Big News: ರೈತರಿಗೆ ಎಪಿಎಂಸಿ ಮೂಲಕ 1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ, 23,123 ಕೋಟಿ ತುರ್ತು ಕೊವಿಡ್​ ಫಂಡ್ ಬಿಡುಗಡೆ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

| Updated By: guruganesh bhat

Updated on: Jul 08, 2021 | 7:25 PM

ರೈತರಿಗೆ APMC ಮೂಲಕ 1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿದೆ. ​ರಾಜ್ಯಗಳಿಗೆ ತುರ್ತು ಕೊವಿಡ್​ ಫಂಡ್ ನೀಡಲು ನಿರ್ಧರಿಸಿದ್ದು, ರಾಜ್ಯಗಳಿಗೆ ₹23,123 ಕೋಟಿ ತುರ್ತು ಕೊವಿಡ್​ ಫಂಡ್ ಬಿಡುಗಡೆ ಮಾಡುವುದಾಗಿ ಸಭೆ ನಿರ್ಣಯಿಸಿದೆ.

Big News: ರೈತರಿಗೆ ಎಪಿಎಂಸಿ ಮೂಲಕ 1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ, 23,123 ಕೋಟಿ ತುರ್ತು ಕೊವಿಡ್​ ಫಂಡ್ ಬಿಡುಗಡೆ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಪ್ರಧಾನಿ ನರೇಂದ್ರ ಮೋದಿ ಲೆಕ್ಕಾಚಾರವೇನು?
Follow us on

ದೆಹಲಿ:  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ನೂತನ ಸಚಿವ ಸಂಪುಟದ ಸಭೆ ಮುಕ್ತಾಯವಾಗಿದ್ದು, ಸಂಪುಟ ಸಭೆಯಲ್ಲಿ 3 ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ. ತೆಂಗು ಮಂಡಳಿ ಕಾಯ್ದೆಗೆ ತಿದ್ದುಪಡಿ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಎಪಿಎಂಸಿಗಳ ಬಲವರ್ಧನೆಗೆ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ರೈತರಿಗೆ APMC ಮೂಲಕ 1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿದೆ. ​ರಾಜ್ಯಗಳಿಗೆ ತುರ್ತು ಕೊವಿಡ್​ ಫಂಡ್ ನೀಡಲು ನಿರ್ಧರಿಸಿದ್ದು, ರಾಜ್ಯಗಳಿಗೆ ₹23,123 ಕೋಟಿ ತುರ್ತು ಕೊವಿಡ್​ ಫಂಡ್ ಬಿಡುಗಡೆ ಮಾಡುವುದಾಗಿ ಸಭೆ ನಿರ್ಣಯಿಸಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿಗಳು) ಹೊಸ ಕೃಷಿ ಕಾನೂನಿನಡಿಯಲ್ಲಿ ಇನ್ನು ಮುಂದೆ ಅಸ್ತಿತ್ವದಲ್ಲಿಲ್ಲ ಎಂದು ಹೇಳಲಾಗಿದೆ. ಮಂಡಿ ವ್ಯವಸ್ಥೆ ಕೊನೆಗೊಳ್ಳುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಬದಲಾಗಿ ಅದನ್ನು ಮತ್ತಷ್ಟು ಬಲಪಡಿಸಲಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೃಷಿ ಮೂಲಸೌಕರ್ಯ ನಿಧಿಗೆ ಎಪಿಎಂಸಿ ಪ್ರವೇಶವನ್ನು ಕ್ಯಾಬಿನೆಟ್ ಅನುಮೋದಿಸಿದೆ, ಇದನ್ನು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ, ವೃತ್ತಿಪರತೆಯನ್ನು ತರಲು ತೆಂಗಿನ ಅಭಿವೃದ್ಧಿ ಮಂಡಳಿ ಕಾಯ್ದೆ 1979 ಕ್ಕೆ ತಿದ್ದುಪಡಿ ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಐಟಿ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಯಾವ ಕಾರಣಕ್ಕೂ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲ್ಲ ಎಂದು ಸಂಪುಟ ಸಭೆ ಬಳಿಕ ಸಚಿವ ನರೇಂದ್ರಸಿಂಗ್ ತೋಮರ್ ತಿಳಿಸಿದ್ದಾರೆ. ಕೃಷಿ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿದೆ. ಧರಣಿ ನಿರತ ರೈತರ ಜತೆ ಚರ್ಚಿಸಲು ಸಹ ಸರ್ಕಾರ ಸಿದ್ಧವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಎಪಿಎಂಸಿಗಳನ್ನು ಬಲಪಡಿಸಲಾಗುವುದು ಎಂದು ಈ ಹಿಂದೆ ಹೇಳಲಾಗಿತ್ತು. ಎಪಿಎಂಸಿಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು. ರೈತರ ಮೂಲಸೌಕರ್ಯ ನಿಧಿಗೆ ಆತ್ಮನಿರ್ಬರ್ ಭಾರತ್ ಅಡಿಯಲ್ಲಿ ನಿಗದಿಪಡಿಸಿದ 1 ಲಕ್ಷ ಕೋಟಿ ರೂ.ಗಳನ್ನು ಎಪಿಎಂಸಿಗಳು ಬಳಸಬಹುದು. ತೆಂಗು ಕೃಷಿಯನ್ನು ಹೆಚ್ಚಿಸಲು, ನಾವು ತೆಂಗು ಕಾಯ್ದೆಯನ್ನು ತಿದ್ದುಪಡಿ ಮಾಡುತ್ತಿದ್ದೇವೆ. ತೆಂಗು ಮಂಡಳಿಯ ಅಧ್ಯಕ್ಷರು ಅಧಿಕಾರೇತರ ವ್ಯಕ್ತಿಯಾಗಲಿದ್ದಾರೆ. ಅವರು ರೈತ ಸಮುದಾಯದಿಂದ ಬಂದವರು, ಅವರು ಕ್ಷೇತ್ರದ ಕೆಲಸವನ್ನು ತಿಳಿದಿದ್ದಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ.  ಜತೆಗೆ ಸಚಿವ ಸಂಪುಟ ಸಭೆಯಲ್ಲಿ 736 ಜಿಲ್ಲೆಗಳಲ್ಲಿ ಮಕ್ಕಳ ಚಿಕಿತ್ಸೆಗೆ 20,000 ಐಸಿಯು ಬೆಡ್​ಗಳ ವ್ಯವಸ್ಥೆ​ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ.

ಇದನ್ನೂ ಓದಿ: 

Modi Cabinet Reshuffle: ನೂತನ ಸಚಿವರಿಗೆ ಇಂದೇ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ? ಇಲ್ಲಿದೆ ವಿವರ

Union Cabinet Expansion ಸಚಿವ ಸಂಪುಟ ಪುನಾರಚನೆಯಲ್ಲಿಯೂ;ಸಬ್ ಕಾ ವಿಕಾಸ್, ಯಾವ ರಾಜ್ಯ, ಲಿಂಗ ಮತ್ತು ಜಾತಿಗೆ ಎಷ್ಟು ಪ್ರಾತಿನಿಧ್ಯ?

(PM Modi Union Cabinet Meeting decides 1 lakh crore through APMC for farmers Package and Emergency Covid Fund Release to States)

Published On - 6:51 pm, Thu, 8 July 21