ಪ್ರಧಾನಮಂತ್ರಿ ಜನ ಧನ ಯೋಜನೆ (PMJDY)ಗೆ ಏಳುವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ಯೋಜನೆ ಪ್ರಾರಂಭಿಸಿ, ಯಶಸ್ವಿಗೊಳಿಸಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಜನ-ಧನ ಯೋಜನೆಯಿಂದಾಗಿ ಭಾರತದ ಅನೇಕ ಜನರು ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ ಎಂದೂ ಹೇಳಿದ್ದಾರೆ.
ಎರಡು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಅಭಿವೃದ್ಧಿ ಪಥವನ್ನು ಪರಿವರ್ತಿಸಿದ ಪಿಎಂ ಜನ -ಧನ ಯೋಜನೆ ಶುರುವಾಗಿ ಏಳುವರ್ಷವಾಯಿತು. ಇದು ದೇಶದ ಅಸಂಖ್ಯಾತ ಜನರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ ಮತ್ತು ಪಾರದರ್ಶಕತೆಯಿಂದ ಕೂಡಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಹಾಗೇ, ಇನ್ನೊಂದು ಟ್ವೀಟ್ನಲ್ಲಿ ಯೋಜನೆ ಅನುಷ್ಠಾನ, ಯಶಸ್ವಿಗೆ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Today we mark seven years of #PMJanDhan, an initiative that has forever transformed India’s development trajectory. It has ensured financial inclusion and a life of dignity as well as empowerment for countless Indians. Jan Dhan Yojana has also helped further transparency.
— Narendra Modi (@narendramodi) August 28, 2021
ಏನಿದು ಜನ-ಧನ ಯೋಜನೆ?
ಪ್ರಧಾನಮಂತ್ರಿ ಜನ-ಧನ ಯೋಜನೆ ಜನರಿಗೆ ಆರ್ಥಿಕ ಸಬಲತೆಯನ್ನು ಸೃಷ್ಟಿಸಿಕೊಟ್ಟ ಯೋಜನೆ. ಅಂದರೆ ನಮ್ಮ ದೇಶದಲ್ಲಿ ಅದೆಷ್ಟೋ ಹಿಂದುಳಿದ ಜನರಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಪರಿಚಯವೇ ಇರಲಿಲ್ಲ. ಈ ಪಿಎಂ ಜನ-ಧನ ಯೋಜನೆ ಮೂಲಕ ಅವರಲ್ಲೂ, ಬ್ಯಾಂಕಿಂಗ್/ ಉಳಿತಾಯ, ಠೇವಣಿ, ಸಾಲ, ವಿಮೆ, ಪೆನ್ಶನ್ ಬಗ್ಗೆ ಪ್ರ್ಯಾಕ್ಟಿಕಲ್ ಆಗಿ ಅರಿವು ಮೂಡಿಸಲಾಗಿದೆ. ಪಿಎಂ ಯೋಜನೆಯಡಿ ಬ್ಯಾಂಕ್ನಲ್ಲಿ ಶೂನ್ಯ ಬ್ಯಾಲೆನ್ಸ್ನಲ್ಲಿ ಖಾತೆ ತೆರೆಯಬಹುದಾಗಿದೆ. ಈ ಖಾತೆದಾರರು ಅಪಘಾತವಾದ ಸಂದರ್ಭದಲ್ಲಿ 1 ಲಕ್ಷ ರೂ.ದೊಂದಿಗೆ 30 ಸಾವಿರ ರೂ. ಸಾಮಾನ್ಯ ವಿಮೆ ಸೌಲಭ್ಯ ಪಡೆಯುತ್ತಾರೆ. ಪಿಎಂ ಜನ-ಧನ ಯೋಜನೆ ಶುರುವಾದಾಗಿನಿಂದ ಇಲ್ಲಿಯವರೆಗೆ 43.04 ಕೋಟಿ ಮಂದಿ ಬ್ಯಾಂಕ್ ಖಾತೆ ತೆರೆದು, ಬ್ಯಾಂಕಿಂಗ್ ವಹಿವಾಟು ಶುರುಮಾಡಿದ್ದಾರೆ.
ಇದನ್ನೂ ಓದಿ:ಅಫ್ಘನ್ನಿಂದ ಪಾರಾಗಿ ಬೆಲ್ಜಿಯಂನ ವಿಮಾನ ನಿಲ್ದಾಣದಲ್ಲಿ ಇಳಿದಾಗ ಪುಟ್ಟ ಬಾಲಕಿಯ ಸಂಭ್ರಮ ನೋಡಿ
ಬಾಲ ಆರೋಪಿ ಸೇರಿ ಐವರ ಬಂಧನವಾಗಿದೆ; ಡಿಜಿ ಐಜಿಪಿ ಪ್ರವೀಣ್ ಸೂದ್ ನೀಡಿದ ಕಾರ್ಯಾಚರಣೆಯ ಸಂಪೂರ್ಣ ವಿವರ ಇಲ್ಲಿದೆ