AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monkeypox: ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳಬೇಡಿ; ಮಂಕಿಪಾಕ್ಸ್​ ಹರಡುವಿಕೆ ತಡೆಯಲು WHO ಹೊಸ ಮಾರ್ಗಸೂಚಿ

Monkeypox Symptoms: ಲೈಂಗಿಕ ಕ್ರಿಯೆ ಮೂಲಕವೂ ಮಂಕಿಪಾಕ್ಸ್​ ಹರಡುತ್ತದೆ ಎಂಬ ಆತಂಕಕಾರಿ ಸಂಗತಿಯನ್ನು ವಿಜ್ಞಾನಿಗಳು ತಿಳಿಸಿದ್ದಾರೆ. ಅದರಲ್ಲೂ ಸಲಿಂಗಿಗಳಲ್ಲಿ ಮಂಕಿಪಾಕ್ಸ್​ ಹರಡುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

Monkeypox: ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳಬೇಡಿ; ಮಂಕಿಪಾಕ್ಸ್​ ಹರಡುವಿಕೆ ತಡೆಯಲು WHO ಹೊಸ ಮಾರ್ಗಸೂಚಿ
ಮಂಕಿಪಾಕ್ಸ್​
TV9 Web
| Updated By: ಸುಷ್ಮಾ ಚಕ್ರೆ|

Updated on: Jul 28, 2022 | 9:13 AM

Share

ನವದೆಹಲಿ: ಕೊವಿಡ್-19 ಬೆನ್ನಲ್ಲೇ ಜಗತ್ತಿನಾದ್ಯಂತ ಇದೀಗ ಮಂಕಿಪಾಕ್ಸ್​ (Monkeypox) ವೈರಸ್​ ಭಾರೀ ಆತಂಕ ಮೂಡಿಸಿದೆ. ಕೊವಿಡ್ (COVID-19) ಸೋಂಕಿತರ ಸಂಖ್ಯೆ ಕೊಂಚ ಕಡಿಮೆಯಾಗುತ್ತಿರುವುದಕ್ಕೆ ನಿಟ್ಟುಸಿರು ಬಿಡುತ್ತಿರುವಂತೆಯೇ ಸಾಂಕ್ರಾಮಿಕವಾಗಿ ಹರಡುತ್ತಿರುವ ಮಂಕಿಪಾಕ್ಸ್​ ಮತ್ತೊಮ್ಮೆ ಭಯ ಹುಟ್ಟಿಸಿದೆ. ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಸಾವಿರಾರು ಮಂಕಿಪಾಕ್ಸ್​ ಪ್ರಕರಣಗಳು ವರದಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಕೆಲವು ಸುರಕ್ಷತಾ ಮಾರ್ಗಸೂಚಿಗಳನ್ನು ನೀಡಿದೆ.

ಲೈಂಗಿಕ ಕ್ರಿಯೆ ಮೂಲಕವೂ ಮಂಕಿಪಾಕ್ಸ್​ ಹರಡುತ್ತದೆ ಎಂಬ ಆತಂಕಕಾರಿ ಸಂಗತಿಯನ್ನು ವಿಜ್ಞಾನಿಗಳು ತಿಳಿಸಿದ್ದಾರೆ. ಅದರಲ್ಲೂ ಸಲಿಂಗಿಗಳಲ್ಲಿ ಮಂಕಿಪಾಕ್ಸ್​ ಹರಡುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತನ್ನ ಮಾರ್ಗಸೂಚಿಗಳಲ್ಲಿ ಪುರುಷರ ಜೊತೆ ಲೈಂಗಿಕ ಕ್ರಿಯೆ ನಡೆಸುವ ಪುರುಷರು (ಸಲಿಂಗಿಗಳು) ತಮ್ಮ ಸಂಗಾತಿಗಳ ಸಂಖ್ಯೆಯನ್ನು ಕಡಿಮೆಗೊಳಿಸಬೇಕು. ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದರೆ ಅದರ ಅಪಾಯವೂ ಹೆಚ್ಚಾಗಿರುತ್ತದೆ ಎಂದು ಸಲಹೆ ನೀಡಿದೆ.

ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕಳೆದ ವಾರ WHO ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಇದನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ್ದರು. “ಪುರುಷರೊಂದಿಗೆ ಸಂಭೋಗಿಸುವ ಪುರುಷರು ನಿಮ್ಮ ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಕಡಿಮೆ ಮಾಡುವುದು, ಹೊಸ ಪಾರ್ಟನರ್​​ಗಳ ಜೊತೆ ಲೈಂಗಿಕ ಕ್ರಿಯೆ ನಡೆಸುವಾಗ ನಿಮ್ಮ ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಗಮನಹರಿಸುವುದು, ಹೊಸ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಮಾಡುವ ಮುನ್ನ ಅವರ ಆರೋಗ್ಯದ ಮಾಹಿತಿ ಪಡೆಯುವುದು, ಅವರ ನಂಬರ್, ವಿಳಾಸ ಇತ್ಯಾದಿಗಳನ್ನು ಪಡೆಯುವುದು ಮುಖ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ.

ಇದನ್ನೂ ಓದಿ
Image
Monkeypox: ಮಂಕಿಪಾಕ್ಸ್​ ರೋಗದ ಲಕ್ಷಣಗಳೇನು? ಯಾವಾಗ ಚಿಕಿತ್ಸೆ ಪಡೆಯಬೇಕು?
Image
Monkeypox: ಮಂಕಿಪಾಕ್ಸ್​ ಸೋಂಕನ್ನು ಸಾಂಕ್ರಾಮಿಕ ರೋಗವೆಂದು ಘೋಷಣೆ
Image
Monkeypox: ಇಂಗ್ಲೆಂಡ್​ನಲ್ಲಿ 36 ಹೊಸ ಮಂಕಿಪಾಕ್ಸ್​ ವೈರಸ್ ಪತ್ತೆ; ಲೈಂಗಿಕ ಕ್ರಿಯೆಯಿಂದಲೂ ಹರಡುತ್ತಂತೆ ಈ ರೋಗ!
Image
Monkeypox: ಬೆಲ್ಜಿಯಂನಲ್ಲಿ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ಪತ್ತೆ | ರೋಗಿಗಳಿಗೆ 21 ದಿನಗಳ ಕಾಲ ಕ್ವಾರಂಟೈನ್

ಇದನ್ನೂ ಓದಿ: Monkeypox VS Covid 19: ಮಂಕಿಪಾಕ್ಸ್​ ಹಾಗೂ ಕೋವಿಡ್-19 ನಡುವೆ ಸಾಮ್ಯತೆ ಇದೆಯೇ?

78 ದೇಶಗಳಲ್ಲಿ ಈಗ 18,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ. ಒಟ್ಟು ಪ್ರಕರಣಗಳಲ್ಲಿ ಶೇ.70ರಷ್ಟು ಕೇಸ್​ಗಳು ಯುರೋಪ್‌ನಲ್ಲಿ ವರದಿಯಾಗಿದೆ. ಶೇ. 25ರಷ್ಟು ಪ್ರಕರಣಗಳು ಅಮೆರಿಕದಾದ್ಯಂತ ವರದಿಯಾಗಿವೆ. ಮಂಕಿಪಾಕ್ಸ್​ ಪ್ರಕರಣಗಳ ಉಲ್ಬಣದ ಹೊರತಾಗಿಯೂ ಮಂಕಿಪಾಕ್ಸ್​​ನಿಂದ ಏಕಾಏಕಿ ಸಾವನ್ನಪ್ಪುವವರ ಸಂಖ್ಯೆ ಭಾರೀ ಕಡಿಮೆಯಾಗಿದೆ ಎಂಬುದು ಕೊಂಚ ಸಮಾಧಾನಕರ ಸಂಗತಿ.

ವೈದ್ಯಕೀಯ ತಜ್ಞರು ಮತ್ತು ವಿಜ್ಞಾನಿಗಳು ಇದುವರೆಗೂ ಪತ್ತೆಯಾಗಿರುವ ಮಂಕಿಪಾಕ್ಸ್​​ನ ಎಲ್ಲಾ ಪ್ರಕರಣಗಳಲ್ಲಿ ಶೇ. 98ರಷ್ಟು ಮಂಕಿಪಾಕ್ಸ್​​ನಿಂದ ಬಳಲುತ್ತಿರುವ ಪುರುಷರು ಇತರ ಪುರುಷರೊಂದಿಗೆ ಲೈಂಗಿಕ ಸಂಬಂಧಗಳಲ್ಲಿ ತೊಡಗುತ್ತಾರೆ ಎಂದು ತಿಳಿದುಬಂದಿದೆ. ಈ ರೋಗದ ಮುಖ್ಯ ಲಕ್ಷಣವೆಂದರೆ ಗುಳ್ಳೆಗಳ ದದ್ದು. ಆದರೆ, ಇದನ್ನು ಇನ್ನೂ ಲೈಂಗಿಕವಾಗಿ ಹರಡುವ ಸೋಂಕು (STI) ಎಂದು ಅಧಿಕೃತವಾಗಿ ಹೇಳಿಲ್ಲ.

ಇದನ್ನೂ ಓದಿ: Kerala Monkeypox: ಕೇರಳದಲ್ಲಿ ಭಾರತದ ಮೊದಲ ಮಂಕಿಪಾಕ್ಸ್​ ಕೇಸ್ ಪತ್ತೆ; ತಜ್ಞರ ತಂಡ ಕಳುಹಿಸಿದ ಕೇಂದ್ರ ಸರ್ಕಾರ

ಮೂಲಗಳ ಪ್ರಕಾರ, ಮಂಕಿಪಾಕ್ಸ್ ಯಾವುದೇ ರೀತಿಯ ದೈಹಿಕ ಸಂಪರ್ಕದ ಮೂಲಕ ಹರಡಬಹುದು. ಇದು ಚುಂಬನ, ಸ್ಪರ್ಶ, ಲೈಂಗಿಕ ಕ್ರಿಯೆಯ ಮೂಲಕ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಹೀಗಾಗಿ ಮೈಯಲ್ಲಿ ಯಾವುದೇ ಹೊಸ ರೀತಿಯ ದದ್ದುಗಳು ಮೂಡಿದಾಗ ನೀವು ಲೈಂಗಿಕ ಕ್ರಿಯೆಯಿಂದ ದೂರವಿರುವುದು ಒಳಿತು. ಮಂಕಿಪಾಕ್ಸ್ ವೈರಸ್ ವೀರ್ಯದಲ್ಲಿ ಕಂಡುಬಂದಿದ್ದರೂ, ಇದು ವೀರ್ಯ ಅಥವಾ ಯೋನಿ ದ್ರವಗಳ ಮೂಲಕ ಹರಡಬಹುದೇ ಎಂಬುದು ತಿಳಿದಿಲ್ಲ.

ಹಾಗೇ, ಮಂಕಿಪಾಕ್ಸ್​ ಸೋಂಕು ಹೊಂದಿರುವವರು ಚೇತರಿಸಿಕೊಂಡ ಬಳಿಕ 12 ವಾರಗಳವರೆಗೆ ಕಾಂಡೋಮ್‌ಗಳನ್ನು ಬಳಸಲು ವೈದ್ಯರು ಸಲಹೆ ನೀಡಿದ್ದಾರೆ. ಮಂಕಿಪಾಕ್ಸ್​ ವೈರಸ್ ಲೈಂಗಿಕ ಸಂಪರ್ಕದ ಮೂಲಕ ಮಾತ್ರ ಹರಡುವುದಿಲ್ಲ, ಆದರೆ ಈ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯೊಂದಿಗೆ ಯಾವುದೇ ರೀತಿಯ ದೈಹಿಕ ಸಂಪರ್ಕದ ಮೂಲಕ ಬಹಳ ಸುಲಭವಾಗಿ ಹರಡುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಮಂಕಿಪಾಕ್ಸ್​​ ಹರಡದಂತೆ ತಡೆಯಲು ಈ ರೀತಿ ಮಾಡಿ:

ಸೋಂಕಿಗೆ ಒಳಗಾಗಿರುವ ಶಂಕಿತ ಜನರೊಂದಿಗೆ ಚರ್ಮದ ಸಂಪರ್ಕ ಮಾಡುವುದನ್ನು ತಪ್ಪಿಸಿ. ಗುಳ್ಳೆಗಳನ್ನು ಹೊಂದಿರುವ ವ್ಯಕ್ತಿಯೊಂದಿಗೆ ಯಾವುದೇ ಸಂಪರ್ಕ ಮಾಡಬೇಡಿ.

– ಸೋಪ್ ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ನೊಂದಿಗೆ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ.

– ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ತೋಳನ್ನು ಅಡ್ಡ ಇಟ್ಟುಕೊಳ್ಳಿ.

– ಶಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಸೈಂಗಿಕ ಕ್ರಿಯೆ ಮಾಡಬೇಡಿ.

– ಅನಾರೋಗ್ಯ ಇರುವ ರೋಗಿಯ ಮೈಯಿಂದ ಹೊರಹೊಮ್ಮುವ ಯಾವುದೇ ದ್ರವ ಅಥವಾ ವಸ್ತುವನ್ನು ಮುಟ್ಟಬೇಡಿ.

– ಮಾಂಸವನ್ನು ತಿನ್ನುವ ಮೊದಲು ಚೆನ್ನಾಗಿ ಬೇಯಿಸಿ.

ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ