NDA Leaders Meet: ದೆಹಲಿಯಲ್ಲಿ ಇಂದು ಎನ್​ಡಿಎ ನಾಯಕರ ಸಭೆ, ರಾಷ್ಟ್ರಪತಿ ಚುನಾವಣೆ ಕಾರ್ಯತಂತ್ರ ಚರ್ಚೆ ಸಾಧ್ಯತೆ

ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಪತಿ ಚುನಾವಣೆಯು ಜುಲೈ 18ಕ್ಕೆ ನಿಗದಿಯಾಗಿದೆ.

NDA Leaders Meet: ದೆಹಲಿಯಲ್ಲಿ ಇಂದು ಎನ್​ಡಿಎ ನಾಯಕರ ಸಭೆ, ರಾಷ್ಟ್ರಪತಿ ಚುನಾವಣೆ ಕಾರ್ಯತಂತ್ರ ಚರ್ಚೆ ಸಾಧ್ಯತೆ
ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು
Edited By:

Updated on: Jul 10, 2022 | 7:47 AM

ದೆಹಲಿ: ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (National Democratic Alliance – NDA) ಒಕ್ಕೂಟದ ಪ್ರಮುಖ ನಾಯಕರು ದೆಹಲಿಯಲ್ಲಿ ಭಾನುವಾರ ಸಂಜೆ ಸಭೆ ನಡೆಸಲಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನ ಮತ್ತು ರಾಷ್ಟ್ರಪತಿ ಚುನಾವಣೆಗೆ ಮೊದಲು ಈ ಸಭೆ ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಪತಿ ಚುನಾವಣೆಯು ಜುಲೈ 18ಕ್ಕೆ ನಿಗದಿಯಾಗಿದೆ.

ರಾಷ್ಟ್ರಪತಿ ಚುನಾವಣೆಗೆ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ. ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುವುದು. ಅಷ್ಟೇ ಅಲ್ಲದ ಸದಸ್ಯರಿಂದ ಅಣಕು ಮತದಾನವನ್ನೂ ಮಾಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಎನ್​ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರು ಕಳೆದ ಜೂನ್ 24ರಂದು ನಾಮಪತ್ರ ಸಲ್ಲಿಸಿದ್ದರು. ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಈ ಸ್ಥಾನಕ್ಕೇರಿದ ಒಡಿಶಾದ ಪ್ರಥಮ ವ್ಯಕ್ತಿ ಮತ್ತು ಮೊದಲ ಬುಡಕಟ್ಟು ಮಹಿಳೆ ಎಂಬ ಕೀರ್ತಿಗೆ ಭಾಜನರಾಗುತ್ತಾರೆ. ಎನ್​ಡಿಎ ಅಭ್ಯರ್ಥಿ ಮುರ್ಮು ಅವರಿಗೆ ಆಂಧ್ರದ ವೈಎಸ್​ಆರ್ ಕಾಂಗ್ರೆಸ್, ಒಡಿಶಾದ ಬಿಜೆಡಿ ಮತ್ತು ಪಂಜಾಬ್​​ನ ಅಕಾಲಿ ದಳ ರಾಜಕೀಯ ಪಕ್ಷಗಳು ಈಗಾಗಲೇ ಬೆಂಬಲ ಘೋಷಿಸಿವೆ.

ಈ ಬಾರಿಯ ಸಂಸತ್ ಅಧಿವೇಶನವೂ ಕೊವಿಡ್ ಶಿಷ್ಟಾಚಾರಗಳಿಗೆ ಅನುಗುಣವಾಗಿಯೇ ನಡೆಯಲಿದೆ ಎಂದು ರಾಜ್ಯಸಭಾಧ್ಯಕ್ಷರೂ ಆಗಿರುವ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹೇಳಿದ್ದರು. ಸಂಸತ್ತಿನ ಎರಡೂ ಸದನಗಳ ಶೇ 80ರಷ್ಟು ಸದಸ್ಯರು ಮತ್ತು ಸಿಬ್ಬಂದಿ ಬೂಸ್ಟರ್ ಲಸಿಕೆ ಪಡೆದಿದ್ದಾರೆ. ಸಂಸತ್ತಿನ ಒಳಗೆ ಇರುವಾಗ ಪ್ರತಿಯೊಬ್ಬರೂ ಸದಾ ಮಾಸ್ಕ್ ಧರಿಸಿರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದ್ದರು.

TV9 Web

TV9 Kannada

Read More
Loading...
Unable to load recommendations.
Follow Us