AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi in Prayagraj ಸ್ವಸಹಾಯ ಗುಂಪುಗಳಿಗೆ ₹1,000 ಕೋಟಿ ವರ್ಗಾವಣೆ; ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ: ನರೇಂದ್ರ ಮೋದಿ

ಹೆಣ್ಣು ಮಕ್ಕಳ ಭವಿಷ್ಯವನ್ನು ಸಶಕ್ತಗೊಳಿಸಲು ತಮ್ಮ ಸರ್ಕಾರ ಯಾವುದೇ ತಾರತಮ್ಯ ಅಥವಾ ಪಕ್ಷಪಾತವಿಲ್ಲದೆ ನಿರಂತರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ ವಾರ ಕೇಂದ್ರ ಸಚಿವ ಸಂಪುಟವು ವಿವಾಹದ ಕಾನೂನುಬದ್ಧ ವಯಸ್ಸನ್ನು 21 ಕ್ಕೆ ಹೆಚ್ಚಿಸಿದ ಉದಾಹರಣೆಯೊಂದಿಗೆ ಅವರು ಇದನ್ನು ವಿವರಿಸಿದರು.

PM Modi in Prayagraj ಸ್ವಸಹಾಯ ಗುಂಪುಗಳಿಗೆ ₹1,000 ಕೋಟಿ ವರ್ಗಾವಣೆ; ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ: ನರೇಂದ್ರ ಮೋದಿ
ನರೇಂದ್ರ ಮೋದಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Dec 21, 2021 | 4:01 PM

Share

ಲಖನೌ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಉತ್ತರ ಪ್ರದೇಶದ(Uttar Pradesh) ಸ್ವಸಹಾಯ ಗುಂಪುಗಳಿಗೆ (SHGs) 1,000 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಇದು ಸುಮಾರು 16 ಲಕ್ಷ ಮಹಿಳೆಯರಿಗೆ ಪ್ರಯೋಜನವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ತಳಮಟ್ಟದಲ್ಲಿ ಮಹಿಳೆಯರಿಗೆ ಅಗತ್ಯವಾದ ಕೌಶಲ್ಯ, ಪ್ರೋತ್ಸಾಹ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸಬಲೀಕರಣ ಮಾಡುವುದು ಅವರ ದೃಷ್ಟಿಯ ಭಾಗವಾಗಿತ್ತು. ಪ್ರಯಾಗ್‌ರಾಜ್‌ನಲ್ಲಿ ನಡೆದ ಈ ಕಾರ್ಯಕ್ರಮವು “ವಿನೂತನ” ಕಾರ್ಯಕ್ರಮವಾಗಿದ್ದು, 2 ಲಕ್ಷಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಪ್ರಧಾನಿ ಮೋದಿ ಅವರು ಹೆಣ್ಣುಮಕ್ಕಳಿಗೆ ನೆರವು ನೀಡಲು ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 20 ಕೋಟಿ ರೂ ವರ್ಗಾವಣೆ ಮಾಡಿದ್ದು, 202 ಪೂರಕ ಪೌಷ್ಟಿಕಾಂಶ ತಯಾರಿಕಾ ಘಟಕಗಳ ಶಂಕುಸ್ಥಾಪನೆಯನ್ನೂ ನೆರವೇರಿಸಿದರು. 

ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ: ಪ್ರಧಾನಿ ಮೋದಿ ಹೆಣ್ಣು ಮಕ್ಕಳ ಭವಿಷ್ಯವನ್ನು ಸಶಕ್ತಗೊಳಿಸಲು ತಮ್ಮ ಸರ್ಕಾರ ಯಾವುದೇ ತಾರತಮ್ಯ ಅಥವಾ ಪಕ್ಷಪಾತವಿಲ್ಲದೆ ನಿರಂತರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ ವಾರ ಕೇಂದ್ರ ಸಚಿವ ಸಂಪುಟವು ವಿವಾಹದ ಕಾನೂನುಬದ್ಧ ವಯಸ್ಸನ್ನು 21 ಕ್ಕೆ ಹೆಚ್ಚಿಸಿದ ಉದಾಹರಣೆಯೊಂದಿಗೆ ಅವರು ಇದನ್ನು ವಿವರಿಸಿದರು. ಹೆಣ್ಣುಮಕ್ಕಳು ಕೂಡ ತಮ್ಮ ಓದು ಮುಂದುವರಿಸಲು, ಸಮಾನ ಅವಕಾಶಗಳನ್ನು ಪಡೆಯಲು ಸಮಯವನ್ನು ಬಯಸುತ್ತಾರೆ, ಆದ್ದರಿಂದ ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು 21 ವರ್ಷಕ್ಕೆ ಏರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.

‘ಬೇಟಿ ಬಚಾವೋ, ಬೇಟಿ ಪಢಾವೋ’ ದಿಂದ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ ತಮ್ಮ ಸರ್ಕಾರದ ‘ಬೇಟಿ ಬಚಾವೋ, ಬೇಟಿ ಪಢಾವೋ’ ಅಭಿಯಾನದಿಂದಾಗಿ ಹಲವು ರಾಜ್ಯಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ತಮ್ಮ ಸರ್ಕಾರವು ಗರ್ಭಿಣಿಯರಿಗೆ ಪ್ರತಿರಕ್ಷಣೆ, ಆಸ್ಪತ್ರೆಗಳಲ್ಲಿ ಹೆರಿಗೆ ಮತ್ತು ಗರ್ಭಾವಸ್ಥೆಯಲ್ಲಿ ಪೋಷಣೆಯನ್ನು ಕೇಂದ್ರೀಕರಿಸಿದೆ ಎಂದು ಅವರು ಹೇಳಿದರು. “ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ, ಗರ್ಭಾವಸ್ಥೆಯಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗಳಲ್ಲಿ 5,000 ರೂಪಾಯಿಗಳನ್ನು ಠೇವಣಿ ಮಾಡಲಾಗುತ್ತದೆ, ಇದರಿಂದ ಅವರು ಸರಿಯಾದ ಆಹಾರಕ್ರಮವನ್ನು ಪಡೆದುಕೊಳ್ಳಬಹುದು ಎಂದು ಮೋದಿ ಹೇಳಿದ್ದಾರೆ.

ಮಹಿಳೆಯರಿಗೆ ನೀಡಿರುವ ಭದ್ರತೆ ಅಭೂತಪೂರ್ವವಾಗಿದೆ ಹಿಂದಿನ ಸರ್ಕಾರಗಳ ಯುಗವನ್ನು ಮರಳಿ ಬರಲು ಬಿಡುವುದಿಲ್ಲ ಎಂದು ಉತ್ತರ ಪ್ರದೇಶದ ಮಹಿಳೆಯರು, ತಾಯಿ-ಸಹೋದರಿಯರು-ಹೆಣ್ಣುಮಕ್ಕಳು ನಿರ್ಧರಿಸಿದ್ದಾರೆ. ಡಬಲ್ ಎಂಜಿನ್ ಸರ್ಕಾರ ನೀಡಿದ ಭದ್ರತೆ, ಉತ್ತರ ಪ್ರದೇಶದ ಮಹಿಳೆಯರಿಗೆ ಅದು ನೀಡಿದ ಗೌರವ ಅವರ ಘನತೆಯನ್ನು ಹೆಚ್ಚಿಸಿದೆ, ಇದು ಅಭೂತಪೂರ್ವವಾಗಿದೆ.

ಪ್ರಯಾಗರಾಜ್ ನಮ್ಮ ಮಾತೃಶಕ್ತಿಯ ಪ್ರತೀಕ: ಪ್ರಧಾನಿ ಮೋದಿ 2 ಲಕ್ಷ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಾವಿರಾರು ವರ್ಷಗಳಿಂದ ನಮ್ಮ ಮಾತೃಶಕ್ತಿಯ ಪ್ರತೀಕವಾದ ಗಂಗಾ-ಯಮುನಾ-ಸರಸ್ವತಿಯ ಸಂಗಮ ಭೂಮಿ ಪ್ರಯಾಗ್​​​ರಾಜ್. ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಮಾಡಿರುವ ಕೆಲಸವನ್ನು ಇಡೀ ದೇಶವೇ ಗಮನಿಸುತ್ತಿದೆ. ಇದೀಗ ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆಯ ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿ ಹೆಣ್ಣುಮಕ್ಕಳ ಖಾತೆಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವರ್ಗಾಯಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಈ ಯೋಜನೆಯು ಬಡವರು, ಹುಡುಗಿಯರು ಮತ್ತು ಹಳ್ಳಿಗಳ ನಂಬಿಕೆಯ ಉತ್ತಮ ಮಾಧ್ಯಮವಾಗುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ಮಹಿಳಾ ಸಬಲೀಕರಣ ಯೋಜನೆಗಳ ಫಲಾನುಭವಿಗಳಿಗೆ ₹1000 ಕೋಟಿ ವರ್ಗಾವಣೆ ಮಾಡಲಿದ್ದಾರೆ ಮೋದಿ

Published On - 3:23 pm, Tue, 21 December 21