PM Modi Varanasi Visit: ವಾರಾಣಸಿಗೆ ಇಂದು ಪ್ರಧಾನಿ ಮೋದಿ ಭೇಟಿ; 1,800 ಕೋಟಿ ರೂ. ಯೋಜನೆಗಳಿಗೆ ಚಾಲನೆ

ಈ ವೇಳೆ ವಾರಾಣಸಿಯಲ್ಲಿ ಪ್ರಧಾನಿ ಮೋದಿ 1,200 ಕೋಟಿ ರೂ.ಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹಾಗೇ, 600 ಕೋಟಿ ರೂ.ಗಳ ವೆಚ್ಚದ ಸುಮಾರು 33 ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

PM Modi Varanasi Visit: ವಾರಾಣಸಿಗೆ ಇಂದು ಪ್ರಧಾನಿ ಮೋದಿ ಭೇಟಿ; 1,800 ಕೋಟಿ ರೂ. ಯೋಜನೆಗಳಿಗೆ ಚಾಲನೆ
ನರೇಂದ್ರ ಮೋದಿ
TV9kannada Web Team

| Edited By: Sushma Chakre

Jul 07, 2022 | 10:24 AM

ವಾರಾಣಸಿ: ಉತ್ತರ ಪ್ರದೇಶ ಸರ್ಕಾರ ಎರಡನೇ ಅವಧಿಗೆ 100 ದಿನಗಳನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಜುಲೈ 7) ವಾರಾಣಸಿಗೆ (Varanasi) ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ 1,200 ಕೋಟಿ ರೂ.ಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹಾಗೇ, ಉತ್ತರ ಪ್ರದೇಶದಲ್ಲಿ 600 ಕೋಟಿ ರೂ.ಗಳ ವೆಚ್ಚದ ಸುಮಾರು 33 ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಈ ಬಾರಿ ವಾರಾಣಸಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭೇಟಿ ಬಹಳ ಮಹತ್ವವನ್ನು ಪಡೆದಿದೆ. ವಿಶೇಷವಾಗಿ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಈ ಬಾರಿ ಒತ್ತು ಕೊಡಲಾಗಿದ್ದು, ಇನ್ನೂ ಹಲವು ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಎಲ್‌ಟಿ ಕಾಲೇಜಿನಲ್ಲಿ ‘ಅಕ್ಷಯ ಪಾತ್ರ ಮಧ್ಯಾಹ್ನದ ಊಟದ ಕಿಚನ್’ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇದು ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಅಡುಗೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಇದಾದ ನಂತರ ಮಧ್ಯಾಹ್ನ 2.45ಕ್ಕೆ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರವಾದ ರುದ್ರಾಕ್ಷಕ್ಕೆ ಭೇಟಿ ನೀಡಿ, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಕುರಿತು ‘ಅಖಿಲ ಭಾರತೀಯ ಶಿಕ್ಷಾ ಸಮಾಗಮ’ವನ್ನು ಉದ್ಘಾಟಿಸಲಿದ್ದಾರೆ.

ಇಂದು ಸಂಜೆ 4 ಗಂಟೆಗೆ ಪ್ರಧಾನಮಂತ್ರಿ ಮೋದಿ ಸಿಗ್ರಾದ ಡಾ. ಸಂಪೂರ್ಣಾನಂದ ಸ್ಪೋರ್ಟ್ಸ್ ಸ್ಟೇಡಿಯಂ ತಲುಪುತ್ತಾರೆ. ಅಲ್ಲಿ ಅವರು 1,800 ಕೋಟಿ. ರೂ.ಗಿಂತ ಹೆಚ್ಚಿನ ಮೊತ್ತದ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಇದನ್ನೂ ಓದಿ: Rahul Gandhi: ಮೋದಿ ಸರ್​ನೇಮ್ ಕುರಿತು ಟೀಕೆ; ಮಾನನಷ್ಟ ಮೊಕದ್ದಮೆ ರದ್ದುಗೊಳಿಸಲು ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾ

ಇದಿಷ್ಟೇ ಅಲ್ಲದೆ 1,200 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಾರಾಣಸಿ ನಗರದಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಸಾಮಾನ್ಯ ಜನರಿಗೆ ಜೀವನ ಸೌಕರ್ಯವನ್ನು ಹೆಚ್ಚಿಸಲು ಯೋಜನೆಗಳನ್ನು ರೂಪಿಸಲಾಗಿದೆ.

ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ವಿಶ್ವಬ್ಯಾಂಕ್ ನೆರವಿನಲ್ಲಿ ಉತ್ತರ ಪ್ರದೇಶದ ಬಡವರ ಪರ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿಯಲ್ಲಿ ಸಾರಾನಾಥ್ ಬೌದ್ಧ ಸರ್ಕ್ಯೂಟ್‌ನ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಹಾಗೇ, ಅಷ್ಟ ವಿನಾಕಾಯ, ದ್ವಾದಶ ಜ್ಯೋತಿರ್ಲಿಂಗ ಯಾತ್ರೆಗಾಗಿ ಪವನ್ ಪಥ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕಲಿದ್ದಾರೆ. ಅಷ್ಟ ಭೈರವ, ನವ ಗೌರಿ ಯಾತ್ರೆ. ಪಂಚಕೋಸಿ ಪರಿಕ್ರಮ ಯಾತ್ರಾ ಮಾರ್ಗದಲ್ಲಿ ಐದು ನಿಲ್ದಾಣ ಮತ್ತು ಹಳೇ ಕಾಶಿಯ ವಿವಿಧ ವಾರ್ಡ್‌ಗಳ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಲಾಗುವುದು.

ಇದನ್ನೂ ಓದಿ: ಬಿಹಾರ ವಿಧಾನಸಭೆಗೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ ಮೋದಿ

ಬಾಬತ್‌ಪುರ-ಕಪ್ಸೇಥಿ-ಭದೋಹಿ ರಸ್ತೆಯಲ್ಲಿ ನಾಲ್ಕು ಪಥದ ರಸ್ತೆ ಮೇಲ್ಸೇತುವೆ (ಆರ್‌ಒಬಿ) ನಿರ್ಮಾಣ ಸೇರಿದಂತೆ ವಿವಿಧ ರಸ್ತೆ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಸೆಂಟ್ರಲ್ ಜೈಲ್ ರಸ್ತೆಯಲ್ಲಿ ವರುಣಾ ನದಿಯ ಮೇಲೆ ಸೇತುವೆ ಮತ್ತು ಪಿಂಡ್ರಾ-ಕತಿರಾವ್ ರಸ್ತೆ ಮತ್ತು ಫೂಲ್ಪುರ್-ಸಿಂಧೌರಾ ಲಿಂಕ್ ರಸ್ತೆಗಳ ಅಗಲೀಕರಣದ ಯೋಜನೆ. ಅಲ್ಲದೆ, ಎಂಟು ಗ್ರಾಮೀಣ ರಸ್ತೆಗಳ ಬಲವರ್ಧನೆ ಮತ್ತು ನಿರ್ಮಾಣ ಮತ್ತು ಏಳು PMGSY ರಸ್ತೆಗಳ ನಿರ್ಮಾಣ ಮತ್ತು ಧರ್ಸೌನಾ-ಸಿಂಧೌರಾ ರಸ್ತೆಯ ಅಗಲೀಕರಣದ ಯೋಜನೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ. ಪ್ರಧಾನಿ ಮೋದಿ ಅವರು ವಿವಿಧ ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada