AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monkeypox Symptoms: ಮಂಕಿಪಾಕ್ಸ್ ಸೋಂಕಿನ​ ರೋಗಲಕ್ಷಣಗಳು ಈಗ ಮೊದಲಿನಂತಿಲ್ಲ

Monkeypox: ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ ಮಂಕಿಪಾಕ್ಸ್‌ ಹರಡುವಿಕೆಯನ್ನು ಅಂತಾರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ.

Monkeypox Symptoms: ಮಂಕಿಪಾಕ್ಸ್ ಸೋಂಕಿನ​ ರೋಗಲಕ್ಷಣಗಳು ಈಗ ಮೊದಲಿನಂತಿಲ್ಲ
ಮಂಕಿಪಾಕ್ಸ್​
TV9 Web
| Edited By: |

Updated on:Jul 29, 2022 | 1:31 PM

Share

ನವದೆಹಲಿ: ಜಗತ್ತಿನಾದ್ಯಂತ ಮಂಕಿಪಾಕ್ಸ್ (Monkeypox)  ಪ್ರಕರಣಗಳು ಹೆಚ್ಚುತ್ತಲೇ ಇದೆ. ಭಾರತದಲ್ಲೂ ಮಂಕಿಪಾಕ್ಸ್​ನ ಹೊಸ ಕೇಸುಗಳು ಪತ್ತೆಯಾಗುತ್ತಿರುವುದರಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ. ಈ ಹಿಂದೆ ಜ್ವರ, ತಲೆನೋವು, ಸ್ನಾಯು ನೋವು ಮತ್ತು ಸುಸ್ತು ಹಾಗೂ ದದ್ದುಗಳು ಮಂಕಿಪಾಕ್ಸ್​ನ ಲಕ್ಷಣಗಳು (Monkeypox Symptoms) ಎನ್ನಲಾಗಿತ್ತು. ಆದರೆ, ಆಫ್ರಿಕನ್ ಪ್ರದೇಶಗಳಲ್ಲಿ ಮೊದಲು ಪತ್ತೆಯಾದ ಮಂಕಿಪಾಕ್ಸ್​ ರೋಗ ಲಕ್ಷಣಗಳಿಗಿಂತಲೂ ಈಗಿನ ಲಕ್ಷಣಗಳು ಭಿನ್ನವಾಗಿವೆ.

ಇದಕ್ಕಾಗಿ 197 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಈ ಎಲ್ಲಾ 197 ಜನರೂ ಸರಾಸರಿ 38 ವರ್ಷ ವಯಸ್ಸಿನ ಪುರುಷರು. ಭಾಗವಹಿಸಿದವರಲ್ಲಿ 196 ಜನರು ಸಲಿಂಗಕಾಮಿ ಅಥವಾ ಪುರುಷರೊಂದಿಗೆ ಲೈಂಗಿಕತೆ ಹೊಂದಿರುವ ಪುರುಷರು ಎಂದು ಗುರುತಿಸಲಾಗಿದೆ. ಇನ್ನೊಬ್ಬರು ಮಾತ್ರ ಸಲಿಂಗಿಯಲ್ಲದ ರೋಗಿಯಾಗಿದ್ದರು.

197 ಪುರುಷರಲ್ಲಿ 170 (ಶೇ.86.3) ಜನರಿಗೆ ಅನಾರೋಗ್ಯವಿತ್ತು. ಅವರಲ್ಲಿ ಶೇ. 61.9 ಜನರಿಗೆ ಜ್ವರ, ಶೇ. 57.9 ಜನರಿಗೆ ಲಿಂಫಾಡೆನೋಪತಿ ಮತ್ತು ಶೇ. 31.5 ಮಂದಿಗೆ ಮೈಯಾಲ್ಜಿಯಾ ಕಾಣಿಸಿಕೊಂಡಿತ್ತು. ಇವರಲ್ಲಿ 36 ಮಂದಿಗೆ ಗುದನಾಳದ ನೋವು, 33 ಜನರಿಗೆ ಗಂಟಲು ನೋವು, 31 ಜನ ಶಿಶ್ನ ಎಡಿಮಾ ಸಮಸ್ಯೆಯನ್ನು ಅನುಭವಿಸುತ್ತಿದ್ದರು.

ಇದನ್ನೂ ಓದಿ: Monkeypox: ಮಂಕಿಪಾಕ್ಸ್​ಗೂ ಮಂಗಗಳಿಗೂ ಸಂಬಂಧವಿದೆಯೇ? ವೈರಸ್​ಗೆ ಮಂಕಿಪಾಕ್ಸ್ ಎಂದು ಹೆಸರು ಬರಲು ಕಾರಣವೇನು?

ಸುಮಾರು ಶೇ. 35.9ರಷ್ಟು ಜನರ ಪಾರ್ಟನರ್​​ಗಳು HIV ಸೋಂಕನ್ನು ಹೊಂದಿದ್ದರು. ಲೈಂಗಿಕವಾಗಿ ಹರಡುವ ಸೋಂಕುಗಳಿಗಾಗಿ ಪರೀಕ್ಷಿಸಲ್ಪಟ್ಟವರಲ್ಲಿ ಶೇ. 31.5ರಷ್ಟು ಜನರು ಲೈಂಗಿಕವಾಗಿ ಹರಡುವ ಸೋಂಕನ್ನು ಹೊಂದಿದ್ದರು. ಶಿಶ್ನದ ನೋವು, ಮರ್ಮಾಂಗದ ಊತ, ಜ್ವರ, ತಲೆನೋವು, ಸ್ನಾಯು ನೋವು ಮತ್ತು ಬೆನ್ನುನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಶೀತ ಮತ್ತು ಬಳಲಿಕೆ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಮಂಕಿಪಾಕ್ಸ್ ಹೇಗೆ ಹರಡುತ್ತದೆ?: ಇದು ಸಿಡುಬು ವೈರಸ್‌ ರೀತಿಯದ್ದೇ ಒಂದು ವೈರಸ್ ಆಗಿದೆ. ಮಂಕಿಪಾಕ್ಸ್ ವೈರಸ್ ಸೋಂಕಿತ ಪ್ರಾಣಿ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಿಂದ ಹರಡಬಹುದು. ಸಾಮಾನ್ಯವಾಗಿ ದದ್ದು, ಹುಣ್ಣುಗಳು ಹೊಂದಿರುವ ವ್ಯಕ್ತಿಯೊಂದಿಗೆ ಚರ್ಮದಿಂದ ಚರ್ಮದ ಸಂಪರ್ಕಕ್ಕೆ ಒಳಗಾದರೆ ಮನುಷ್ಯನಿಂದ ಮನುಷ್ಯನಿಗೆ ಈ ಸೋಂಕು ಹರಡುತ್ತದೆ. ಇದು ನಿಕಟ ಲೈಂಗಿಕ ಸಂಪರ್ಕದ ಸಮಯದಲ್ಲಿ ಉಸಿರಾಟದ ಹನಿಗಳು ಅಥವಾ ದೇಹದ ಇತರೆ ದ್ರವಗಳ (ಚುಂಬನ, ಸಂಭೋಗ) ಮೂಲಕವೂ ಹರಡಬಹುದು. ಮಂಕಿಪಾಕ್ಸ್ ವೈರಸ್‌ನಿಂದ ಕಲುಷಿತಗೊಂಡಿರುವ ಬಟ್ಟೆಗಳು, ವಸ್ತುಗಳ ಮೂಲಕವೂ ಇತರರಿಗೆ ಸೋಂಕು ಹರಡಲು ಕಾರಣವಾಗಬಹುದು.

ಇದನ್ನೂ ಓದಿ: Monkeypox: ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳಬೇಡಿ; ಮಂಕಿಪಾಕ್ಸ್​ ಹರಡುವಿಕೆ ತಡೆಯಲು WHO ಹೊಸ ಮಾರ್ಗಸೂಚಿ

ಮಾನವರಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಸಿಡುಬಿನ ಲಕ್ಷಣಗಳಿಗೆ ಸ್ವಲ್ಪಮಟ್ಟಿಗೆ ಹೋಲುತ್ತದೆ. ಮಂಕಿಪಾಕ್ಸ್​ ಜ್ವರ, ತಲೆನೋವು, ಸ್ನಾಯು ನೋವು ಮತ್ತು ಬಳಲಿಕೆಯಿಂದ ಪ್ರಾರಂಭವಾಗುತ್ತದೆ. ಸಿಡುಬು ಮತ್ತು ಮಂಕಿಪಾಕ್ಸ್ ರೋಗಲಕ್ಷಣಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಮಂಕಿಪಾಕ್ಸ್ ದುಗ್ಧರಸ ಗ್ರಂಥಿಗಳು ಊದಿಕೊಳ್ಳಲು ಕಾರಣವಾಗುತ್ತದೆ (ಲಿಂಫಡೆನೋಪತಿ). ಮಂಕಿಪಾಕ್ಸ್‌ಗೆ ಅವಧಿಯು (ಸೋಂಕಿನಿಂದ ರೋಗಲಕ್ಷಣಗಳವರೆಗೆ) ಸಾಮಾನ್ಯವಾಗಿ 7-14 ದಿನಗಳು ಅಥವಾ 5-21 ದಿನಗಳವರೆಗೆ ಇರುತ್ತದೆ.

Published On - 1:28 pm, Fri, 29 July 22

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ