Monkeypox: ಭಾರತದ ಮೊದಲ ಮಂಕಿಪಾಕ್ಸ್ ಸೋಂಕಿತ ಗುಣಮುಖ

TV9 Digital Desk

| Edited By: ಅಕ್ಷಯ್​ ಪಲ್ಲಮಜಲು​​

Updated on: Jul 30, 2022 | 3:27 PM

ದೇಶದ ಮೊದಲ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿ ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಇದೀಗ ಮಂಕಿಪಾಕ್ಸ್​ನಿಂದ ಚೇತರಿಸಿಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಇಂದು ತಿಳಿಸಿದ್ದಾರೆ. ಕೇರಳದ ಕೊಲ್ಲಂನ 35 ವರ್ಷದ ವ್ಯಕ್ತಿಯನ್ನು ಇಂದು ಡಿಸ್ಚಾರ್ಜ್ ಮಾಡಲಾಗುವುದು ಎಂದು ಅವರು ಹೇಳಿದರು.

Monkeypox: ಭಾರತದ ಮೊದಲ ಮಂಕಿಪಾಕ್ಸ್ ಸೋಂಕಿತ ಗುಣಮುಖ
Monkeypox

ತಿರುವನಂತಪುರಂ: ದೇಶದ ಮೊದಲ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿ ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಇದೀಗ ಮಂಕಿಪಾಕ್ಸ್​ನಿಂದ ಚೇತರಿಸಿಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಇಂದು ತಿಳಿಸಿದ್ದಾರೆ. ಕೇರಳದ ಕೊಲ್ಲಂನ 35 ವರ್ಷದ ವ್ಯಕ್ತಿಯನ್ನು ಇಂದು ಡಿಸ್ಚಾರ್ಜ್ ಮಾಡಲಾಗುವುದು ಎಂದು ಅವರು ಹೇಳಿದರು.

ಇದು  ದೇಶದಲ್ಲಿ ಮೊದಲ ಪತ್ತೆಯಾದ  ಮಂಕಿಪಾಕ್ಸ್ ಪ್ರಕರಣವಾಗಿರುವುದರಿಂದ, ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ಸೂಚನೆಯಂತೆ 72 ಗಂಟೆಗಳ ಮಧ್ಯಂತರದಲ್ಲಿ ಎರಡು ಬಾರಿ ಪರೀಕ್ಷೆಗಳನ್ನು ನಡೆಸಲಾಯಿತು. ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಅವರ ಕುಟುಂಬದ ಸದಸ್ಯರ ಪರೀಕ್ಷೆಯ ಫಲಿತಾಂಶವೂ ನಕಾರಾತ್ಮಕವಾಗಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ

ಸೋಂಕಿಗೆ ಸಂಬಂಧಿಸಿದಂತೆ ಎಲ್ಲ ಪರೀಕ್ಷೆಗಳನ್ನು ನಡೆಸಲಾಗಿದೆ. ಇಬ್ಬರ ಆರೋಗ್ಯದ  ಸ್ಥಿತಿ ಉತ್ತಮವಾಗಿದೆ. ಮಂಕಿಪಾಕ್ಸ್ ವಿರುದ್ಧ  ತಡೆಗಟ್ಟುವಿಕೆ ಕ್ರಮಗಳನ್ನು  ಕೈಗೊಳ್ಳಲಾಗಿದೆ. ಮತ್ತೆ ಅದೇ ಸ್ಥಿತಿ ಅವರು ಬಂದಿದ್ದಾರೆ. ದೇಹದಲ್ಲಿ ಯಾವುದೇ ಕಲೆಗಳು ಇಲ್ಲ  ಎಂದು ಸಚಿವರು ಹೇಳಿದರು. ಎಲ್ಲ ಮಾದರಿಗಳು ಎರಡು ಬಾರಿ ಋಣಾತ್ಮಕ ವರದಿ ಬಂದಿದೆ. ರೋಗಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾರೆ. ಚರ್ಮದ ಉಬ್ಬುಗಳು ಸಂಪೂರ್ಣವಾಗಿ ಗುಣಮುಖವಾಗಿವೆ. ಇಂದು ಅವರನ್ನು  ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು Ms ಜಾರ್ಜ್ ಹೇಳಿದರು.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada