ಗಂಗಾ ಘಾಟ್ಗೆ ಪ್ರಧಾನಿ ಮೋದಿ ಸಹೋದರಿ ವಸಂತಿ ಬೆನ್ ಭೇಟಿ, ಸರಳತೆಗೆ ನೆಟ್ಟಿಗರ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ಸಹೋದರಿ ವಸಂತಿ ಬೆನ್ ಇತ್ತೀಚೆಗೆ ಋಷಿಕೇಶದಲ್ಲಿರುವ ಗಂಗಾ ಘಾಟ್ಗೆ ಭೇಟಿ ನೀಡಿದ್ದರು. ಅವರ ಸರಳತೆಯನ್ನು ನೆಟ್ಟಿಗಳು ಬಾಯ್ತುಂಬಾ ಹೊಗಳಿದ್ದಾರೆ. ಅಪೂರ್ವ ಸಿಂಗ್ ಎಂಬುವವರು ಎಕ್ಸ್ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಈಕೆ ಸಾಮಾನ್ಯ ಮಹಿಳೆಯಲ್ಲ, ಭಾರತದ ಅತ್ಯಂತ ಜನಪ್ರಿಯ ನಾಯಕಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರಿ ವಸಂತಿಬೆನ್ ಮೋದಿ.

ಋಷಿಕೇಶ, ನವೆಂಬರ್ 11: ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ಸಹೋದರಿ ವಸಂತಿ ಬೆನ್ ಇತ್ತೀಚೆಗೆ ಋಷಿಕೇಶದಲ್ಲಿರುವ ಗಂಗಾ ಘಾಟ್ಗೆ ಭೇಟಿ ನೀಡಿದ್ದರು. ಅವರ ಸರಳತೆಯನ್ನು ನೆಟ್ಟಿಗಳು ಬಾಯ್ತುಂಬಾ ಹೊಗಳಿದ್ದಾರೆ. ಅಪೂರ್ವ ಸಿಂಗ್ ಎಂಬುವವರು ಎಕ್ಸ್ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.
ಈಕೆ ಸಾಮಾನ್ಯ ಮಹಿಳೆಯಲ್ಲ, ಭಾರತದ ಅತ್ಯಂತ ಜನಪ್ರಿಯ ನಾಯಕಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರಿ ವಸಂತಿಬೆನ್ ಮೋದಿ.ಅವರು ಸಾಮಾನ್ಯ ವ್ಯಕ್ತಿಯಂತೆ, ಗಂಗಾ ಘಾಟ್‌ನಲ್ಲಿ ಸ್ನಾನ ಮಾಡಲು ಬಂದಿದ್ದರು.
ವರದಿಗಳ ಪ್ರಕಾರ, ವಸಂತಿಬೆನ್ ಮತ್ತು ಅವರ ಪತಿ ಹಸ್ಮುಖ್‌ಲಾಲ್ ಮೋದಿ ಆರು ದಿನಗಳ ಧಾರ್ಮಿಕ ಪ್ರವಾಸಕ್ಕಾಗಿ ಋಷಿಕೇಶ ಬಂದಿದ್ದರು.ಅವರನ್ನು ಹೋಟೆಲ್ ಉದ್ಯಮಿ ಅಕ್ಷತ್ ಗೋಯಲ್ ಮತ್ತು ನಮಾಮಿ ನರ್ಮದಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಪಂಡಿತ್ ಹರೀಶ್ ಉನಿಯಾಲ್ ಅವರು ಪ್ರೀತಿಯಿಂದ ಬರಮಾಡಿಕೊಂಡರು, ಋಷಿಕೇಶದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು.
ವಿಡಿಯೋ ಇಲ್ಲಿದೆ
ये कोई साधारण महिला नहीं ‘भारत’ के सबसे लोकप्रिय नेता और ‘प्रधानमंत्री’ @narendramodi जी की सगी ‘इकलौती’ बहन ‘वसंतीबेन मोदी’ है…
एक आम इंसान की तरह वो गंगा घाट पर स्नान करने आई
अब भारत के बाकी नेताओं की बहनों को देख लीजिए कोई ‘सांसद’ है कोई ‘विधायक’। pic.twitter.com/wyuWW2xG1c
— Apurva Singh (@iSinghApurva) November 9, 2025
ಕೆಲವು ನೆಟ್ಟಿಗರು ಆರಂಭದಲ್ಲಿ ಇದನ್ನು ಕಾಶಿ ಘಾಟ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಈ ವಿಡಿಯೋವನ್ನು ಉತ್ತರಾಖಂಡದ ಋಷಿಕೇಶದಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಗಳು ಸ್ಪಷ್ಟಪಡಿಸಿವೆ.
ಅನೇಕ ನೆಟ್ಟಿಗರು ಪ್ರಧಾನಿ ಕುಟುಂಬದ ಸರಳತೆಯನ್ನು ಶ್ಲಾಘಿಸಿದರು ಮತ್ತು ಇತರೆ ರಾಜಕೀಯ ಕುಟುಂಬಗಳ ಜೀವನಶೈಲಿಯೊಂದಿಗೆ ಇದನ್ನು ಹೋಲಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Tue, 11 November 25




