Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​​ನ ಅಮೃತ್​ಸರ, ಕಪುರ್ತಲಾದಲ್ಲಿ ಗುಂಪುಹತ್ಯೆಗಳು; ತನಿಖೆಗಾಗಿ ಎಸ್​ಐಟಿ ರಚನೆ ಮಾಡಿದ ಉಪಮುಖ್ಯಮಂತ್ರಿ ರಾಂಧವಾ

ರಾಂಧವಾ ಅವರು ಗೃಹ ಮಂತ್ರಿಯೂ ಆಗಿದ್ದು ಸುದ್ದಿಗಾರರೊಂದಿಗೆ ಮಾತನಾಡಿ, ದರ್ಬಾರ್​ ಸಾಹೀಬ್​​ನಲ್ಲಿ ನಡೆದ ಘಟನೆ ನಿಜಕ್ಕೂ ಶಾಕಿಂಗ್. ಯುವಕ ಬೆಳಗ್ಗೆ ಸುಮಾರು 11.30ರಹೊತ್ತಿಗೆ ದರ್ಬಾರ್ ಸಾಹೀಬ್​ ಸಂಕೀರ್ಣ ಪ್ರವೇಶಿಸಿದ್ದಾನೆ. ಸಂಜೆ 6ಗಂಟೆವರೆಗೂ ಅಲ್ಲಿಯೇ ಇದ್ದ ಎಂದು ತಿಳಿಸಿದ್ದಾರೆ.

ಪಂಜಾಬ್​​ನ ಅಮೃತ್​ಸರ, ಕಪುರ್ತಲಾದಲ್ಲಿ ಗುಂಪುಹತ್ಯೆಗಳು; ತನಿಖೆಗಾಗಿ ಎಸ್​ಐಟಿ ರಚನೆ ಮಾಡಿದ ಉಪಮುಖ್ಯಮಂತ್ರಿ ರಾಂಧವಾ
ಉಪಮುಖ್ಯಮಂತ್ರಿ ಸುಖ್​ಜಿಂದರ್ ಸಿಂಗ್​ ರಾಂಧವಾ
Follow us
TV9 Web
| Updated By: Lakshmi Hegde

Updated on: Dec 19, 2021 | 6:07 PM

ಪಂಜಾಬ್​​ನಲ್ಲಿ 24ಗಂಟೆಗಳ ಅವಧಿಯಲ್ಲಿ ಎರಡು ಗುಂಪು ಹತ್ಯೆ ಪ್ರಕರಣಗಳು ವರದಿಯಾಗಿವೆ. ಒಂದು ಅಮೃತ್​ಸರದ ಸ್ವರ್ಣ ಮಂದಿರ (Amritsar Golden Temple)ವನ್ನು ಅಪವಿತ್ರಗೊಳಿಸಿದ ಆರೋಪದಡಿ 25-30ವರ್ಷದ ಯುವಕನನ್ನು ಥಳಿಸಿಯೇ ಕೊಲ್ಲಲಾಗಿದೆ. ಹಾಗೇ, ಇನ್ನೊಂದೆಡೆ ಪಂಜಾಬ್​ನ ಕಪುರ್ತಲಾದಲ್ಲಿನ ಗುರುದ್ವಾರದಲ್ಲಿ ಸಿಖ್ಖರ ಧ್ವಜ ನಿಶಾನ್​ ಸಾಹೀಬ್​ನ್ನು ಅಪವಿತ್ರಗೊಳಿಸಿದ್ದಾನೆಂದು ಆರೋಪಿಸಿ ಮತ್ತೊಬ್ಬ ಯುವಕನಿಗೆ ಥಳಿಸಿ, ಪೊಲೀಸರಿಗೆ ನೀಡಲಾಗಿತ್ತು. ಆತನೂ ಕೂಡ ಈಗ ಮೃತಪಟ್ಟಿದ್ದಾಗಿ ವರದಿಯಾಗಿದೆ ಈ ಘಟನೆಯನ್ನು ಪಂಜಾಬ್​ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ತೀವ್ರವಾಗಿ ಖಂಡಿಸಿದ್ದಾರೆ. ಪ್ರಕರಣಗಳ ತನಿಖೆಗಾಗಿ ಉಪಮುಖ್ಯಮಂತ್ರಿ ಸುಖ್​ಜಿಂದರ್ ಸಿಂಗ್​ ರಾಂಧವಾ ಎಸ್​ಐಟಿ (ವಿಶೇಷ ತನಿಖಾ ತಂಡ)ಯನ್ನು ರಚಿಸಿದ್ದು, ಎರಡು ದಿನಗಳಲ್ಲಿ ಘಟನೆಯ ಸಂಪೂರ್ಣ ವರದಿ ಸಲ್ಲಿಸಲು ಸೂಚಿಸಿದ್ದಾರೆ.  

ರಾಂಧವಾ ಅವರು ಗೃಹ ಮಂತ್ರಿಯೂ ಆಗಿದ್ದು ಸುದ್ದಿಗಾರರೊಂದಿಗೆ ಮಾತನಾಡಿ, ದರ್ಬಾರ್​ ಸಾಹೀಬ್​​ನಲ್ಲಿ ನಡೆದ ಘಟನೆ ನಿಜಕ್ಕೂ ಶಾಕಿಂಗ್ ಆಗಿದೆ. ಅದರಲ್ಲಿ ಯುವಕ ಬೆಳಗ್ಗೆ ಸುಮಾರು 11.30ರಹೊತ್ತಿಗೆ ದರ್ಬಾರ್ ಸಾಹೀಬ್​ ಸಂಕೀರ್ಣ ಪ್ರವೇಶಿಸಿದ್ದಾನೆ. ಸಂಜೆ 6ಗಂಟೆವರೆಗೂ ಅಲ್ಲಿಯೇ ಇದ್ದ. ಅವನೂ ಕೂಡ ಯಾವುದೋ ಉದ್ದೇಶವನ್ನಿಟ್ಟುಕೊಂಡೇ ಬಂದಿದ್ದ. ಹೀಗಾಗಿ ಕೆಲವು ಸನ್ನಿವೇಶಗಳು ಅನುಮಾನ ಹುಟ್ಟಿಸುವಂತಿದೆ ಎಂದು ರಾಂಧವಾ ಹೇಳಿದ್ದಾರೆ.  ಹಾಗೇ, ಆರೋಪಿ ಎಲ್ಲಿಂದ ಬಂದಿದ್ದಾನೆ, ಆತನೊಂದಿಗೆ ಇನ್ಯಾರೆಲ್ಲ ಇದ್ದರು ಎಂಬುದನ್ನು ಪತ್ತೆಹಚ್ಚಲು ಗೋಲ್ಡನ್​ ಟೆಂಪಲ್​ ಸುತ್ತಮುತ್ತಲಿನ ಮಾರುಕಟ್ಟೆಗಳು, ಅಕ್ಕಪಕ್ಕದ ಪ್ರದೇಶಗಳಲ್ಲಿರುವ ಸಿಸಿಟಿವಿ ಫೂಟೇಜ್​ಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಆರೋಪಿಯ ಗುರುತು ಪತ್ತೆಯಾಗಿಲ್ಲ. ಆತನ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ನಮ್ಮ ಪಂಜಾಬ್​ ವಿಧಾನಸಭೆಯಲ್ಲಿ, ಸೆಕ್ಷನ್​ 298-295ಎಗೆ ತಿದ್ದುಪಡಿ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಇದೀಗ ಪಂಜಾಬ್​ನಲ್ಲಿ ಗುಂಪು ಹತ್ಯೆ ನಡೆದ ಬೆನ್ನಲ್ಲೇ, 295 ಎಗೆ ಅನುಮೋದನೆ ನೀಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಈ ಸೆಕ್ಷನ್​​ನಡಿ ಯಾವುದೇ ಧರ್ಮದಲ್ಲಿ ಹೀಗೆ ಹತ್ಯಾಕಾಂಡ ನಡೆದಾಗ, ಅದರಲ್ಲಿ ಪಾಲ್ಗೊಂಡವರಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ರಾಂಧವಾ ವಿವರಿಸಿದ್ದಾರೆ.

ಕಪುರ್ತಲಾದಲ್ಲಿ ಏನಾಯಿತು? ಗೋಲ್ಡನ್​ ಟೆಂಪಲ್​​ನ ಗರ್ಭಗುಡಿಯೊಳಗೆ ನುಗ್ಗಿದ್ದ ಯುವಕನೊಬ್ಬ, ಸರಪಳಿಯ ಒಳಗಿದ್ದ ಖಡ್ಗವನ್ನು ಎತ್ತಲು ಮುಂದಾಗಿದ್ದ. ಆದರೆ ಅಲ್ಲಿದ್ದ ಭಕ್ತರು ಹಿಡಿದು ಥಳಿಸಿದ ಪರಿಣಾಮ ಆತ ಮೃತಪಟ್ಟಿದ್ದ. ಅದು ಇಡೀ ಪಂಜಾಬ್​ನಲ್ಲಿ ಸಂಚಲನ ಮೂಡಿಸಿದೆ. ಅದರ ಬೆನ್ನಲ್ಲೇ ಪಂಜಾಬ್​ನ ಕಪುರ್ತಲಾದಲ್ಲಿರುವ ಗುರುದ್ವಾರದಲ್ಲಿ ಯುವಕನೊಬ್ಬ ಸಿಖ್ಖರ ಧಾರ್ಮಿಕ ಧ್ವಜ ತೆಗೆಯಲು ಪ್ರಯತ್ನಿಸಿದ. ಇದು ನಡೆದದ್ದು ನಿಜಾಂಪುರ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ.  ಅಲ್ಲಿಯೂ ಕೂಡ ಸ್ಥಳೀಯ ಭಕ್ತರು ಆತನನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಆತನೂ ಸಹ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದರು.

ಇದನ್ನೂ ಓದಿ: MS Dhoni: ಧೋನಿ- ಸಾಕ್ಷಿ ಮೊದಲ ಭೇಟಿಗೆ 14 ವರ್ಷ; ವಿಶೇಷ ಫೋಟೋ ಹಂಚಿಕೊಂಡ ಕೂಲ್ ಕ್ಯಾಪ್ಟನ್ ಮಡದಿ

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ