾ ಅಮಾನತನ್ನು ಒಪ್ಪುವುದಿಲ್ಲ, ಸಂಪೂರ್ಣ ರದ್ದತಿಯೇ ತಮ್ಮ ಗುರಿಯೆಂದು ರೈತ ಒಕ್ಕೂಟಗಳು ಸ್ಪಷ್ಟಪಡಿಸಿವೆ.

ಈ ಎಲ್ಲ ಬೆಳವಣಿಗೆಗಳ ಜತೆ, 11 ನೇ ಸುತ್ತಿನ ಸಭೆ ಇಂದು ನಡೆಯಲಿದೆ. ಈಗಾಗಲೇ ಎಲ್ಲ 10 ಸಭೆಗಳು ವಿಫಲವಾಗಿದ್ದು, ಇಂದಿನ ಸಭೆಯಲ್ಲಿ ಕೇಂದ್ರ ಯಾವ ಪ್ರಸ್ತಾವನೆ ಮುಂದಿಡಲಿದೆ ಎಂಬ ಕುತೂಹಲ ಮೂಡಿದೆ.

ಒಮ್ಮತ ಮೂಡಿಸಲು ಜಂಟಿ ಸಮಿತಿ ರಚನೆಯ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮುಂದಿರಿಸಿತ್ತು. ಆದರೆ, ಈ ಸಮಿತಿ ರಚನೆಯ ಪ್ರಸ್ತಾಪವನ್ನು ಸಹ ರೈತರು ತಿರಸ್ಕರಿಸಿದ್ದಾರೆ. ತಾವು ಕೃಷಿ ಕಾಯ್ದೆಗಳ ಸಂಪೂರ್ಣ ರದ್ದತಿ ಮತ್ತು ಕನಿಷ್ಟ ಬೆಂಬಲ ಬೆಲೆಯ ಕಾನೂನಾತ್ಮಕ ಸಮ್ಮತಿಗಾಗಿ ಬೇಡಿಕೆಯಿಟ್ಟಿದ್ದೇವೆಯೇ ಹೊರತು, ಇನ್ನಾವ ಒಮ್ಮತಕ್ಕೂ ಒಪ್ಪಿಗೆ ಸೂಚಿಸುವುದಿಲ್ಲ ಎಂದು ರೈತ ಸಂಘಟನೆಗಳು ಸ್ಪಷ್ಟಪಡಿಸಿವೆ.

10 ರೈತ ಸಂಘಟನೆಗಳ ಜತೆ ಮಾತುಕತೆಗಿಳಿದ ತಜ್ಞರ ಸಮಿತಿ ಇತ್ತ, ಸುಪ್ರೀಂ ಕೋರ್ಟ್ ರಚಿಸಿದ ತಜ್ಞರ ಸಮಿತಿ ದೆಶದ ವಿವಿಧ ರೈತ ಸಂಘಟನೆಗಳ ಜತೆ ಮಾತುಕತೆ ನಡೆಸಿದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ತೆಲಂಗಾಣ, ತಮಿಳುನಾಡು ರಾಜ್ಯಗಳ ರೈತ ಸಂಘಟನೆಗಳ ಜತೆ ತಜ್ಞರ ಸಮಿತಿ ನಿನ್ನೆ ವರ್ಚುವಲ್ ಕಾನ್ಫರೆನ್ಸ್​ ಮೂಲಕ ಮಾತುಕತೆ ನಡೆಸಿದೆ. ಈ ಸಮಿತಿ ಎರಡು ತಿಂಗಳ ಒಳಗೆ ತನ್ನ ವರದಿಯನ್ನು ಸುಪ್ರೀಂ ಕೋರ್ಟ್​ಗೆ ಸಲ್ಲಿಸಬೇಕಿದೆ.

ಸರ್ಕಾರದ ಜತೆಯೇ ಚರ್ಚಿಸುತ್ತೇವೆ, ತಜ್ಞರ ಸಮಿತಿಯೆದುರು ಹೋಗುವುದಿಲ್ಲ: ರೈತ ನಾಯಕ ರಾಕೇಶ್ ಟಿಕಾಯತ್