AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೂರಿ ಒದ್ದೋಡಿಸೋಕೆ ಮಹತ್ವದ ಸಚಿವ ಸಂಪುಟ ಸಭೆ ಕರೆದ ಮೋದಿ..

ದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಲಾಕ್​ಡೌನ್ ರಿಲೀಫ್​ ಕೊಟ್ಟಿದ್ದೇ ಕೊಟ್ಟಿದ್ದು, ಕೊರೊನಾ ಬಾಂಬ್ ಮಹಾಸ್ಫೋಟವಾಗ್ತಿದೆ. ಭಾರತದಲ್ಲಿ ಸೋಂಕಿನ ಸುನಾಮಿ ಒಂದೂ ಲಕ್ಷದ ಗಡಿದಾಟಿ ಮುನ್ನುಗ್ತಿದೆ. ಲಕ್ಷದ ಲಕ್ಷ್ಯ ದಾಟಿ ಹೆಮ್ಮಾರಿ ಹೆಜ್ಜೆ ಇಡ್ತಿರೋ ಏಟಿಗೆ ಎಲ್ರೂ ಅದುರಿ ಹೋಗಿದ್ದಾರೆ. ಕೊರೊನಾ ಆರ್ಭಟದಿಂದ ಟೆನ್ಷನ್ ಆಗಿರೋ ಪ್ರಧಾನಿ ನರೇಂದ್ರ ಮೋದಿ ಇವತ್ತು 11 ಗಂಟೆಗೆ ಮಹತ್ವದ ಕ್ಯಾಬಿನೆಟ್ ಮೀಟಿಂಗ್ ಕರೆದಿದ್ದಾರೆ. ಇಂದು ಪ್ರಧಾನಿ ಮೋದಿ ಮಹತ್ವದ ಸಚಿವ ಸಂಪುಟ ಸಭೆ! ಯೆಸ್.. ದೇಶದಲ್ಲಿ ಕೊರೊನಾ ಕಂಟ್ರೋಲ್​ಗೆ ಬಂತು. […]

ಕ್ರೂರಿ ಒದ್ದೋಡಿಸೋಕೆ ಮಹತ್ವದ ಸಚಿವ ಸಂಪುಟ ಸಭೆ ಕರೆದ ಮೋದಿ..
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 20, 2020 | 3:12 PM

Share

ದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಲಾಕ್​ಡೌನ್ ರಿಲೀಫ್​ ಕೊಟ್ಟಿದ್ದೇ ಕೊಟ್ಟಿದ್ದು, ಕೊರೊನಾ ಬಾಂಬ್ ಮಹಾಸ್ಫೋಟವಾಗ್ತಿದೆ. ಭಾರತದಲ್ಲಿ ಸೋಂಕಿನ ಸುನಾಮಿ ಒಂದೂ ಲಕ್ಷದ ಗಡಿದಾಟಿ ಮುನ್ನುಗ್ತಿದೆ. ಲಕ್ಷದ ಲಕ್ಷ್ಯ ದಾಟಿ ಹೆಮ್ಮಾರಿ ಹೆಜ್ಜೆ ಇಡ್ತಿರೋ ಏಟಿಗೆ ಎಲ್ರೂ ಅದುರಿ ಹೋಗಿದ್ದಾರೆ. ಕೊರೊನಾ ಆರ್ಭಟದಿಂದ ಟೆನ್ಷನ್ ಆಗಿರೋ ಪ್ರಧಾನಿ ನರೇಂದ್ರ ಮೋದಿ ಇವತ್ತು 11 ಗಂಟೆಗೆ ಮಹತ್ವದ ಕ್ಯಾಬಿನೆಟ್ ಮೀಟಿಂಗ್ ಕರೆದಿದ್ದಾರೆ.

ಇಂದು ಪ್ರಧಾನಿ ಮೋದಿ ಮಹತ್ವದ ಸಚಿವ ಸಂಪುಟ ಸಭೆ! ಯೆಸ್.. ದೇಶದಲ್ಲಿ ಕೊರೊನಾ ಕಂಟ್ರೋಲ್​ಗೆ ಬಂತು. ಲಾಕ್​ಡೌನ್​ ಮಾಡಿದ್ಮೇಲೆ ಹೆಮ್ಮಾರಿ ವೈರಸ್ ಆಟ ಅಡಗಿ ಹೋಯ್ತು ಅಂತ ಎಲ್ರೂ ಊಹಿಸಿದ್ರೇನೋ. ಆದ್ರೆ, ಪ್ರಧಾನಿ ಮೋದಿ ನಾಲ್ಕನೇ ಹಂತದ ಲಾಕ್​ಡೌನ್ ರಿಲೀಫ್ ನೀಡ್ತಿದ್ದಂತೆ ಕೊರೊನಾ ಅಟ್ಟಹಾಸಗೈತಿದೆ.

ದೇಶದಲ್ಲಿ ಸೊಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದ್ದು ಕೇಂದ್ರ ಸರ್ಕಾರಕ್ಕೆ ಆತಂಕ ಹೆಚ್ಚಿಸಿದೆ. ಲಾಕ್​​ಡೌನ್ ಮಾಡಿದ್ರೆ ಆರ್ಥಿಕ ಹೊಡೆತ, ಲಾಕ್​ಡೌನ್ ಮಾಡದಿದ್ರೆ ಕ್ರೂರಿ ಅಟ್ಟಹಾಸ ಇದೆರಡರ ಮಧ್ಯೆ ಸಿಲುಕಿರೋ ಮೋದಿ ಅಂಡ್ ಟೀಂ ತಲೆಕೆಡಿಸಿಕೊಂಡಿದ್ದಾರೆ. ಈ ಮಧ್ಯೆ ಪ್ರಧಾನಿ ಮೋದಿ ಇಂದು ಕೇಂದ್ರ ಸಚಿವ ಸಂಪುಟ ಸಭೆ ಕರೆದಿದ್ದು, ಕುತೂಹಲ ಹೆಚ್ಚಿಸಿದೆ. ಇನ್ನು ಕ್ಯಾಬಿನೆಟ್ ಮೀಟಿಂಗ್​ನಲ್ಲಿ ಏನೆಲ್ಲಾ ಚರ್ಚೆ ನಡೀಬೋದು.. ಕೊರೊನಾ ಒದ್ದೋಡಿಸೋಕೆ ಯಾವ್ಯಾವ ಮಹತ್ವದ ನಿರ್ಣಯ ಕೈಗೊಳ್ಬೋದು ಅನ್ನೋದನ್ನ ನೋಡೋದಾದ್ರೆ.

ಕ್ಯಾಬಿನೆಟ್​​ ಸಭೆಯಲ್ಲಿ ಏನೇನ್​​​​​ ಚರ್ಚೆ? ದೇಶದಲ್ಲಿ ಆರ್ಭಟಿಸುತ್ತಿರೋ ಕೊರೊನಾ ವೈರಸ್ ನಿಯಂತ್ರಣದ ಬಗ್ಗೆ ಕ್ಯಾಬಿನೆಟ್ ಮಿಟಿಂಗ್​​ನಲ್ಲಿ ಚರ್ಚೆ ನಡೆಸೋ ಸಾಧ್ಯತೆ ಇದೆ. ಈಗಾಗಲೇ ಘೋಷಿಸಿರೋ 20 ಲಕ್ಷ ಕೋಟಿ ಪ್ಯಾಕೇಜ್, ಹಾಗೂ ಯೋಜನೆಗಳಿಗೆ ಹಣ ಬಿಡುಗಡೆ ಬಗ್ಗೆ ಚರ್ಚಿಸೋ ಸಾಧ್ಯತೆ ಇದೆ.

ಎಲ್ಲಾ ಯೋಜನೆ ಮುಂದುವರಿಸುವ ಪ್ರಕ್ರಿಯೆಗಳು ಹೇಗಿರ್ಬೇಕು ಅನ್ನೋ ಬಗ್ಗೆ ಪ್ಲ್ಯಾನ್ ಮಾಡ್ಬೋದು. ಅಲ್ದೇ, ಲಾಕ್​​​ಡೌನ್​ನಿಂದ ಕಂಗೆಟ್ಟಿರೋ ವಲಸೆ ಕಾರ್ಮಿಕರ ಸಮಸ್ಯೆಗಳನ್ನ ಬಗೆಹರಿಸೋಕೆ ಮಾಸ್ಟರ್ ಪ್ಲ್ಯಾನ್ ರೂಪಿಸೋ ಬಗ್ಗೆ ಚರ್ಚಿಯಾಗ್ಬೋದು. ಕೊರೊನಾ ಜೊತೆಜೊತೆಗೆ ಆತಂಕ ಹೆಚ್ಚಿಸಿರೋ ಅಂಫಾನ್ ಸೈಕ್ಲೋನ್ ಕಂಟ್ರೋಲ್​ಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮೀಟಿಂಗ್​​ನಲ್ಲಿ ನಿರ್ಧಾರ ಕೈಗೊಳ್ಳೋ ಸಾಧ್ಯತೆ ಇದೆ.

ಒಟ್ನಲ್ಲಿ ಕೊರೊನಾ ಕಟ್ಟಿಹಾಕೋಕೆ ಪ್ರಧಾನಿ ಮೋದಿ ಮತ್ತೊಂದು ಮೆಗಾ ಪ್ಲ್ಯಾನ್ ಮಾಡೋಕೆ ಕ್ಯಾಬಿನೆಟ್ ಮೀಟಿಂಗ್ ಕರೆದಿದ್ದಾರೆ. ಇಂದಿನ ಸಂಪುಟ ಸಭೆಯಲ್ಲಿ ಏನೇನ್ ನಿರ್ಣಯ ಕೈಗೊಳ್ತಾರೆ ಅನ್ನೋದೆ ಇಂಟರೆಸ್ಟಿಂಗ್‌.

Published On - 9:26 am, Wed, 20 May 20

Follow Us
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ