ICDRI Conference 2023: ಹಿಂದಿನ ಘಟನೆಗಳಿಂದ ಕಲಿಯುವುದೊಂದೇ ದಾರಿ: ವಿಕೋಪಗಳ ಕುರಿತು ಪ್ರಧಾನಿ ಮೋದಿ ಮಾತು

ಪ್ರತಿಯೊಂದು ದೇಶವೂ ವಿವಿಧ ರೀತಿಯ ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿವೆ ಈ ಹಿಂದೆ ನಡೆದ ಘಟನೆಗಳಿಂದ ಕಲಿಯುವುದೊಂದೇ ದಾರಿ,  ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದರು.

ICDRI Conference 2023: ಹಿಂದಿನ ಘಟನೆಗಳಿಂದ ಕಲಿಯುವುದೊಂದೇ ದಾರಿ: ವಿಕೋಪಗಳ ಕುರಿತು ಪ್ರಧಾನಿ ಮೋದಿ ಮಾತು
ನರೇಂದ್ರ ಮೋದಿ
Follow us
ನಯನಾ ರಾಜೀವ್
|

Updated on: Apr 04, 2023 | 1:25 PM

ಪ್ರತಿಯೊಂದು ದೇಶವೂ ವಿವಿಧ ರೀತಿಯ ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿವೆ ಈ ಹಿಂದೆ ನಡೆದ ಘಟನೆಗಳಿಂದ ಕಲಿಯುವುದೊಂದೇ ದಾರಿ,  ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದರು. International Conference on Disaster Resilient Infrastructure 2023 (ICDRI) ನಲ್ಲಿ ಭಾಗವಹಿಸಿದ್ದರು. ಈ ವೇದಿಕೆಯ ಮೂಲಕ ಸರ್ಕಾರಗಳು ಮಾತ್ರವಲ್ಲದೆ ಜಾಗತಿಕ ಸಂಸ್ಥೆಗಳು ಮತ್ತು ಖಾಸಗಿ ವಲಯವೂ ದೊಡ್ಡ ಪಾತ್ರವನ್ನು ವಹಿಸುತ್ತಿವೆ.

ಕೆಲವೇ ವರ್ಷಗಳಲ್ಲಿ, 40 ದೇಶಗಳು ಸಿಡಿಆರ್ಐಗೆ ಸೇರ್ಪಡೆಗೊಂಡಿವೆ. ಈ ಮೂಲಕ ಈ ಸಮ್ಮೇಳನ ಮಹತ್ವದ ವೇದಿಕೆಯ ರೂಪ ಪಡೆಯುತ್ತಿದೆ. ಭಾರತವು ಜಿ-20 ಅಧ್ಯಕ್ಷತೆ ಮೂಲಕ ಜಗತ್ತನ್ನು ಒಟ್ಟಿಗೆ ತರುತ್ತಿದೆ ಮತ್ತು ಅಧ್ಯಕ್ಷತೆವಹಿಸಿ ನಾವು ಸಿಡಿಆರ್‌ಐ ಅನ್ನು ಹಲವು ಗುಂಪುಗಳಲ್ಲಿ ಒಗ್ಗೂಡಿಸಿದ್ದೇವೆ. ಕಳೆದ ವರ್ಷ CDRI ನಿಧಿಯನ್ನು ಕೂಡ ಘೋಷಿಸಲಾಗಿದೆ.

ಈ 50 ಡಾಲರ್ ಮಿಲಿಯನ್ ನಿಧಿಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತ್ವರಿತ ಆಸಕ್ತಿಯನ್ನು ಹುಟ್ಟುಹಾಕಿದೆ ಎಂದು ಪ್ರಧಾನಿ ಹೇಳಿದರು. ಇತ್ತೀಚಿನ ದಿನಗಳಲ್ಲಿ, ಟರ್ಕಿ ಮತ್ತು ಸಿರಿಯಾದಲ್ಲಿ ಅತಿದೊಡ್ಡ  ವಿಕೋಪ ಕಂಡುಬಂದಿದೆ, ಈ ವರ್ಷ, ಫೆಬ್ರವರಿ 6 ರಂದು ಸಂಭವಿಸಿದ ಭೂಕಂಪದಿಂದಾಗಿ, ಎರಡೂ ದೇಶಗಳಲ್ಲಿ 40 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ವಿನಾಶಕಾರಿ ಭೂಕಂಪದ ನಂತರ ಭಾರತವು ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ತನ್ನ ತಂಡಗಳನ್ನು ಕಳುಹಿಸಿತ್ತು. ಭೂಕಂಪವು ಎಷ್ಟು ವಿನಾಶಕಾರಿಯಾಗಿತ್ತೆಂದರೆ ನೂರಾರು ಕಟ್ಟಡಗಳು ನೆಲಸಮವಾದವು.

ಮತ್ತಷ್ಟು ಓದಿ: Turkey Earthquake: ಟರ್ಕಿ ಭೂಕಂಪ; ಭಾರತೀಯರು ಅವಶೇಷಗಳಡಿ ಸಿಲುಕಿದ್ದಾರೆಯೇ? ರಾಯಭಾರಿ ನೀಡಿದ ಮಾಹಿತಿ ಇಲ್ಲಿದೆ

ಈ ಎರಡೂ ದೇಶಗಳಲ್ಲಿ ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಕಟ್ಟಡಗಳ ಅವಶೇಷಗಳು ಎಲ್ಲೆಂದರಲ್ಲಿ ಬಿದ್ದಿವೆ. ಭೂಕಂಪನದ ಬಗ್ಗೆ ಜನರಲ್ಲಿ ಸಾಕಷ್ಟು ಭೀತಿ ಉಂಟಾಗಿದ್ದು, ಜನರು ತಮ್ಮ ಮನೆಗಳಿಗೆ ಹೋಗಲು ಇನ್ನೂ ಭಯಪಡುತ್ತಿದ್ದಾರೆ. ಹೆಚ್ಚಿನ ಜನರು ರಸ್ತೆ ಬದಿಯಲ್ಲಿ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ.

ವಿಪತ್ತುಗಳ ಪರಿಣಾಮವು ಕೇವಲ ಸ್ಥಳೀಯವಾಗಿರುವುದಿಲ್ಲ. ಒಂದು ಪ್ರದೇಶದಲ್ಲಿನ ನೈಸರ್ಗಿಕ  ವಿಪತ್ತುಗಳು ವಿಭಿನ್ನ ದೇಶ,  ಪ್ರದೇಶಗಳ ಮೇಲೆಯೂ ಪರಿಣಾಮ ಬೀರುತ್ತವೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್