Delhi Mumbai Expressway: ರಾಜಸ್ಥಾನದ ದೌಸಾದಲ್ಲಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ಮೊದಲ ಹಂತಕ್ಕೆ ಮೋದಿ ಚಾಲನೆ

|

Updated on: Feb 12, 2023 | 5:08 PM

PM Narendra Modi "ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ರಾಷ್ಟ್ರಕ್ಕಾಗಿ ನಮ್ಮ ಮಂತ್ರವಾಗಿದೆ, ನಾವು ಅದನ್ನು ಅನುಸರಿಸುತ್ತಾ 'ಸಮರ್ಥ ಭಾರತ'ವನ್ನು ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Delhi Mumbai Expressway: ರಾಜಸ್ಥಾನದ ದೌಸಾದಲ್ಲಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ಮೊದಲ ಹಂತಕ್ಕೆ ಮೋದಿ ಚಾಲನೆ
ನರೇಂದ್ರ ಮೋದಿ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ರಾಜಸ್ಥಾನದ ದೌಸಾದಲ್ಲಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ(Delhi Mumbai Expressway) ಮೊದಲ ಹಂತವನ್ನು ಉದ್ಘಾಟಿಸಿದರು. 246-ಕಿಮೀ ದೆಹಲಿ-ದೌಸಾ-ಲಾಲ್ಸೋಟ್ ಎಕ್ಸ್‌ಪ್ರೆಸ್‌ವೇ ದೆಹಲಿಯಿಂದ ಜೈಪುರದ ಪ್ರಯಾಣದ ಸಮಯವನ್ನು ಐದು ಗಂಟೆಗಳಿಂದ ಸುಮಾರು ಮೂರೂವರೆ ಗಂಟೆಗಳವರೆಗೆ ಕಡಿತಗೊಳಿಸುತ್ತದೆ. ಇದು ಇಡೀ ಪ್ರದೇಶದಲ್ಲಿ ಆರ್ಥಿಕ ಅವಕಾಶಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ. “ಮೂಲಸೌಕರ್ಯಗಳ ಮೇಲಿನ ಹೂಡಿಕೆಯು ಮತ್ತಷ್ಟು ಹೂಡಿಕೆಗಳನ್ನು ತರುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ” ಎಂದು ಪೂರ್ವ ರಾಜಸ್ಥಾನದ ದೌಸಾದ ಧನವರ್ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಹೇಳಿದ್ದಾರೆ. “ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ರಾಷ್ಟ್ರಕ್ಕಾಗಿ ನಮ್ಮ ಮಂತ್ರವಾಗಿದೆ, ನಾವು ಅದನ್ನು ಅನುಸರಿಸುತ್ತಾ ‘ಸಮರ್ಥ ಭಾರತ’ವನ್ನು ಮಾಡುತ್ತಿದ್ದೇವೆ.ಎಕ್ಸ್‌ಪ್ರೆಸ್‌ವೇ “ಅಭಿವೃದ್ಧಿ ಹೊಂದುತ್ತಿರುವ ಭಾರತದ ಭವ್ಯವಾದ ಚಿತ್ರ” ಎಂದಿದ್ದಾರೆ ಮೋದಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಸಚಿವ ವಿ ಕೆ ಸಿಂಗ್, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಮತ್ತು ಇತರ ಮುಖಂಡರು ಸಮಾರಂಭದಲ್ಲಿ ಭಾಗಿಯಾಗಿದ್ದರು. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅವರ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ವಿಡಿಯೊ ಲಿಂಕ್ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಗೆಹ್ಲೋಟ್ ಜೈಪುರದ ಮುಖ್ಯಮಂತ್ರಿಯವರ ನಿವಾಸದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಖಟ್ಟರ್ ಅವರು ನುಹ್ ಜಿಲ್ಲೆಯಲ್ಲಿ ನಡೆದ ಸಮಾರಂಭದಿಂದಲೇ ಮಾತನಾಡಿದ್ದಾರೆ.

ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇಯ ಮೊದಲ ಹಂತವು ಚುನಾವಣಾ ವರ್ಷಕ್ಕೆ ಮುಂಚಿತವಾಗಿ ಸಾರ್ವಜನಿಕರಿಗೆ ತೆರೆಯಲ್ಪಟ್ಟಿದೆ. ಗ್ರ್ಯಾಂಡ್ ಎಕ್ಸ್‌ಪ್ರೆಸ್‌ವೇ ರಾಷ್ಟ್ರೀಯ ರಾಜಧಾನಿಯಿಂದ ಅದರ ಆರ್ಥಿಕ ಕೇಂದ್ರವಾದ ಮುಂಬೈಗೆ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡಲು ಕೇವಲ 12 ಗಂಟೆಗಳವರೆಗೆ ಭರವಸೆ ನೀಡುತ್ತದೆ.

ಇದನ್ನೂ ಓದಿ: Expressway: ಭಾರತದ ಅತಿದೊಡ್ಡ ಇ-ವೇ: ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇ ವೈಶಿಷ್ಟ್ಯಗಳೇನು?

ಎಂಟು ಲೇನ್-ಅಗಲ ಮತ್ತು ಸುಮಾರು 1,400 ಕಿ.ಮೀ ಉದ್ದದ ಈ ಎಕ್ಸ್ ಪ್ರೆಸ್ ವೇಯನ್ನು ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು 12 ಲೇನ್‌ಗಳಿಗೆ ಅವಕಾಶ ಕಲ್ಪಿಸಲು ವಿಸ್ತರಿಸಬಹುದಾಗಿದೆ.

ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ಭಾರತದ ಐದು ಪ್ರಮುಖ ರಾಜ್ಯಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿರುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳು, ಹೆಲಿಪ್ಯಾಡ್‌ಗಳು, ಟ್ರಾಮಾ ಸೆಂಟರ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಮೀಸಲಾದ ಲೇನ್‌ಗಳಿಂದ ಹಿಡಿದು ರಸ್ತೆ ಬದಿಯ ಸೌಕರ್ಯಗಳೊಂದಿಗೆ, ಪ್ರಾಣಿಗಳ ಮೇಲ್ಸೇತುವೆಗಳು ಮತ್ತು ವನ್ಯಜೀವಿ ದಾಟುವಿಕೆಗಳನ್ನು ಹೊಂದಿರುವ ಏಷ್ಯಾದ ಮೊದಲ ಹೆದ್ದಾರಿಯಾಗಿದೆ.

ಇದು ಅಪಘಾತ ಅಥವಾ ಇತರ ತುರ್ತು ಸಂದರ್ಭಗಳಲ್ಲಿ ಸಹಾಯ ಪಡೆಯಲು ಪ್ರತಿ ಎರಡು ಕಿಲೋಮೀಟರ್‌ಗಳಿಗೆ SOS ಕೇಂದ್ರಗಳನ್ನು ಹೊಂದಿದೆ.

ಸೊಹ್ನಾ-ದೌಸಾ ಮಾರ್ಗದ ಉದ್ಘಾಟನೆಯು ಹರಿಯಾಣದ ಗುರುಗ್ರಾಮ್, ಸೋಹ್ನಾ, ನೂಹ್, ಮೇವಾತ್ ಮತ್ತು ರಾಜಸ್ಥಾನದ ಅಲ್ವಾರ್ ಮತ್ತು ದೌಸಾವನ್ನು ಮೆಗಾ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕಿಸುತ್ತದೆ.ದೆಹಲಿ-ದೌಸಾ ಮಾರ್ಗವು ಎಂಟು ಪ್ರವೇಶ ಮತ್ತು ನಿರ್ಗಮನ ಬಿಂದುಗಳನ್ನು ಹೊಂದಿದೆ.

ಇದನ್ನೂ ಓದಿ:PM Narendra Modi: ನಾಳೆ ಏರ್​ಶೋ ಉದ್ಘಾಟನೆಗೆ ಇಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ

ಎಲ್ಲಾ ವಾಹನಗಳಿಗೆ 120 ಕಿಮೀ ವೇಗದ ವೇಗದೊಂದಿಗೆ, ಹೆದ್ದಾರಿಯು ಪ್ರತಿ ವರ್ಷ ಸುಮಾರು 300 ಮಿಲಿಯನ್ ಲೀಟರ್ ಇಂಧನ ಮತ್ತು 800 ಮಿಲಿಯನ್ ಕಿಲೋಗ್ರಾಂಗಳಷ್ಟು Co2 ಹೊರಸೂಸುವಿಕೆಯನ್ನು ಉಳಿಸುತ್ತದೆ.

ಇಡೀ ಹೆದ್ದಾರಿಯು ಸ್ವಯಂಚಾಲಿತ ಟೋಲ್ ಬೂತ್‌ಗಳನ್ನು ಹೊಂದಿದ್ದು, ಟೋಲ್ ತೆರಿಗೆಯನ್ನು ಒಮ್ಮೆ ಮಾತ್ರ ಕಡಿತಗೊಳಿಸಲಾಗುತ್ತದೆ. ಒಬ್ಬರುರು ಹೆದ್ದಾರಿಯನ್ನು ಪ್ರವೇಶಿಸಿದ ಕ್ಷಣದಿಂದ ಅವರು ನಿರ್ಗಮಿಸುವ ಸಮಯದವರೆಗೆ ಇದನ್ನು ಲೆಕ್ಕಹಾಕಲಾಗುತ್ತದೆ. 220 ಕಿಮೀ ಉದ್ದದ ದೆಹಲಿ-ಜೈಪುರ ಪ್ರಯಾಣಕ್ಕೆ ಟೋಲ್ ತೆರಿಗೆ ₹ 70 ಆಗಿದ್ದು, ಪ್ರತಿ ಕಿಲೋಮೀಟರ್‌ಗೆ 35 ಪೈಸೆ ಎಂದು ಲೆಕ್ಕ ಹಾಕಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:41 pm, Sun, 12 February 23