Monkeypox: ಆರೋಗ್ಯವಂತ ಶಿಶುವಿಗೆ ಜನ್ಮ ನೀಡಿದ ಮಂಕಿಪಾಕ್ಸ್ ಸೋಂಕಿತೆ
ಮಂಕಿಪಾಕ್ಸ್ (Monkeypox) ಸೋಂಕು ತಗುಲಿರುವ ಮಹಿಳೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿರುವ ಕುರಿತು ಅಮೆರಿಕದ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಕೇಂದ್ರವು ಮಾಹಿತಿ ನೀಡಿದೆ.
ಮಂಕಿಪಾಕ್ಸ್ (Monkeypox) ಸೋಂಕು ತಗುಲಿರುವ ಮಹಿಳೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿರುವ ಕುರಿತು ಅಮೆರಿಕದ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಕೇಂದ್ರವು ಮಾಹಿತಿ ನೀಡಿದೆ. ಸಿಡಿಸಿಯು ಮಂಕಿಪಾಕ್ಸ್ ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ ಎಂದು ಹೇಳಿತ್ತು. ಇದೀಗ ತಾಯಿ ಹಾಗೂ ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಗರ್ಭಿಣಿಗೆ ಮಂಕಿಪಾಕ್ಸ್ ಸೋಂಕು ತಗುಲಿದರೆ ಮಗುವಿಗೆ ತಗುಲುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಗರ್ಭಿಣಿಗೆ ಮಂಕಿಪಾಕ್ಸ್ ಸೋಂಕು ತಗುಲಿರುವ ಮೊದಲ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ಆಫ್ರಿಕಾದಲ್ಲಿ ಹೆಚ್ಚು ಮಂದಿ ಗರ್ಭಿಣಿಯರಿಗೆ ಸೋಂಕು ತಗುಲಿತ್ತು.
ಜೂನ್ನಲ್ಲಿ ಲ್ಯಾನ್ಸೆಟ್ನಲ್ಲಿ ಪ್ರಕಟವಾದ ವರದಿ ಪ್ರಕಾರ, 2007-2011ರವರೆಗೆ ಡೆಮೊಕ್ರೆಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋದಲ್ಲಿ ನಾಲ್ಕು ಗರ್ಭಿಣಿಯರಿಗೆ ಸೋಂಕು ತಗುಲಿತ್ತು. ಒಟ್ಟು 78 ದೇಶಗಳಿಂದ 18,000ಕ್ಕೂ ಅಧಿಕ ಮಂಕಿಪಾಕ್ಸ್ ಪ್ರಕರಣಗಳು ಬೆಳಕಿಗೆ ಬಂದಿವೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುವ ಅಪರೂಪದ ಕಾಯಿಲೆಯಾಗಿದೆ. ಮಂಕಿಪಾಕ್ಸ್ ವೈರಸ್ ಪಾಕ್ಸ್ವಿರಿಡೆ ಕುಟುಂಬದಲ್ಲಿ ಆರ್ಥೋಪಾಕ್ಸ್ ವೈರಸ್ ಕುಲಕ್ಕೆ ಸೇರಿದೆ. ಆರ್ಥೋಪಾಕ್ಸ್ ವೈರಸ್ ಕುಲವು ವೆರಿಯೊಲಾ ವೈರಸ್ (ಸಿಡುಬುಗೆ ಕಾರಣವಾಗುತ್ತದೆ), ವ್ಯಾಕ್ಸಿನಿಯಾ ವೈರಸ್ ( ಮತ್ತು ಕೌಪಾಕ್ಸ್ ವೈರಸ್ ಅನ್ನು ಸಹ ಒಳಗೊಂಡಿದೆ.
ಸೆಂಟರ್ ಫಾರ್ ಡಿಸೀಸ್ ಅಂಡ್ ಕಂಟ್ರೋಲ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಮಾನವರಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಚಿಕನ್‌ಪಾಕ್ಸ್‌ನಂತೆಯೇ ಇರುತ್ತವೆ, ಆದರೆ ಸೌಮ್ಯವಾಗಿರುತ್ತವೆ ಮತ್ತು ಜ್ವರ, ತಲೆನೋವು, ಸ್ನಾಯು ನೋವು ಮತ್ತು ಆಯಾಸದಿಂದ ಸೋಂಕಿನ ನಂತರ 7-14 ದಿನಗಳ ನಂತರ ಪ್ರಾರಂಭವಾಗುತ್ತದೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ ಮತ್ತು ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು.
ಮಂಕಿಪಾಕ್ಸ್ ಕಾಯಿಲೆಯನ್ನು ತಪ್ಪಿಸುವುದು ಹೇಗೆ? -ಮಂಕಿಪಾಕ್ಸ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳುವುದು. -ಆಗಾಗ ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆಯಿರಿ ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಬಳಸಿ. -ಮಂಗನ ಕಾಯಿಲೆಯ ಲಕ್ಷಣಗಳು ಕಂಡುಬಂದರೆ, ಮನೆಯಲ್ಲಿಯೇ ಇರಿ. – ಈ ಸಂದರ್ಭದಲ್ಲಿ ನಿಮ್ಮ ಸಾಕುಪ್ರಾಣಿಗಳಿಂದಲೂ ಅಂತರ ಕಾಯ್ದುಕೊಳ್ಳಿ. -ಮಂಕಿಪಾಕ್ಸ್‌ನ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯ ಟವೆಲ್‌ಗಳು ಅಥವಾ ಬಟ್ಟೆಗಳಂತಹ ವೈಯಕ್ತಿಕ ವಸ್ತುಗಳನ್ನು ಮುಟ್ಟಬೇಡಿ.
Published On - 3:10 pm, Thu, 28 July 22