ಓಂ, ಅಲ್ಲಾ ಎರಡೂ ಒಂದೇ; ವಿವಾದ ಸೃಷ್ಟಿಸಿದ ಜಮಿಯತ್ ಉಲೆಮಾ ಇ ಹಿಂದ್ ಅಧ್ಯಕ್ಷ
ನಿಮ್ಮ ಓಂನನ್ನೇ ನಾವು ಅಲ್ಲಾ ಎಂದು ಕರೆಯುತ್ತೇವೆ. ನೀವು ಈಶ್ವರ ಎಂದು ಕರೆಯುವವನನ್ನು ಪಾರ್ಸಿಯಲ್ಲಿ ಖುದಾ ಎಂದು ಕರೆಯಲಾಗುತ್ತದೆ ಎಂದು ಜಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಸೈಯದ್ ಅರ್ಷದ್ ಮದನಿ ಹೇಳಿದ್ದಾರೆ.
ನವದೆಹಲಿ: ಹಿಂದೂ ದೇವರ (Hindu God) ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಮೂಲಕ ಜಮಿಯತ್ ಉಲೇಮಾ-ಇ-ಹಿಂದ್ (Jamiat Ulema-e-Hind) ಮುಖ್ಯಸ್ಥ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಹಿಂದೂ ಧರ್ಮದ ಪವಿತ್ರ ಸಂಕೇತವಾದ ಓಂ ಮತ್ತು ಮುಸ್ಲಿಮರ ಅಲ್ಲಾ ಒಂದೇ ಎಂದು ಹೇಳುವ ಮೂಲಕ ಜಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಸೈಯದ್ ಅರ್ಷದ್ ಮದನಿ ವಿವಾದಕ್ಕೆ ಕಾರಣರಾಗಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಜಮೀಯತ್ ಉಲೇಮಾ-ಇ-ಹಿಂದ್‌ನ 3 ದಿನಗಳ ಸರ್ವಸದಸ್ಯರ ಅಧಿವೇಶನದಲ್ಲಿ ಮಾತನಾಡಿದ ಅವರು, ಶ್ರೀರಾಮನಾಗಲಿ, ಬ್ರಹ್ಮನಾಗಲಿ ಯಾರೂ ಇಲ್ಲದಿದ್ದಾಗ ಧರ್ಮಗುರುಗಳು ಯಾರನ್ನು ಪೂಜಿಸುತ್ತಿದ್ದರು? ಆಗ ಕೆಲವರು ಓಂ ಆರಾಧನೆ ಮಾಡುತ್ತಿದ್ದರು ಎಂದು ಹೇಳಿದ್ದರು. ನಂತರ ನಾನು ಅವರಿಗೆ ಹೇಳಿದ್ದೇನೆಂದರೆ, ನಿಮ್ಮ ಓಂನನ್ನೇ ನಾವು ಅಲ್ಲಾ ಎಂದು ಕರೆಯುತ್ತೇವೆ. ನೀವು ಈಶ್ವರ ಎಂದು ಕರೆಯುವವನನ್ನು ಪಾರ್ಸಿಯಲ್ಲಿ ಖುದಾ ಎಂದು ಕರೆಯಲಾಗುತ್ತದೆ. ಇಂಗ್ಲಿಷ್ ಮಾತನಾಡುವ ಜನರು ಆತನನ್ನೇ ದೇವರು ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Divorce: ಮುಸ್ಲಿಂ ಮಹಿಳೆಯರು ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯವನ್ನು ಮಾತ್ರ ಸಂಪರ್ಕಿಸಬೇಕು: ಮದ್ರಾಸ್ ಹೈಕೋರ್ಟ್
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಭಾರತ ಎಷ್ಟು ಸೇರಿದೆಯೋ ಅಷ್ಟೇ ಭಾರತವೂ ನಮಗೂ ಸೇರಿದ್ದು ಎಂದು ಶುಕ್ರವಾರ ಅವರು ಹೇಳಿದ್ದರು.
#WATCH मैंने धर्म गुरु से पूछा जब कोई नहीं था,न श्री राम,न ब्रह्म,तब मनु किसे पूजते थे?कुछ लोग बताते हैं कि वे ओम को पूजते थे तब मैंने कहा कि इन्हें ही तो हम अल्लाह,आप ईश्वर,फारसी बोलने वाले खुदा और अंग्रेजी बोलने वाले गॉड कहते हैं: जमीयत उलेमा-ए-हिंद प्रमुख मौलाना सैयद अरशद मदनी pic.twitter.com/TxiKNjVhMk
— ANI_HindiNews (@AHindinews) February 12, 2023
ಭಾರತ ನಮ್ಮ ದೇಶ. ಈ ದೇಶವು ನರೇಂದ್ರ ಮೋದಿ ಮತ್ತು ಮೋಹನ್ ಭಾಗವತ್ ಅವರಿಗೆ ಸೇರಿದ್ದಂತೆ ಮಹಮೂದ್ ಮದನಿಗೆ ಕೂಡ ಸೇರಿದೆ. ಮಹಮೂದ್ ಅವರಿಗಿಂತ ಒಂದು ಇಂಚು ಮುಂದಿಲ್ಲ ಅಥವಾ ಅವರು ಮಹಮೂದ್‌ಗಿಂತ ಒಂದು ಇಂಚು ಮುಂದಿಲ್ಲ ಎಂದು ಅವರು ಹೇಳಿದ್ದರು.
ಜಮಿಯತ್ ಉಲಾಮಾ-ಇ-ಹಿಂದ್ ಮುಖ್ಯಸ್ಥರು ಭಾರತವು ಮುಸ್ಲಿಮರ ಮೊದಲ ತಾಯ್ನಾಡು. ಇಸ್ಲಾಂ ಈ ದೇಶದ ಅತ್ಯಂತ ಹಳೆಯ ಧರ್ಮ ಎಂದು ಹೇಳುವ ಮೂಲಕ ಅವರು ವಿವಾದ ಸೃಷ್ಟಿಸಿದ್ದರು.