ಸ್ವಾಮಿತ್ವ ಯೋಜನೆಯಡಿ 65 ಲಕ್ಷ ಕುಟುಂಬಗಳಿಗೆ ಆಸ್ತಿ ಕಾರ್ಡ್‌ ವಿತರಿಸಿದ ಪ್ರಧಾನಿ ಮೋದಿ

|

Updated on: Jan 18, 2025 | 3:21 PM

10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ 230 ಜಿಲ್ಲೆಗಳ 50,000ಕ್ಕೂ ಹೆಚ್ಚು ಹಳ್ಳಿಗಳ ಆಸ್ತಿ ಮಾಲೀಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 65 ಲಕ್ಷ ಆಸ್ತಿ ಕಾರ್ಡ್‌ಗಳನ್ನು ವಿತರಿಸಿದ್ದಾರೆ. ಇದು ಸ್ವಾಮಿತ್ವ (SVAMITVA) ಯೋಜನೆಯಡಿಯಲ್ಲಿ ಗ್ರಾಮೀಣ ಭೂ ಮಾಲೀಕತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಸರ್ಕಾರ ಮುಂದಾಗಿದೆ. ಗ್ರಾಮೀಣ ಭಾರತದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಮೋದಿ SVAMITVA ಯೋಜನೆಯನ್ನು ಪ್ರಾರಂಭಿಸಿದ್ದಾರೆ.

ಸ್ವಾಮಿತ್ವ ಯೋಜನೆಯಡಿ 65 ಲಕ್ಷ ಕುಟುಂಬಗಳಿಗೆ ಆಸ್ತಿ ಕಾರ್ಡ್‌ ವಿತರಿಸಿದ ಪ್ರಧಾನಿ ಮೋದಿ
Pm Modi
Follow us on

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 65 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಸ್ವಾಮಿತ್ವ (SVAMITVA) ಯೋಜನೆಯಡಿಯಲ್ಲಿ ಆಸ್ತಿ ಕಾರ್ಡ್‌ಗಳನ್ನು ವಿತರಿಸಿದ್ದಾರೆ. ಇದು ಗ್ರಾಮೀಣ ಕುಟುಂಬಗಳಿಗೆ ಕಾನೂನುಬದ್ಧ ಆಸ್ತಿ ಹಕ್ಕುಗಳೊಂದಿಗೆ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಮಾಲೀಕತ್ವದ ಮಹತ್ವವನ್ನು ಎತ್ತಿ ತೋರಿಸಿರುವ ಮೋದಿ ಬಡತನವನ್ನು ಕಡಿಮೆ ಮಾಡುವ ಮತ್ತು ಗ್ರಾಮಗಳನ್ನು ಬಲಪಡಿಸುವಲ್ಲಿ ಅದರ ಪಾತ್ರವನ್ನು ಒತ್ತಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಫಲಾನುಭವಿಗಳಿಗೆ SVAMITVA ಯೋಜನೆಯಡಿಯಲ್ಲಿ ಆಸ್ತಿ ಕಾರ್ಡ್‌ಗಳನ್ನು ವಿತರಿಸಿದರು. ಈ ಉಪಕ್ರಮವು ಗ್ರಾಮೀಣ ಪ್ರದೇಶಗಳಲ್ಲಿನ ವಸತಿ ಆಸ್ತಿಗಳ ಕಾನೂನುಬದ್ಧ ಮಾಲೀಕತ್ವವನ್ನು ಒದಗಿಸುವುದು, ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವುದು ಮತ್ತು ಹಳ್ಳಿಗಳಲ್ಲಿ ದೀರ್ಘಕಾಲದ ಆಸ್ತಿ ವಿವಾದಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಭಾರತಕ್ಕೆ ಮಹತ್ವದ ಕ್ಷಣ; ಇಸ್ಕಾನ್ ದೇವಾಲಯದಲ್ಲಿ ಪ್ರಧಾನಿ ಮೋದಿ

ಈ ಕಾರ್ಯಕ್ರಮವನ್ನು ವರ್ಚುವಲ್ ಆಗಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಗ್ರಾಮಗಳ ಅಭಿವೃದ್ಧಿಯಲ್ಲಿ ಆಸ್ತಿ ಹಕ್ಕುಗಳ ಮಹತ್ವವನ್ನು ಒತ್ತಿ ಹೇಳಿದರು. “ಮಾಲೀಕತ್ವ ವ್ಯವಸ್ಥೆಗಳು ಗ್ರಾಮಗಳ ಅಭಿವೃದ್ಧಿಗೆ ಆಧಾರವಾಗಲಿವೆ” ಎಂದು ಅವರು ಹೇಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹಾತ್ಮ ಗಾಂಧಿಯವರ ಗ್ರಾಮೀಣಾಭಿವೃದ್ಧಿಯ ದೃಷ್ಟಿಕೋನವನ್ನು ಎತ್ತಿ ತೋರಿಸಿದ್ದಾರೆ.


ಗ್ರಾಮೀಣ ಆರ್ಥಿಕತೆಯನ್ನು ಆಧುನೀಕರಿಸುವ ಒಂದು ಹೆಜ್ಜೆಯಾಗಿ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಪ್ರಧಾನಿಯವರು ಎತ್ತಿ ತೋರಿಸಿದರು. “ಕಳೆದ 7ರಿಂದ 8 ವರ್ಷಗಳಲ್ಲಿ ಸುಮಾರು ಶೇ. 98ರಷ್ಟು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಭೂ ಆಧಾರ್ ಮೂಲಕ ಭೂಮಿಗೆ ವಿಶಿಷ್ಟ ಗುರುತನ್ನು ನೀಡಲಾಗಿದೆ. ಸುಮಾರು 23 ಕೋಟಿ ಭೂ ಆಧಾರ್ ಸಂಖ್ಯೆಗಳನ್ನು ನೀಡಲಾಗಿದೆ” ಎಂದು ಅವರು ಹೇಳಿದ್ದಾರೆ.

ಮಹಾತ್ಮ ಗಾಂಧಿಯವರ ಗ್ರಾಮೀಣಾಭಿವೃದ್ಧಿಯ ದೃಷ್ಟಿಕೋನವನ್ನು ಪ್ರತಿಬಿಂಬಿಸಿದ ಮೋದಿ, “ಭಾರತದ ಆತ್ಮ ಹಳ್ಳಿಗಳಲ್ಲಿದೆ. ಬಾಪು ಅವರ ಈ ಭಾವನೆಯನ್ನು ನಿಕಾರ್ಯಗತಗೊಳಿಸುವ ಕೆಲಸವನ್ನು ಕಳೆದ ದಶಕದಲ್ಲಿ ಮಾಡಲಾಗಿದೆ” ಎಂದಿದ್ದಾರೆ.

ಇದನ್ನೂ ಓದಿ: ಭಾರತೀಯ ನೌಕಾ ಪಡೆಗೆ ಮತ್ತಷ್ಟು ಬಲ: ಮೂರು ಯುದ್ಧ ನೌಕೆಗಳನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ವಸತಿ ಭೂಮಿಯನ್ನು ನಕ್ಷೆ ಮಾಡಲು ಮತ್ತು ಗ್ರಾಮಸ್ಥರಿಗೆ ಮಾಲೀಕತ್ವ ಕಾರ್ಡ್‌ಗಳನ್ನು ಒದಗಿಸಲು 2020ರಲ್ಲಿ SVAMITVA (ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮಗಳ ಸಮೀಕ್ಷೆ ಮತ್ತು ನಕ್ಷೆ) ಯೋಜನೆಯನ್ನು ಪ್ರಾರಂಭಿಸಲಾಯಿತು. ಹಿಂದಿನ ಸರ್ಕಾರಗಳು ಈ ದಿಕ್ಕಿನಲ್ಲಿ ಯಾವುದೇ ದೃಢ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಆದ್ದರಿಂದ 2014ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ ನಾವು ಸ್ವಾಮಿತ್ವ ಯೋಜನೆಯನ್ನು ಪ್ರಾರಂಭಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

“ದೇಶದ ಪ್ರತಿಯೊಂದು ಹಳ್ಳಿಯಲ್ಲಿ ಡ್ರೋನ್‌ಗಳ ಸಹಾಯದಿಂದ ಮನೆಗಳು ಮತ್ತು ಜಮೀನುಗಳ ಮ್ಯಾಪಿಂಗ್ ಮಾಡಲು ನಾವು ನಿರ್ಧರಿಸಿದ್ದೇವೆ. ಗ್ರಾಮಸ್ಥರಿಗೆ ಅವರ ವಸತಿ ಆಸ್ತಿಯ ದಾಖಲೆಗಳನ್ನು ನೀಡಲಾಗುವುದು. ಬಡತನ ಕಡಿಮೆಯಾಗಬೇಕಾದರೆ ಆಸ್ತಿ ಹಕ್ಕುಗಳನ್ನು ಹೊಂದಿರುವುದು ಬಹಳ ಮುಖ್ಯ ಎಂದು ವಿಶ್ವಸಂಸ್ಥೆ ಸ್ಪಷ್ಟವಾಗಿ ಹೇಳಿದೆ” ಎಂದು ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ