ದೆಹಲಿ: ಬ್ರಹ್ಮಕುಮಾರಿಯರ ಸಂಘಟನೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಇಂದು ತಾರತಮ್ಯಕ್ಕೆ ಜಾಗವಿಲ್ಲದ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ದೃಢವಾಗಿ ನಿಂತಿರುವ ಸಮಾಜವನ್ನು ನಾವು ನಿರ್ಮಿಸುತ್ತಿದ್ದೇವೆ. ಚಿಂತನೆ ಮತ್ತು ವಿಧಾನವು ನವೀನ ಮತ್ತು ನಿರ್ಧಾರಗಳು ಪ್ರಗತಿಪರವಾಗಿರುವ ಭಾರತದ ಹೊರಹೊಮ್ಮುವಿಕೆಯನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ‘ಆಜಾದಿ ಕೇ ಅಮೃತ್ ಮಹೋತ್ಸವ ಸೆ ಸ್ವರ್ಣಿಂ ಭಾರತ್ ಕೆ ಓರ್’ ಕಾರ್ಯಕ್ರಮದ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಮೋದಿ, ಈ ಅಮೃತ ಕಾಲ ಮಲಗಿರುವಾಗ ಕನಸು ಕಾಣುವುದಕ್ಕಲ್ಲ, ಎಚ್ಚರದಿಂದ ಸಂಕಲ್ಪಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿದೆ . ಮುಂಬರುವ 25 ವರ್ಷಗಳು ಕಠಿಣ ಪರಿಶ್ರಮ, ತ್ಯಾಗ ಮತ್ತು ತಪಸ್ಸಿನ ಕಾಲವಾಗಿದೆ. ಈ 25 ವರ್ಷಗಳು ನೂರಾರು ವರ್ಷಗಳ ಗುಲಾಮಗಿರಿಯಲ್ಲಿ ನಮ್ಮ ಸಮಾಜ ಕಳೆದುಕೊಂಡಿದ್ದನ್ನು ಮರಳಿ ಪಡೆಯಲಿರುವ ಅವಧಿಯಾಗಿದೆ ಎಂದು ಹೇಳಿದ್ದಾರೆ. ‘ಆಜಾದಿ ಕೇ ಅಮೃತ್ ಮಹೋತ್ಸವ ಸೇ ಸ್ವರ್ಣಿಂ ಭಾರತ್ ಕೆ ಓರ್’ ಕಾರ್ಯಕ್ರಮವನ್ನು ವರ್ಚುವಲ್ ಆಗಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಜಾಗತಿಕ ಇಮೇಜ್ ಅನ್ನು ಹಾಳುಮಾಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಇದನ್ನು ಕೇವಲ ರಾಜಕೀಯ ಎಂದು ಹೇಳುವ ಮೂಲಕ ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದು ನಮ್ಮ ದೇಶದ ಪ್ರತಿಷ್ಠೆಯ ಪ್ರಶ್ನೆಯಾಗಿದೆ ಎಂದು ಹೇಳಿದರು. ಭಾರತ ವಿರೋಧಿ ಪ್ರಚಾರವನ್ನು ಎದುರಿಸುವಲ್ಲಿ ಬ್ರಹ್ಮಕುಮಾರಿಗಳು ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಯಾವ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ಪ್ರಧಾನಿ ಮೋದಿ ವಿವರಿಸಿದರು. “ವಿವಿಧ ದೇಶಗಳಲ್ಲಿನ ಜನರಿಗೆ ಸರಿಯಾದ ಮಾಹಿತಿಯನ್ನು ರವಾನಿಸಲಾಗುತ್ತಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು.ಭಾರತದ ವಿರುದ್ಧ ಹರಡುತ್ತಿರುವ ವದಂತಿಗಳ ವಿರುದ್ಧ ಹೋರಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮೋದಿ ಹೇಳಿದರು.
ಮೋದಿ ಯಾವುದೇ ನಿರ್ದಿಷ್ಟ ಘಟನೆಯನ್ನು ಸೂಚಿಸದಿದ್ದರೂ, ಕಳೆದ ವರ್ಷ ಅಕ್ಟೋಬರ್ 12 ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) 28 ನೇ ಸಂಸ್ಥಾಪನಾ ದಿನದ ಸಮಾರಂಭವನ್ನು ಉದ್ದೇಶಿಸಿ ಮಾತನಾಡುವಾಗ,ಇದೇ ರೀತಿಯ ಸಂದೇಶವನ್ನು ಕಳುಹಿಸಿದ್ದರು. ಅವರು ‘ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತುವಾಗ ಕೆಲವೇ ಕೆಲವುಗಳಿಗೆ ಮಾತ್ರ ಸೀಮಿತ ಆಗಬೇಡಿ’ ಎಂದು ಮೋದಿ ಜನರಲ್ಲಿ ಒತ್ತಾಯಿಸಿದ್ದರು.
Prime Minister Narendra Modi inaugurates the launch of ‘Azadi Ke Amrit Mahotsav se Swarnim Bharat Ki Ore’ pic.twitter.com/WF8L5RPEQx
— ANI (@ANI) January 20, 2022
ಇಂದು ಕೋಟಿಗಟ್ಟಲೆ ಭಾರತೀಯರು ಸ್ವರ್ಣಿಂ ಭಾರತಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ರಾಷ್ಟ್ರದ ಪ್ರಗತಿಯಲ್ಲಿ ನಮ್ಮ ಪ್ರಗತಿ ಅಡಗಿದೆ. ರಾಷ್ಟ್ರವು ನಮ್ಮಿಂದ ಅಸ್ತಿತ್ವದಲ್ಲಿದೆ ಮತ್ತು ನಾವು ರಾಷ್ಟ್ರದಿಂದ ಅಸ್ತಿತ್ವದಲ್ಲಿದ್ದೇವೆ. ಈ ಅರಿವು ನವ ಭಾರತದ ನಿರ್ಮಾಣದಲ್ಲಿ ಭಾರತೀಯರ ದೊಡ್ಡ ಶಕ್ತಿಯಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಏತನ್ಮಧ್ಯೆ, ಏಳು ವರ್ಷಗಳ ಅವಧಿಯ ಯೋಜನೆಗಳನ್ನು ಒಳಗೊಂಡಿರುವ ‘ಆಜಾದಿ ಕೇ ಅಮೃತ್ ಮಹೋತ್ಸವ ಸೆ ಸ್ವರ್ಣಿಮ್ ಭಾರತ್ ಕಿ ಓರ್’ ಉಪಕ್ರಮಕ್ಕಾಗಿ ಬ್ರಹ್ಮಕುಮಾರಿಯರನ್ನು ಮೋದಿ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಅವರು ಹಲವಾರು ಯೋಜನೆಗಳಿಗೆ ಚಾಲನೆ ನೀಡಿದರು. ಅವುಗಳೆಂದರೆ ಮೈ ಇಂಡಿಯಾ ಹೆಲ್ತೀ ಇಂಡಿಯಾ, ಆತ್ಮ ನಿರ್ಭರ್ ಭಾರತ್: ಸ್ವಾವಲಂಬಿ ರೈತರು, ವುಮೆನ್ : ಫ್ಲ್ಯಾಗ್ ಬಿಯರರ್ಸ್ ಆಫ್ ಇಂಡಿಯಾ, ಪವರ್ ಆಫ್ ಪೀಸ್ ಬಸ್ ಕ್ಯಾಂಪೇನ್, ಅನ್ದೇಕಾ ಭಾರತ್ ಸೈಕಲ್ ರ್ಯಾಲಿ, ಯುನೈಟೆಡ್ ಇಂಡಿಯಾ ಮೊಟಾರ್ ಬೈಕ್ ಕ್ಯಾಂಪೇನ್ ಮತ್ತು ಸ್ವಚ್ಛ ಭಾರತ್ ಅಭಿಯಾನ್ ಅಡಿಯಲ್ಲಿ ಪರಿಸರ ಸ್ನೇಹಿ ಕಾರ್ಯಕ್ರಮಗಳು.
ಇದನ್ನೂ ಓದಿ: ಮಲಪ್ರಭಾ ಸಕ್ಕರೆ ಕಾರ್ಖಾನೆ ಮತ್ತೆ ಗೋಲ್‌ಮಾಲ್: ಅಮಾಯಕರ ಹೆಸರಲ್ಲಿ 16 ಕೋಟಿ ಸಾಲ! ನ್ಯಾಯಕ್ಕಾಗಿ ಅಮಾಯಕ ಕೂಗು
Published On - 12:14 pm, Thu, 20 January 22