ಬಾಕಿ ಉಳಿಸಿಕೊಂಡಿರುವ 1 ಲಕ್ಷ ಕೋಟಿ ರೂ.ಗೂ ಅಧಿಕ ವಿದ್ಯುತ್ ಬಿಲ್ ಪಾವತಿಸಲು ರಾಜ್ಯಗಳಿಗೆ ಪ್ರಧಾನಿ ಮೋದಿ ಸೂಚನೆ
ವಿವಿಧ ರಾಜ್ಯಗಳು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಅನ್ನು ಕೂಡಲೇ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಪಾವತಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ.
ವಿವಿಧ ರಾಜ್ಯಗಳು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಅನ್ನು ಕೂಡಲೇ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಪಾವತಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ.
NTPCಯ 5,200 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ವಿವಿಧ ಹಸಿರು ಇಂಧನ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿದರು.
ವಿದ್ಯುತ್ ವಲಯವು ಎದುರಿಸುತ್ತಿರುವ ಸವಾಲುಗಳು ಹಾಗೂ ತಮ್ಮ ಸರ್ಕಾರವು ಹೊಸ ಪರಿವರ್ತನೆಯನ್ನು ಕ್ಷೇತ್ರದಲ್ಲಿ ತಲು ಯಾವ ರೀತಿ ಶ್ರಮಿಸಿದೆ ಎಂಬುದರ ಕುರಿತು ಮಾತನಾಡಿದರು.
8 ವರ್ಷಗಳ ಹಿಂದೆ, ವಿದ್ಯುತ್ ಗ್ರಿಡ್‌ನಲ್ಲಿ ಸಮಸ್ಯೆಗಳು ಇದ್ದವು, ವೈಫಲ್ಯಗಳು ಇದ್ದವು. ವಿದ್ಯುತ್ ಬಳಕೆ ಹೆಚ್ಚಾಗುತ್ತಿರುವಾಗ, ಉತ್ಪಾದನೆ ಕ್ಷೀಣಿಸುತ್ತಿದೆ ಮತ್ತು ವಿದ್ಯುತ್ ವಿತರಣೆ ಕ್ಷೀಣಿಸುತ್ತಿದೆ ಎಂದು ಅವರು ಹೇಳಿದರು. ಎಂಟು ವರ್ಷಗಳ ಹಿಂದೆ, ತಮ್ಮ ಸರ್ಕಾರವು ದೇಶದ ವಿದ್ಯುತ್ ವಲಯದ ಪ್ರತಿಯೊಂದು ಭಾಗವನ್ನ ಪರಿವರ್ತಿಸುವ ಕೆಲಸ ಮಾಡಿತು ಎಂದರು.
ಹಲವು ರಾಜ್ಯಗಳು ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ 1 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಬಾಕಿ ಉಳಿಸಿಕೊಂಡಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವಿವಿಧ ರಾಜ್ಯಗಳಲ್ಲಿ 75,000 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ವಿದ್ಯುತ್ ಸಬ್ಸಿಡಿಗಾಗಿ ಮೀಸಲಿಟ್ಟಿರುವ ಹಣವನ್ನ ಸಹ ಪಡೆಯಲು ಈ ಕಂಪನಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ಹೇಳಿದರು.
ದೇಶದ ವಿದ್ಯುತ್ ವಲಯವನ್ನು ಹೆಚ್ಚಿಸಲು ಉತ್ಪಾದನೆ, ಪ್ರಸರಣ, ವಿತರಣೆ ಮತ್ತು ಸಂಪರ್ಕಕ್ಕಾಗಿ ಕೆಲಸ ಮಾಡಲಾಗಿದೆಎಂದು ಮೋದಿ ಹೇಳಿದರು. ರಾಜ್ಯಗಳು ತಮ್ಮ ಬಾಕಿಯನ್ನ ಪಾವತಿಸಬೇಕೆಂದು ಅವರು ಒತ್ತಾಯಿಸಿದರು. ಆದಷ್ಟು ಬೇಗ ಬಾಕಿಯನ್ನು ಪಾವತಿಸುವಂತೆ ನಾನು ಅವರನ್ನ ಒತ್ತಾಯಿಸುತ್ತೇನೆ.
ಎನ್ಡಿಎ ಸರ್ಕಾರದ ಆಡಳಿತದ ಎಂಟು ವರ್ಷಗಳಲ್ಲಿ, ಈ ವಲಯಕ್ಕೆ ಸುಮಾರು ಒಂದು ಲಕ್ಷ 70 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನ ಸೇರಿಸಲಾಗಿದೆ. ಒಂದು ದೇಶ ಒಂದು ಪವರ್ ಗ್ರಿಡ್ ದೇಶದ ಶಕ್ತಿಯಾಗಿದೆ. ಇಲ್ಲಿಯವರೆಗೆ, ಪಳೆಯುಳಿಕೆಯೇತರ ಮೂಲಗಳಿಂದ ಸುಮಾರು 170 ಗಿಗಾವ್ಯಾಟ್ ಸಾಮರ್ಥ್ಯವನ್ನ ಸ್ಥಾಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಮುಂದಿನ 25 ವರ್ಷಗಳಲ್ಲಿ ಭಾರತದ ಪ್ರಗತಿಯನ್ನು ಬಲಪಡಿಸುವಲ್ಲಿ ಇಂಧನ ಮತ್ತು ವಿದ್ಯುತ್ ವಲಯವು ಉತ್ತಮ ಪಾತ್ರ ನಿರ್ವಹಿಸಲಿದೆ ಎಂದು ಹೇಳಿದರು.
Published On - 4:39 pm, Sat, 30 July 22