AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್​​ ತಲುಪಿದ ಪ್ರಧಾನಿ ಮೋದಿ; ರಾಜ್​ಕೋಟ್​ನಲ್ಲಿ ಮಾರಿಷಸ್ ಪ್ರಧಾನಮಂತ್ರಿಗೆ ಭರ್ಜರಿ ಸ್ವಾಗತ, ರೋಡ್ ಶೋ​

ಏಪ್ರಿಲ್​ 19ರಂದು ಬೆಳಗ್ಗೆ 9.40ಕ್ಕೆ ಬನಸ್ಕಾಂತಾದ ಡಿಯೋಡರ್​​ನಲ್ಲಿರುವ ಬನಾಸ್​ ಡೇರಿ ಸಂಕುಲ್​​ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದಾರೆ. ಮಧ್ಯಾಹ್ನ 3.30ರ ಹೊತ್ತಿಗೆ ಜಮ್ನಗರ್​​ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧ ಜಾಗತಿಕ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಗುಜರಾತ್​​ ತಲುಪಿದ ಪ್ರಧಾನಿ ಮೋದಿ; ರಾಜ್​ಕೋಟ್​ನಲ್ಲಿ ಮಾರಿಷಸ್ ಪ್ರಧಾನಮಂತ್ರಿಗೆ ಭರ್ಜರಿ ಸ್ವಾಗತ, ರೋಡ್ ಶೋ​
ನರೇಂದ್ರ ಮೋದಿ
TV9 Web
| Edited By: |

Updated on: Apr 18, 2022 | 9:46 PM

Share

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದಿನಿಂದ ಗುಜರಾತ್ ಪ್ರವಾಸದಲ್ಲಿದ್ದಾರೆ. ಇಂದು ಗುಜರಾತ್​ಗೆ ಹೋದ ಅವರು ಮೊದಲು ಗಾಂಧಿನಗರದಲ್ಲಿರುವ ಕಮಾಂಡ್​ ಮತ್ತು ಕಂಟ್ರೋಲ್ ಸೆಂಟರ್ ಫಾರ್ ಸ್ಕೂಲ್​​ಗೆ ಭೇಟಿ ಕೊಟ್ಟರು.  ಅಲ್ಲಿ ನಡೆಯುತ್ತಿದ್ದ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡು ಪರಿಶೀಲನೆ ನಡೆಸಿದ್ದಾರೆ. ಅದಕ್ಕೂ ಮೊದಲು ಪ್ರಧಾನಿ ಮೋದಿ ವೇದವ್ಯಾಸ ಮಹರ್ಷಿಗೆ ಪುಷ್ಪ ನಮನ ಸಲ್ಲಿಸಿ, ದೀಪ ಹಚ್ಚಿದರು.  ಪ್ರಧಾನಿ  ನರೇಂದ್ರ ಮೋದಿ ಏಪ್ರಿಲ್​ 20ರವರೆಗೆ ಗುಜರಾತ್​ನಲ್ಲಿಯೇ ಇರಲಿದ್ದಾರೆ.

ಏಪ್ರಿಲ್​ 19ರಂದು ಬೆಳಗ್ಗೆ 9.40ಕ್ಕೆ ಬನಸ್ಕಾಂತಾದ ಡಿಯೋಡರ್​​ನಲ್ಲಿರುವ ಬನಾಸ್​ ಡೇರಿ ಸಂಕುಲ್​​ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದಾರೆ. ಮಧ್ಯಾಹ್ನ 3.30ರ ಹೊತ್ತಿಗೆ ಜಮ್ನಗರ್​​ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧ ಜಾಗತಿಕ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ  ಡಬ್ಲ್ಯೂಎಚ್​ಒ ಮಹಾನಿರ್ದೇಶಕ ಟೆಡ್ರೊಸ್ ಘೆಬ್ರೆಯೆಸಸ್ ಕೂಡ ಇರಲಿದ್ದಾರೆ.

ಏಪ್ರಿಲ್​ 20ರಂದು ಬೆಲಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್​ನ ಗಾಂಧಿನಗರದಲ್ಲಿ ಜಾಗತಿಕ ಆಯುಷ್​ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆ ಉದ್ಘಾಟಿಸುವರು. ಅಂದು ಮಧ್ಯಾಹ್ನ 3.30ಕ್ಕೆ ದಾಹೋದ್‌ನಲ್ಲಿ ಆದಿಜಾತಿ ಮಹಾ ಸಮ್ಮೇಳನ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.  ಇಂದು ಮಾರಿಷಸ್​ ಪ್ರಧಾನಮಂತ್ರಿ ಪ್ರವಿಂದ್ ಕುಮಾರ್ ಜುಗ್ನಾಥ್​ ಕೂಡ ಗುಜರಾತ್​ಗೆ ಆಗಮಿಸಿದ್ದು, ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ಅಲ್ಲದೆ, ರಾಜ್​ಕೋಟ್​​ನಿಂದ ಎರಡು ಕಿಮೀ ದೂರದವರೆಗೆ ರೋಡ್​ ಶೋ ಮೂಲಕ ಕರೆದುಕೊಂಡು ಹೋಗಲಾಗಿದೆ.

ಇದನ್ನೂ ಓದಿ:  ಪುನೀತ್ ಜತೆ ಪ್ರಶಾಂತ್​ ನೀಲ್ ‘ಆಹ್ವಾನ’ ಚಿತ್ರ ಮಾಡಬೇಕಿತ್ತು; ಸಿನಿಮಾ ಟೇಕ್​ ಆಫ್ ಆಗದಿರಲು ಕಾರಣ ಇಲ್ಲಿದೆ

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು