ಚೆನ್ನೈ ಪ್ರವಾಹ ನಿರ್ವಹಣೆ ಯೋಜನೆಗೆ ₹ 561 ಕೋಟಿ; ಪ್ರಧಾನಿ ಮೋದಿ ಅನುಮೋದನೆ
ಚೆನ್ನೈ ಮಹಾಪ್ರವಾಹವನ್ನು ಎದುರಿಸುತ್ತಿದೆ, ಕಳೆದ ಎಂಟು ವರ್ಷಗಳಲ್ಲಿ ಸಂಭವಿಸುತ್ತಿರುವ ಮೂರನೇ ಪ್ರವಾಹ ಇದು. ಮೆಟ್ರೋಪಾಲಿಟನ್ ನಗರಗಳು ಅಧಿಕ ಮಳೆಯನ್ನು ಪಡೆಯುವ ಹೆಚ್ಚಿನ ನಿದರ್ಶನಗಳನ್ನು ನಾವು ನೋಡುತ್ತಿದ್ದೇವೆ, ಇದು ಹಠಾತ್ ಪ್ರವಾಹಕ್ಕೆ ಕಾರಣವಾಗುತ್ತದೆ ಎಂದು ಅಮಿತ್ ಶಾ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದಿದ್ದಾರೆ.
ದೆಹಲಿ ಡಿಸೆಂಬರ್ 07: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚೆನ್ನೈನಲ್ಲಿ (Chennai) ಮೊದಲ ನಗರ ಪ್ರವಾಹ ತಗ್ಗಿಸುವ ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ, ಚೆನ್ನೈ ಜಲಾನಯನ ಯೋಜನೆಯಲ್ಲಿ “ಸಮಗ್ರ ನಗರ ಪ್ರವಾಹ ನಿರ್ವಹಣೆ” ಚಟುವಟಿಕೆಗಳಿಗೆ ₹ 561.29 ಕೋಟಿ ಮೀಸಲಿಡಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ (Amit Shah) ಇಂದು ಘೋಷಿಸಿದ್ದಾರೆ. ಮೈಚಾಂಗ್ ಚಂಡಮಾರುತದಿಂದಾಗಿ ಚೆನ್ನೈ ಮುಳುಗಿರುವ ಹೊತ್ತಲ್ಲೇ ಈ ಘೋಷಣೆ ಬಂದಿದೆ. ಧಾರಾಕಾರ ಮಳೆಯಿಂದಾಗಿ ನಗರ ಸಂಪೂರ್ಣ ಜವಾವೃತವಾಗಿದ್ದು, ಇದು ಸುಧಾರಿತ ಪ್ರವಾಹ ತಡೆಗಟ್ಟುವ ಕ್ರಮಗಳ ನಿರ್ಣಾಯಕ ಅಗತ್ಯವನ್ನು ಎತ್ತಿ ತೋರಿಸುತ್ತದೆ.
“ಚೆನ್ನೈ ಮಹಾಪ್ರವಾಹವನ್ನು ಎದುರಿಸುತ್ತಿದೆ, ಕಳೆದ ಎಂಟು ವರ್ಷಗಳಲ್ಲಿ ಸಂಭವಿಸುತ್ತಿರುವ ಮೂರನೇಯದು. ಮೆಟ್ರೋಪಾಲಿಟನ್ ನಗರಗಳು ಅಧಿಕ ಮಳೆಯನ್ನು ಪಡೆಯುವ ಹೆಚ್ಚಿನ ನಿದರ್ಶನಗಳನ್ನು ನಾವು ನೋಡುತ್ತಿದ್ದೇವೆ, ಇದು ಹಠಾತ್ ಪ್ರವಾಹಕ್ಕೆ ಕಾರಣವಾಗುತ್ತದೆ ಎಂದು ಅಮಿತ್ ಶಾ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದಿದ್ದಾರೆ.
Chennai is facing major floods, the third such occurring in the last eight years. We are witnessing more instances of metropolitan cities receiving excessive rainfall, leading to sudden flooding.
Guided by a pro-active approach, PM @narendramodi Ji has approved the first urban…
— Amit Shah (@AmitShah) December 7, 2023
ಸಕ್ರಿಯ ವಿಧಾನದಿಂದ ಮಾರ್ಗದರ್ಶಿಸಲ್ಪಟ್ಟ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ (NDMF) ಅಡಿಯಲ್ಲಿ ‘ಚೆನ್ನೈ ಜಲಾನಯನ ಯೋಜನೆಗಾಗಿ ಸಮಗ್ರ ನಗರ ಪ್ರವಾಹ ನಿರ್ವಹಣೆ ಚಟುವಟಿಕೆಗಳಿಗೆ’ ₹ 561.29 ಕೋಟಿ ಮೊತ್ತದ ಮೊದಲ ನಗರ ಪ್ರವಾಹ ತಗ್ಗಿಸುವ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಇದರಲ್ಲಿ ಕೇಂದ್ರದ ನೆರವು ₹ 500 ಕೋಟಿ ಆಗಿದೆ ಎಂದು ಅವರು ಹೇಳಿದ್ದಾರೆ.
ಇಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರೊಂದಿಗೆ ವೈಮಾನಿಕ ಸಮೀಕ್ಷೆ ಮತ್ತು ಉನ್ನತ ಮಟ್ಟದ ಸಭೆಯನ್ನು ಪೂರ್ಣಗೊಳಿಸಿದ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಜ್ಯಕ್ಕೆ ಮೊದಲ ಕಂತು ₹ 450 ಕೋಟಿ ಬಿಡುಗಡೆ ಮಾಡಿದ್ದು, ಎರಡನೇ ಕಂತನ್ನು ಇಂದು ಬಿಡುಗಡೆ ಮಾಡಲಾಗಿದೆ ಎಂದು ಖಚಿತಪಡಿಸಿದರು.
ಇದನ್ನೂ ಓದಿ: ವಿಶ್ವದ ಅಗ್ರಗಣ್ಯ ನಾಯಕನಾಗಿ ಬೆಳೆದಿರುವ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕಿದೆ: ಹೆಚ್ ಡಿ ದೇವೇಗೌಡ
ಮೈಚಾಂಗ್ ಚಂಡಮಾರುತದಿಂದಾಗಿ ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾದ ನಂತರ ನಗರವೆಲ್ಲ ಜಲಾವೃತವಾಗಿದೆ. ಅನೇಕರು ತಮ್ಮ ಮನೆಯಲ್ಲಿ ಸಿಲುಕಿಕೊಂಡಿದ್ದಾರೆ. ಮಂಗಳವಾರ ಆಂಧ್ರಪ್ರದೇಶದ ಕರಾವಳಿಯನ್ನು ದಾಟಿದ ಮೈಚಾಂಗ್ ಚಂಡಮಾರುತದ ತೀವ್ರತೆಗೆ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ನಲುಗಿದೆ
ತಮಿಳುನಾಡು ರಾಜಧಾನಿಯಲ್ಲಿ ಸರ್ಕಾರ ಪರಿಹಾರ ಚಟುವಟಿಕೆಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಭಾರತೀಯ ವಾಯುಪಡೆ ಮತ್ತು ಕೋಸ್ಟ್ ಗಾರ್ಡ್‌ಗಳು ಹೆಲಿಕಾಪ್ಟರ್‌ಗಳಿಂದ ಆಹಾರ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸುತ್ತಿದ್ದು, ನಗರದಾದ್ಯಂತ ವಿವಿಧ ಸ್ಥಳಗಳಲ್ಲಿ ನಿಂತ ನೀರನ್ನು ಪಂಪ್ ಮಾಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ