ಗೋವಾ ವಿಮೋಚನಾ ದಿನ(Goa Liberation Day 2021) ಕಾರ್ಯಕ್ರಮದಲ್ಲಿ ಇಂದು ಭಾಗಿಯಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಹಾಗೇ, ಗೋವಾ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರ ಸ್ಮಾರಕಕ್ಕೆ ಆಜಾದ್ ಮೈದಾನಲ್ಲಿ ಪುಷ್ಪನಮನ ಸಲ್ಲಿಸಿದರು. 1961ರ ಡಿಸೆಂಬರ್ 19ರಂದು ಗೋವಾ ಪೋರ್ಚುಗೀಸರ ಆಡಳಿತದಿಂದ ಮುಕ್ತವಾಗಿದೆ. ಹೀಗಾಗಿ ಇಲ್ಲಿ ಪ್ರತಿವರ್ಷವೂ ಡಿಸೆಂಬರ್ 19ರಂದು ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ 60ನೇ ವರ್ಷದ ಸ್ವಾತಂತ್ರ್ಯ ದಿನ ನಡೆಯುತ್ತಿದ್ದು, ಮಧ್ಯಾಹ್ನದ ಹೊತ್ತಿಗೆ ಪ್ರಧಾಗಿ ಮೋದಿ ಗೋವಾ ತಲುಪಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆ (Goa Assembly Election 2022) ದೃಷ್ಟಿಯಿಂದ, ಪ್ರಧಾನಿ ಮೋದಿಯವರ ಈ ಭೇಟಿ ಮಹತ್ವದ್ದಾಗಿದೆ.
#WATCH | Goa: Prime Minister Narendra Modi offers tribute at Martyrs Memorial in Azad Maidan, Panaji pic.twitter.com/CMSmF7XEmh
— ANI (@ANI) December 19, 2021
ಇಂದು ಮಧ್ಯಾಹ್ನ 1.30ರ ಹೊತ್ತಿಗೆ ತಲುಪಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬರಮಾಡಿಕೊಂಡರು. ಅಲ್ಲಿಂದಲೇ ಪಣಜಿಯ ಆಜಾದ್ ಮೈದಾನಕ್ಕೆ ತೆರಳಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಿದರು. ಅಲ್ಲಿಂದ ಮಿರಾಮರ್ ಬೀಚ್ಗೆ ತೆರಳಿ, ಸೇಲ್ ಪರೇಡ್ ಮತ್ತು ಫ್ಲೈಪಾಸ್ಟ್ (ಏರ್ಕ್ರಾಫ್ಟ್ ಗೌರವಾನ್ವಿತ ಹಾರಾಟ) ಗೌರವ ಪಡೆದರು. ಅಲ್ಲಿಂದ, ಗೋವಾ ವಿಮೋಚನಾ ದಿನದ ಮುಖ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಸ್ಟೇಡಿಯಂಗೆ ತೆರಳಿದ್ದಾರೆ. ಇಲ್ಲಿ ನಡೆದ ಸಮಾರಂಭದಲ್ಲಿ ನರೇಂದ್ರ ಮೋದಿ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿದರು. ಹಾಗೇ, ನಬಾರ್ಡ್, ಎನ್ಜಿಒಗಳ ಸಿಬ್ಬಂದಿಗೆ ಪ್ರಶಸ್ತಿ ಪುರಸ್ಕಾರ ಮಾಡಿದರು.
ಐದು ಯೋಜನೆಗಳಿಗೆ ಚಾಲನೆ
ಹಾಗೇ, ಗೋವಾ ವಿಮೋಚನಾ ದಿನ (ಆಪರೇಶನ್ ವಿಜಯ್)ವಾದ ಇಂದು ಪ್ರಧಾನಿ ನರೇಂದ್ರ ಮೋದಿ ಐದು ಯೋಜನೆಗಳಿಗೆ ವರ್ಚ್ಯುವಲ್ ಆಗಿ ಚಾಲನೆ ನೀಡಿದ್ದಾರೆ. ನವೀಕರಿಸಲಾದ ಫೋರ್ಟ್ ಅಗುಡಾ ಜೈಲ್ ಮ್ಯೂಸಿಯಂ, ಗೋವಾ ಮೆಡಿಕಲ್ ಕಾಲೇಜಿನ ಸೂಪರ್ ಸ್ಪೆಶಾಲಿಟಿ ಬ್ಲಾಕ್, ದಕ್ಷಿಣ ಗೋವಾ ಜಿಲ್ಲಾ ಹೊಸದಾದ ಆಸ್ಪತ್ರೆ, ಮೋಪಾ ಏರ್ಪೋರ್ಟ್ನಲ್ಲಿ ನಿರ್ಮಾಣವಾಗಿರುವ ವಿಮಾನಯಾನ ಕೌಶಲಾಭಿವೃದ್ಧಿ ಕೇಂದ್ರ ಮತ್ತು ಮಾರ್ಗೋದ ಡಬೋಲಿಮ್ ನವೇಲಿಮ್ನಲ್ಲಿ ಗ್ಯಾಸ್ ಇನ್ಸುಲೇಟೆಡ್ ಸಬ್ ಸ್ಟೇಷಬನ್ಗಳನ್ನು ಮೋದಿಯವರು ಉದ್ಘಾಟಿಸಿದ್ದಾರೆ.
ಇದನ್ನೂ ಓದಿ: ಭಾರೀ ಮೊತ್ತಕ್ಕೆ ಹರಾಜಾದ ಸೂಪರ್ ಮ್ಯಾನ್ #1 ಕಾಮಿಕ್ ಪುಸ್ತಕ: ಇಲ್ಲಿದೆ ಮಾಹಿತಿ
ಗೋವಾ ವಿಮೋಚನಾ ದಿನಾಚರಣೆಯಲ್ಲಿ ಇಂದು ಪ್ರಧಾನಿ ಮೋದಿ ಭಾಗಿ; 650 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ
Published On - 4:55 pm, Sun, 19 December 21