ಪಿಎಂ ಮೋದಿಯಿಂದ ಪ. ಬಂಗಾಳದ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ; ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿ, ವಿಶ್ರಾಂತಿ ತೆಗೆದುಕೊಳ್ಳಿ ಎಂದ ಮಮತಾ
ಹೌರಾ ಮತ್ತು ನ್ಯೂ ಜಲ್ಪೈಗುರಿಯನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಸಂಚಾರಕ್ಕೆ ವರ್ಚುವಲ್ ಆಗಿ ಪ್ರಧಾನಿ ಮೋದಿ ಹಸಿರು ನಿಶಾನೆ ನೀಡಿದ್ದಾರೆ.
ಗಾಂಧಿನಗರ: ಗುಜರಾತ್ನ ಗಾಂಧಿನಗರದಲ್ಲಿ ತಮ್ಮ ತಾಯಿ ಹೀರಾಬೆನ್ ಮೋದಿ (Heeraben Modi) ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಸ್ವಗ್ರಾಮಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಶುಕ್ರವಾರ) ವಿಡಿಯೋ ಕಾನ್ಫರೆನ್ಸ್ ಮೂಲಕ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಹೌರಾ ಮತ್ತು ನ್ಯೂ ಜಲ್ಪೈಗುರಿಯನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಸಂಚಾರಕ್ಕೆ ವರ್ಚುವಲ್ ಆಗಿ ಹಸಿರು ನಿಶಾನೆ ನೀಡಿದ ಪ್ರಧಾನಿ ಮೋದಿ, ನಾನು ಖುದ್ದಾಗಿ ಪಶ್ಚಿಮ ಬಂಗಾಳಕ್ಕೆ ಆಗಮಿಸಿ ಈ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಬೇಕೆಂದುಕೊಂಡಿದ್ದೆ. ಆದರೆ, ವೈಯಕ್ತಿಕ ಕಾರಣಗಳಿಂದ ನನಗೆ ಅಲ್ಲಿ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ, ನಾನು ಬಂಗಾಳದ ಜನರ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ಹೌರಾದಲ್ಲಿ ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೋದಿಯವರ ತಾಯಿಯ ನಿಧನಕ್ಕೆ ಪ್ರಧಾನಿಗೆ ಸಂತಾಪ ಸೂಚಿಸಿದರು. “ಪ್ರಧಾನ ಮಂತ್ರಿಗಳೇ, ಇಂದು ದುಃಖದ ದಿನವಾಗಿದೆ… ದೇವರು ನಿಮಗೆ ಇದನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ. ದಯವಿಟ್ಟು ನಿಮ್ಮ ಕಾಳಜಿ ವಹಿಸಿ, ವಿಶ್ರಾಂತಿ ತೆಗೆದುಕೊಳ್ಳಿ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
#WATCH | West Bengal CM Mamata Banerjee expresses condolences to PM Modi, over the demise of his mother Heeraben Modi, during an event in Howrah that was attended by PM Modi through video conferencing.
(Source: DD) pic.twitter.com/qNnqaCtxSS
— ANI (@ANI) December 30, 2022
ಇದನ್ನೂ ಓದಿ: Heeraben Modi Funeral: ಮೋದಿ ತಾಯಿ ಹೀರಾಬೆನ್ ಪಂಚಭೂತಗಳಲ್ಲಿ ಲೀನ; ಚಿತೆಗೆ ಅಗ್ನಿಸ್ಪರ್ಶ ಮಾಡಿದ ಪ್ರಧಾನಿ
ಸಿಎಂ ಮಮತಾ ಬ್ಯಾನರ್ಜಿಯವರ ಭಾಷಣದ ನಂತರ, ಪಿಎಂ ನರೇಂದ್ರ ಮೋದಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಹಸಿರು ನಿಶಾನೆ ತೋರಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಕೋಲ್ಕತ್ತಾ ಮೆಟ್ರೋದ ನೇರಳೆ ಮಾರ್ಗದ ಜೋಕಾ-ತಾರಾತಲಾ ಮಾರ್ಗವನ್ನು ಮೋದಿ ಉದ್ಘಾಟಿಸಿದರು.
PM Modi inaugurates the Joka-Taratala stretch of the Purple Line of the Kolkata Metro through video conferencing. West Bengal CM Mamata Banerjee is present at the event.
(Source: DD) pic.twitter.com/Q3wlmx7zFu
— ANI (@ANI) December 30, 2022
ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ 405 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಬೋಯಿಂಚಿ – ಶಕ್ತಿಗಢ್ 3ನೇ ಮಾರ್ಗ ಸೇರಿದಂತೆ 4 ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದಾದ ಬಳಿಕ ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರೀಯ ಗಂಗಾ ಕೌನ್ಸಿಲ್ (NGC) ಎರಡನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
Respected PM, today it’s a sad day and great loss to you. I pray to god,may god give you strength. I convey my gratitude to you that you were supposed to come to West Bengal but because of demise of your mother you couldn’t come but joined virtually:West Bengal CM Mamata Banerjee pic.twitter.com/F7xT9L0tpX
— ANI (@ANI) December 30, 2022
ವಾರಕ್ಕೆ 6 ದಿನಗಳ ಹೌರಾ-ಹೊಸ ಜಲ್ಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಚಲಾಯಿಸಲು 5 ಸೆಟ್ ಸಿಬ್ಬಂದಿಗೆ ಗಾಜಿಯಾಬಾದ್‌ನಲ್ಲಿ ತರಬೇತಿ ನೀಡಲಾಗಿದೆ. ಅರೆ-ಹೈ ಸ್ಪೀಡ್ ವಂದೇ ಭಾರತ್ ಸೇವೆಯೊಂದಿಗೆ ಬಂಗಾಳದಲ್ಲಿ ಸಂಪರ್ಕದಲ್ಲಿ ಹೊಸ ಯುಗ ಪ್ರಾರಂಭವಾಗಲಿದೆ ಎಂದು ಜಲ್ಪೈಗುರಿ ಸಂಸದ ಜಯಂತ ರಾಯ್ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ತಾಯಿ ಹೀರಾಬೆನ್ ನಿಧನ ಹಿನ್ನೆಲೆ; ಪಶ್ಚಿಮ ಬಂಗಾಳದ ಯೋಜನೆಗಳಿಗೆ ವರ್ಚುವಲ್ ಮೂಲಕ ಪ್ರಧಾನಿ ಚಾಲನೆ ಸಾಧ್ಯತೆ
“ಇದು ಪಶ್ಚಿಮ ಬಂಗಾಳ ರಾಜ್ಯಕ್ಕೆ ಒಂದು ದೊಡ್ಡ ಪ್ರಗತಿಯಾಗಿದೆ. ಇದರಿಂದ ಬಂಗಾಳದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ” ಎಂದು ಬಿಜೆಪಿ ಸಂಸದ ಜಯಂತ್ ರಾಯ್ ಪಿಟಿಐಗೆ ತಿಳಿಸಿದ್ದಾರೆ. ಎನ್‌ಜೆಪಿ ನಿಲ್ದಾಣವನ್ನು ವಿಶ್ವ ದರ್ಜೆಯ ಒಂದನ್ನಾಗಿ ಅಭಿವೃದ್ಧಿಪಡಿಸುವುದು ಹಿಮಾಲಯ, ಕಾಡುಗಳು ಮತ್ತು ಚಹಾ ತೋಟಗಳನ್ನು ಹೊಂದಿರುವ ಉತ್ತರ ಬಂಗಾಳದಲ್ಲಿ ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
Railway and metro projects being launched in West Bengal will improve connectivity and further ‘Ease of Living’ for the people. https://t.co/Z0Hec08qh5
— Narendra Modi (@narendramodi) December 30, 2022
ಇದು ದೇಶದ 7ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ. 564 ಕಿ.ಮೀ ದೂರವನ್ನು 7.45 ಗಂಟೆಗಳಲ್ಲಿ ಕ್ರಮಿಸುವ ನೀಲಿ-ಬಿಳಿ ರೈಲು ಈ ಮಾರ್ಗದ ಇತರ ರೈಲುಗಳಿಗೆ ಹೋಲಿಸಿದರೆ 3 ಗಂಟೆಗಳ ಪ್ರಯಾಣದ ಸಮಯವನ್ನು ಉಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಬಾರ್ಸೋಯಿ, ಮಾಲ್ಡಾ ಮತ್ತು ಬೋಲ್ಪುರ್‌ನಲ್ಲಿ 3 ನಿಲುಗಡೆಗಳನ್ನು ಹೊಂದಿರುತ್ತದೆ. ಈ ಅತ್ಯಾಧುನಿಕ ರೈಲಿನಲ್ಲಿ ಚಾಲಕರಿಗೆ 2 ಸೇರಿದಂತೆ 16 ಬೋಗಿಗಳಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Fri, 30 December 22