ದೆಹಲಿ: ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಾಧ್ಯವಿರುವ ಎಲ್ಲಾ ಕೆಲಸಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ (PM Kisan) ಎರಡನೇ ವರ್ಷಾಚರಣೆಯ ಪ್ರಯುಕ್ತ ಇಂದು (ಫೆ.24) ಮೋದಿ ಸರಣಿ ಟ್ವೀಟ್ ಮಾಡಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಳಗೊಳಿಸಲು ಸರ್ಕಾರ ಶ್ರಮಿಸಿದೆ. ಕೃಷಿ ವಲಯದಲ್ಲಿ ಬದಲಾವಣೆಗಳನ್ನು ತರಲು ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಉತ್ತಮ ನೀರಾವರಿ, ಉತ್ತಮ ತಂತ್ರಜ್ಞಾನ, ಬೆಳೆವಿಮೆ, ಮಣ್ಣಿನ ಫಲವತ್ತತೆ ವಿಚಾರದಲ್ಲಿ ಕೇಂದ್ರ ಶ್ರಮಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಎರಡು ವರ್ಷದ ಹಿಂದೆ ಇದೇ ದಿನ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಜಾರಿಗೆ ಬಂತು. ದೇಶದ ಜನತೆಗೆ ಆಹಾರ ಒದಗಿಸಲು ಹಗಲು ರಾತ್ರಿ ಶ್ರಮಿಸುವ ರೈತರಿಗೆ ಗೌರವಯುತ ಮತ್ತು ಸಮೃದ್ಧಿಯ ಬದುಕು ನೀಡುವ ಸಲುವಾಗಿ ಈ ಯೋಜನೆ ಜಾರಿಗೊಳಿಸಲಾಯಿತು. ರೈತರ ಉತ್ಸಾಹ ನಿಜವಾಗಿಯೂ ಸ್ಫೂರ್ತಿ ತುಂಬುವಂಥದ್ದು ಎಂದು ಮೋದಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯು ಸಣ್ಣ ಮತ್ತು ಮಧ್ಯಮ ವಲಯದ ರೈತರಿಗೆ ನಿಗದಿತ ಹಣ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ವಾರ್ಷಿಕ 6,000 ರೂಪಾಯಿ ಮೊತ್ತವನ್ನು ರೈತರಿಗೆ ನೀಡಲಾಗುತ್ತಿದೆ. ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ರೈತರು 2,000 ರೂಪಾಯಿ ಪಡೆಯುತ್ತಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯು ಫೆಬ್ರವರಿ 24, 2019ರಂದು ಜಾರಿಗೆ ಬಂತು. ಈ ಯೋಜನೆಯಂತೆ ರೈತರು ವಾರ್ಷಿಕ ₹ 6,000 ಪಡೆಯುತ್ತಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ವೆಬ್ಸೈಟ್ನ ಮಾಹಿತಿಯಂತೆ, 11.47 ಕೋಟಿ ರೈತರು ಯೋಜನೆಯ ಲಾಭ ಪಡೆಯುತ್ತಿದ್ದಾರೆ.
On this day, 2 years ago the PM-Kisan scheme was launched with an aim to ensure a life of dignity as well as prosperity for our hardworking farmers, who work day and night to keep our nation fed. The tenacity and passion of our farmers is inspiring. #KisanKaSammanPMKisan pic.twitter.com/ycaod6SP0T
— Narendra Modi (@narendramodi) February 24, 2021
Our Government had the honour of ushering a historic increase in MSP. We doing everything possible to double the income of farmers.
You can find insightful content on the NaMo App, offering a glimpse of the work done for farmers. #KisanKaSammanPMKisan pic.twitter.com/pHxqY3NBPq
— Narendra Modi (@narendramodi) February 24, 2021
ಇದನ್ನೂ ಓದಿ: ಸಂಸತ್ ಭವನದ ಬಳಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಲಿ: ರೈತ ಮುಖಂಡ ರಾಕೇಶ್ ಟಿಕಾಯತ್ ಆಪೇಕ್ಷೆ
ಇದನ್ನೂ ಓದಿ: ಪ್ರತಿಭಟನಾ ಸ್ಥಳ ಖಾಲಿ ಮಾಡಿ ಎಂದು ಬ್ಯಾನರ್ ಹಚ್ಚಿದ ದೆಹಲಿ ಪೊಲೀಸರು; ರೈತ ಮುಖಂಡರ ಆಕ್ರೋಶ
Published On - 2:37 pm, Wed, 24 February 21