ನವದೆಹಲಿ: ದೆಹಲಿಯಲ್ಲಿರುವ ನೂತನ ಸಂಸತ್ ಭವನದ ಮೇಲೆ ಬೃಹತ್ ರಾಷ್ಟ್ರ ಲಾಂಛನವನ್ನು ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅನಾವರಣಗೊಳಿಸಿದ್ದಾರೆ. ನೂತನ ಸಂಸತ್ ಭವನದ ಮೇಲೆ 6.5 ಮೀಟರ್ ಎತ್ತರ ಬೃಹತ್ ಅಶೋಕ ಸ್ತಂಭವನ್ನು ನಿರ್ಮಿಸಲಾಗಿದೆ. ಈ ರಾಷ್ಟ್ರ ಲಾಂಛನದ (National Emblem) ಉದ್ಘಾಟನೆ ವೇಳೆ ಪ್ರಧಾನಿ ಮೋದಿ ನೂತನ ಸಂಸತ್ತಿನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರು ಮತ್ತು ಕೆಲಸಗಾರರೊಂದಿಗೆ ಸಂವಾದ ನಡೆಸಿದ್ದಾರೆ.
ಈ ಬೃಹತ್ ರಾಷ್ಟ್ರೀಯ ಲಾಂಛನವನ್ನು ಕಂಚಿನಿಂದ ಮಾಡಲಾಗಿದ್ದು, ಒಟ್ಟು 9,500 ಕೆಜಿ ತೂಕ ಮತ್ತು 6.5 ಮೀ ಎತ್ತರವಿದೆ. ಹೊಸ ಪಾರ್ಲಿಮೆಂಟ್ ಕಟ್ಟಡದ ಸೆಂಟ್ರಲ್ ಫೋಯರ್‌ನ ಮೇಲ್ಭಾಗದಲ್ಲಿ ಇದನ್ನು ಇರಿಸಲಾಗಿದೆ.
Glimpses of Prime Minister @NarendraModi unveiling the National Emblem cast on the roof of the New Parliament Building. pic.twitter.com/4NhAUwpNF6
— MyGovIndia (@mygovindia) July 11, 2022
ನೂತನ ಸಂಸತ್ ಭವನದ ಮೇಲ್ಛಾವಣಿಯಲ್ಲಿ ಕಂಚಿನ 6.5 ಮೀ ಉದ್ದದ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. ಪಾರಂಪರಿಕ ಸಂಸತ್ತಿನ ಕಟ್ಟಡದ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಸಂಸತ್ ಕಟ್ಟಡ ತ್ರಿಕೋನ ಆಕಾರದಲ್ಲಿದೆ. ಈ ರಾಷ್ಟ್ರ ಲಾಂಛನವು ಕಟ್ಟಡದ ಮೇಲ್ಭಾಗದಲ್ಲಿ ಕಿರೀಟದಂತಿದೆ.
Delhi | PM Narendra Modi unveiled the 6.5m long bronze National Emblem cast on the roof of the New Parliament Building today morning. He also interacted with the workers involved in the work of the new Parliament. pic.twitter.com/sQS9s8aC8o
— ANI (@ANI) July 11, 2022
ಇದನ್ನೂ ಓದಿ: PM Modi Varanasi Visit: ವಾರಾಣಸಿಗೆ ಇಂದು ಪ್ರಧಾನಿ ಮೋದಿ ಭೇಟಿ; 1,800 ಕೋಟಿ ರೂ. ಯೋಜನೆಗಳಿಗೆ ಚಾಲನೆ
The beginning of a New Era!
Unveiling the National Emblem on the roof of the New Parliament Building,New Delhi by PM Shri @narendramodi Ji has ended the century-old colonial legacy & mental slavery.
New India lives by its aspirations & holds its head high,full of National pride. pic.twitter.com/HswQG7zkT6— D K Aruna (@aruna_dk) July 11, 2022
2021ರ ಜನವರಿಯಲ್ಲಿ 971 ಕೋಟಿ ರೂಪಾಯಿಗಳ ಅಂದಾಜು ವೆಚ್ಚದೊಂದಿಗೆ ಪ್ರಾರಂಭವಾದ ಸಂಸತ್ ಕಟ್ಟಡ ನಿರ್ಮಾಣ ಯೋಜನೆಯು ಸಂಸತ್ತಿನ ಚಳಿಗಾಲದ ಅಧಿವೇಶನದ ಸಮಯದಲ್ಲಿ ಪೂರ್ಣಗೊಳ್ಳಲಿದೆ. ಈ ಹೊಸ ಕಟ್ಟಡವು ಲೋಕಸಭೆಯಲ್ಲಿ 888 ಸದಸ್ಯರಿಗೆ, ರಾಜ್ಯಸಭೆಯಲ್ಲಿ 384 ಮತ್ತು ಜಂಟಿ ಅಧಿವೇಶನಕ್ಕಾಗಿ 1,272 ಸ್ಥಾನಗಳಿಗೆ ಅವಕಾಶ ಕಲ್ಪಿಸಲಿದೆ.
Published On - 1:29 pm, Mon, 11 July 22