ಆರ್ಎಸ್ಎಸ್ ಕಚೇರಿಗೆ ಪತ್ರ ಬರೆದ ಕಾಂಗ್ರೆಸ್: ಏನಿದೆ ಪತ್ರದಲ್ಲಿ!?
ಕರ್ನಾಟಕ ರಾಜಕಾರಣದಲ್ಲಿ ಆಗಾಗ ಹಲವು ಬೆಳವಣಿಗಳು ಆಗುತ್ತಿರುತ್ತವೆ. ಇದೀಗ, ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಆರ್ಎಸ್ಎಸ್ ಕಚೇರಿಗೆ ಪತ್ರ ಬರೆದಿದೆ. ಇದು ರಾಜಕಾರಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಹಲವು ಪ್ರಶ್ನೆಗಳು ಉದ್ಭವಿಸಿವೆ. ಕಾಂಗ್ರೆಸ್ ಆರ್ಎಸ್ಎಸ್ ಕಚೇರಿಗೆ ಬರೆಯಲು ಕಾರಣವೇನು? ಯಾವ ವಿಚಾರಕ್ಕೆ ಪತ್ರ ಬರೆದಿದೆ? ಪತ್ರದಲ್ಲಿ ಏನಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಜನವರಿ 6: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa), ವಿಪಕ್ಷ ನಾಯಕ ಆರ್.ಅಶೋಕ್ (R Ashok), ಶಾಸಕ ಮುನಿರತ್ನ (Muniratna), ಎಂಎಲ್ಸಿ ಸಿ.ಟಿ.ರವಿ (CT Ravi) ಬಳಸಿರುವ ಪದ ಸಂಬಂಧ ಕಾಂಗ್ರೆಸ್ (Congress) ಮುಖಂಡರು ಆರ್ಎಸ್ಎಸ್ ಕಚೇರಿಗೆ ಪತ್ರ ಬರೆದಿದ್ದಾರೆ. ನಮ್ಮ ಮೂಲ ಆರ್ಎಸ್ಎಸ್ ಎನ್ನುವ ನಾಯಕರು ಸಂಸ್ಕಾರ ಮೀರಿ ಮಾತನಾಡುತ್ತಿದ್ದಾರೆ. ಸಂಸ್ಕಾರ ಮೀರಿ ಮಾತನಾಡುತ್ತಿರುವವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಿ. ಸಂಸ್ಕೃತಿ ಮರೆತು ಮಾತನಾಡುತ್ತಿರುವ ನಾಯಕರ ಸದಸ್ಯತ್ವ ರದ್ದುಗೊಳಿಸಿ ಎಂದು ಕಾಂಗ್ರೆಸ್ನ ಗೌತಮ್ ಕುಮಾರ್, ಎಸ್.ಮನೋಹರ, ಶಂಕರ ಗುಹಾ ನೇತೃತ್ವದಲ್ಲಿ 70 ಮಂದಿ ಕಾರ್ಯಕರ್ತರು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್ಎಸ್ಎಸ್ನ ಕೇಶವಕೃಪಾ ಕಚೇರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಪತ್ರದಲ್ಲಿ ಏನಿದೆ?
“ರಾಷ್ಟ್ರೀಯ ಸ್ವಯಂ ಸೇವ ಸಂಘಟನೆಯ ಕರ್ನಾಟಕದ ಮುಖ್ಯಸ್ಥ ಭಾರತೀಯ ಜನತಾ ಪಕ್ಷ ಪ್ರತಿ ಸಂದರ್ಭದಲ್ಲಿ ಎಲ್ಲ ಸಭೆಗಳಲ್ಲೂ ನಾವು ಆರ್.ಎಸ್.ಎಸ್.ನಲ್ಲಿ ತರಬೇತಿಯನ್ನು ಪಡೆದಿದ್ದೇವೆ ಎಂಬ ಮಾತನ್ನು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹಾಗಾದರೆ ಭಾರತೀಯ ಜನತಾ ಪಕ್ಷದ ನಾಯಕರುಗಳು ಇತ್ತೀಚಿನ ದಿನಗಳಲ್ಲಿ ಇಡೀ ರಾಷ್ಟ್ರಕ್ಕೆ ಆರ್.ಎಸ್.ಎಸ್ನ ಕಟ್ಟಾಳುಗಳಾದ ಸಿ.ಟಿ.ರವಿ ವಿಧಾನಸಭೆಯಲ್ಲಿ ಬಳಸಿರುವ ಪದ ಅದನ್ನ ನಾವು ಹೇಳಲು ಸಾಧ್ಯವಿಲ್ಲ ಅದನ್ನು ನೀವೇ ಅರ್ಥೈಸಿಕೊಳ್ಳಿ.
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ರವರು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಬಳಸಿರುವ ಆ ಪದವನ್ನು ಈಗಾಗಲೇ ನಿಮ್ಮ ಶಾಖೆಗೆ ತಲುಪಿದೆ ಎಂದು ನಾವು ಭಾವಿಸಿದ್ದೇವೆ. ಇನ್ನು ಬಿಜೆಪಿ ಶಾಸಕ ಮುನಿರತ್ನಂ ನಾಯ್ಡು ಎಂದ ಕೂಡಲೇ ನಿಮಗೆ ಈಗಾಗಲೇ ಅರ್ಥವಾಗಿರಬೇಕು ಇಂತಹ ವ್ಯಕ್ತಿಗಳು ಬಳಸಿದ ಪದವನ್ನು ನಿಮ್ಮ ಶಾಖೆಯಲ್ಲಿ ತರಬೇತಿ ಹೊಂದಿರುವ ಬಿಜೆಪಿ ನಾಯಕರು ಅತ್ಯಂತ ಹೆಮ್ಮೆಯಿಂದ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ರಾಜು ಕಪನೂರು ಗ್ಯಾಂಗ್ ಎಲ್ಲಿ ಬಚ್ಚಿಟ್ಟಿದ್ದೀರಿ ಸುಪಾರಿ ಕಿಲ್ಲರ್ ಪ್ರಿಯಾಂಕ್ ಖರ್ಗೆ: ಬಿಜೆಪಿ ಪ್ರಶ್ನೆ
ಆದರೂ ಸಹ ಇನ್ನೂ ಇವರ ವಿರುದ್ಧ ಯಾಕೆ ಆರ್.ಎಸ್.ಎಸ್ನ ಮುಖ್ಯಸ್ಥರು ಮೌನವಾಗಿದ್ದಾರೆ ಎಂಬುದನ್ನ ನೀವೇ ತಿಳಿಸಬೇಕು. ಯಾಕೆ ಇವರ ವಿರುದ್ಧ ನೀವು ಕ್ರಮ ಕೈಗೊಂಡಿಲ್ಲ ಎಂಬುದರ ಬಗ್ಗೆ, ಸ್ಪಷ್ಟನೆ ನೀಡಬೇಕು. ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದರೂ ಸಹ ಅವರನ್ನು ಸಮರ್ಥಿಸಿಕೊಂಡಿರುವುದು ಆರ್.ಎಸ್.ಎಸ್ ನೀತಿ ಎಂದು ಈಗಾಗಲೇ ಬಹಿರಂಗವಾಗಿದೆ. ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರು ರವರ ವಿರುದ್ಧ ಆರ್ ಟಿ ಜಿ ಎಸ್. ವಾಕ್ಸ್ ಬೋರ್ಡ್ ಹಗರಣ ಮುಚ್ಚಿ ಹಾಕಲು ಅಂ ಕೋಟಿ ಆಮಿಷ ಒಡ್ಡಿದರ ಬಗ್ಗೆ, ವಾಕ್ಸ್ ಮಂಡಳಿಯ ಮಾಜಿ ಅಧ್ಯಕ್ಷ ಅನ್ನರ್ ಅನ್ನರ್ ಮಾನಪಾಗ್ನಿಯವರೇ ಬಹಿರಂಗಪಡಿಸಿದ್ದಾರೆ ಹಾಗೂ ಇನ್ನೂ ಅನೇಕ ಭ್ರಷ್ಟಾಚಾರದ ಪ್ರಕರಣಗಳು ಇದೆ ಎಂಬುದರ ಬಗ್ಗೆ, ಈಗಾಗಲೇ ನಿಮ್ಮ ಸಂಘದ ಮತ್ತೊಬ್ಬ ನಿಷ್ಠಾವಂತ ನಾಯಕ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರವರೇ ಅನೇಕ ಬಾರಿ ಬಹಿರಂಗಪಡಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂಬುವ ಬಿಜೆಪಿ ನಾಯಕರ ಹೇಳಿಕೆಗಳನ್ನು ಆರ್ಎಸ್ಎಸ್ ಸಂಸ್ಥೆ ಗಮನಿಸಿದರೆ ಭ್ರಷ್ಟಾಚಾರದಲ್ಲಿ ಅತೀ ಹೆಚ್ಚು ಯಾರು ಭಾಗಿಯಾಗಿದ್ದಾರೋ ಅವರೇ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳುತ್ತಾರೆ. ಹಾಗಾದರೆ ಇವರ ವಿರುದ್ಧ ಇರುವ ಭ್ರಷ್ಟಾಚಾರದ ಪ್ರಕರಣಗಳು ಮುಕ್ತಾಯ ಆಗಬೇಕಾದರೆ ಕನಿಷ್ಠ 20 ವರ್ಷಗಳಷ್ಟು ಕಾಲಾವಕಾಶ ಬೇಕು, ಇಂತಹ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವವರೆಲ್ಲರೂ ನಾವು ಆರ್ಎಸ್ಎಸ್ನ ಕಟ್ಟಾಳುಗಳು ಎಂದು ಹೇಳಿಕೊಳ್ಳುತ್ತಾರೆ.
ಭ್ರಷ್ಟಾಚಾರದ ಪ್ರಕರಣದಿಂದ ಮುಕ್ತರಾಗಿ ಇವರೆಲ್ಲ ಆರ್ಎಸ್ಎಸ್ ಕಚೇರಿಗೆ ಬರಬೇಕೆಂಬುವ ಆದೇಶವನ್ನು ಹೊರಡಿಸಿದಾಗ ಮಾತ್ರ ಬಿಜೆಪಿಯ ಭ್ರಷ್ಯರಿಗೂ ಆರ್.ಎಸ್.ಎಸ್.ಗೂ ಅಂತರ ಕಡಿಮೆ ಇದೆ ಎಂಬುದು ತೋರುತ್ತದೆ ಇಲ್ಲದೆ ಹೋದ ಪಕ್ಷದಲ್ಲಿ ಆರ್ಎಸ್ಎಸ್ ಸಂಸ್ಥೆಯೇ ಈ ಎಲ್ಲಾ ಭ್ರಷ್ಯರಿಗೂ ನೈತಿಕ ಬೆಂಬಲ ನೀಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಯಡಿಯೂರಪ್ಪ, ಅವರ ವಿರುದ್ಧ ಅತ್ಯಂತ ಗಂಭೀರವಾದ ಪೋಕ್ಸೋ ಪುಕರಣ ದಾಖಲಾಗಿದ್ದರೂ ಸಹ ಅವರನ್ನು ಪ್ರಶ್ನೆ ಮಾಡುವ ಶಕ್ತಿಯು ಸಹ ಆರ್.ಎಸ್.ಎಸ್ ಕಳೆದುಕೊಂಡಿರುವುದು ಎತ್ತಿ ತೋರುತ್ತದೆ.
ಈ ಮೇಲೆ ತಿಳಿಸಿರುವ ವ್ಯಕ್ತಿಗಳು ಆರ್ಎಸ್ಎಸ್ನ ಶಾಖೆಯಲ್ಲಿ ತರಬೇತಿ ಪಡೆದಿದ್ದಾರೆಯೇ ಎಂಬುದರ ಬಗ್ಗೆ, ಸೃಷ್ಟಪಡಿಸಬೇಕು. ಅವರು ಬಳಸಿರುವ ಪದ ನಿಮ್ಮ ಶಾಖೆಯಲ್ಲಿ ತರಬೇತಿ ನೀಡಿದ್ದರೆ ಅದರ ಬಗ್ಗೆ ಸ್ಪಷ್ಟನೆ ನೀಡಿ ಅಥವಾ ಇಂತಹ ಪದ ಬಳಸಲು ನಾವು ಖಂಡಿಸುತ್ತೇವೆ ಎಂಬುವ ಮನೋ ಧೈರ್ಯ ಇದ್ದರೆ ಇದರ ಬಗ್ಗೆ. ನಾವು ಪತ್ರಿಕೆಗಳಿಗೆ ಹೇಳಿಕೆ ನೀಡಿ ಆ ವ್ಯಕ್ತಿಗಳ ಭಾಷೆಯನ್ನು ಖಂಡಿಸಬೇಕು ಮತ್ತು ಅವರನ್ನು ತಮ್ಮ ಸಂಘದಿಂದ ಉಚ್ಚಾಟಿಸಬೇಕು.
ಅವರು ಬಳಸಿರುವ ಎಲ್ಲ ಮಾಹಿತಿಯನ್ನು ತಮ್ಮ ಸಂಘಕ್ಕೆ ನಾವು ದಾಖಲೆ ಸಮೇತ ನೀಡುತ್ತೇವೆ. ಇದಕ್ಕೆ ತಾವು ಕಾಲಾವಕಾಶ ನೀಡಿದರೆ ಸೂಕ್ತ ಮಾಹಿತಿಗಳೊಂದಿಗೆ ನಿಮ್ಮ ಕಚೇರಿಗೆ ತಲುಪಿಸುತ್ತೇವೆ.” ಎಂದು ಕಾಂಗ್ರೆಸ್ ಪತ್ರ ಬರೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ