Agniveer Training: ಪ್ರಧಾನ ನರೇಂದ್ರ ಮೋದಿ ಮೊದಲ ಬ್ಯಾಚ್ ಅಗ್ನಿವೀರರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಮಾಲೋಚನೆ ನಡೆಸಿದರು
ನಾಸಿಕ್ ಆರ್ಟಿಲ್ಲರಿ ಸೆಂಟರ್ ನಲ್ಲಿ ಅಗ್ನಿವೀರರ ತರಬೇತಿಗಾಗಿ ಎಲ್ಲ ಮೂಲಭೂತ ಸೌಕರ್ಯಗಳಿವೆ ಮತ್ತು 2,600 ಜನಕ್ಕೆ ಅವಶ್ಯವಿರುವ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ನಾಸಿಕ್ ಆರ್ಟಿಲ್ಲರಿ ಡಿಪೋದ ಲೆಫ್ಟಿನೆಂಟ್ ಕರ್ನಲ್ ಎಸ್ ಕೆ ಪಾಂಡಾ ಹೇಳಿದ್ದಾರೆ
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ರಕ್ಷಣ ಸಚಿವ ರಾಜಾನಾಥ್ ಸಿಂಗ್ (Rajnath Singh) ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಗ್ನಿವೀರರ (Agniveers) ಮೊದಲ ಬ್ಯಾಚ್ ನ ಯುವಕರೊಂದಿಗೆ ಸಮಾಲೋಚನೆ ನಡೆಸಿ ಅವರೆಲ್ಲರಿಗೆ ಶುಭ ಹಾರೈಸಿದರು.
#WATCH | Delhi: Prime Minister Narendra Modi and Defence Minister Rajnath Singh interact with Agniveers.
(Source: PMO) pic.twitter.com/SmCKyzSbjW
— ANI (@ANI) January 16, 2023
ಅಗ್ನಿವೀರರ ನೇಮಕಾತಿಯ ಮೊದಲ ಬ್ಯಾಚ್ ನಲ್ಲಿ ಆಯ್ಕೆಯಾಗಿರುವ 2,600 ಯುವಕರಿಗೆ ಆರಂಭದ 6-ತಿಂಗಳು ಕಾಲ ತರಬೇತಿ ನೀಡಿ ಭಾರತೀಯ ಸಶಸ್ತ್ರ ಸೇನೆಯ ಮೂರು ದಳಗಳಾಗಿರುವ ಭೂಸೇನೆ, ವಾಯದಳ ಮತ್ತು ನೌಕಾದಳಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ ನಾಸಿಕ್ ನಗರದಲ್ಲಿರುವ ಆರ್ಟಿಲರಿ ಸೆಂಟರ್ ನಲ್ಲಿ ಅಗ್ನಿವೀರರ ತರಬೇತಿ ಜನೆವರಿ ಒಂದರಿಂದ ಪ್ರಾರಂಭಗೊಂಡಿದೆ.
ಇದನ್ನೂ ಓದಿ: Team India: ಹಾಂಕಾಂಗ್ ಟು ಲಂಕಾ; ಏಕದಿನ ಮಾದರಿಯಲ್ಲಿ ಭಾರತದ ದಾಳಿಗೆ ನಲುಗಿದ ದೇಶಗಳಿವು!
ನಾಸಿಕ್ ಆರ್ಟಿಲ್ಲರಿ ಸೆಂಟರ್ ನಲ್ಲಿ ಅಗ್ನಿವೀರರ ತರಬೇತಿಗಾಗಿ ಎಲ್ಲ ಮೂಲಭೂತ ಸೌಕರ್ಯಗಳಿವೆ ಮತ್ತು 2,600 ಜನಕ್ಕೆ ಅವಶ್ಯವಿರುವ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ನಾಸಿಕ್ ಆರ್ಟಿಲ್ಲರಿ ಡಿಪೋದ ಲೆಫ್ಟಿನೆಂಟ್ ಕರ್ನಲ್ ಎಸ್ ಕೆ ಪಾಂಡಾ ಹೇಳಿದ್ದಾರೆ. ಅಗ್ನವೀರರಿಗೆ ಒಟ್ಟು 31 ವಾರಗಳ ತರಬೇತಿ ನೀಡಲಾಗುವುದು ಅದರಲ್ಲಿ ಮೊದಲ 10 ವಾರ ಮೂಲಭೂತ ತರಬೇತಿಯಾದರೆ ಮಿಕ್ಕಿದ 21-ವಾರ ಉನ್ನತ ಹಂತದ ತರಬೇತಿಯಾಗಿರುತ್ತದೆ ಎಂದು ಪಾಂಡಾ ಹೇಳಿದ್ದಾರೆ. ಕಠಿಣ ಮತ್ತು ಪರಿಶ್ರಮದಾಯಕ ತರಬೇತಿಯ ಬಳಿಕ ಅವರನ್ನು ಯೋಧ, ತಾಂತ್ರಿಕ ಸಹಾಯಕ, ರೆಡಿಯೋ ಆಪರೇಟರ್ ಮತ್ತು ಡ್ರೈವರ್ ಗಳಾಗಿ ನೇಮಕ ಮಾಡಿಕೊಳ್ಳಲಾಗುವುದು.
ಅಗ್ನಿವೀರರು ಇತರ ಯುವಕರಿಗೆ ಮಾದರಿ: ಪ್ರಧಾನಿ
ಈ ಸಂದರ್ಭದಲ್ಲಿ ಮಾತಾಡಿದ ಪ್ರಧಾನಿ ಮೋದಿಯವರು ಅಗ್ನಿವೀರ್ ಸ್ಕೀಮ್ ನಲ್ಲಿ ಆಯ್ಕೆಯಾಗಿರುವ ಮೊದಲ ಬ್ಯಾಚ್ ಅಭ್ಯರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ದೇಶದ ಇತರ ಯುವಕರಿಗೆ ಮಾದರಿಯಾಗಿರುವುದಕ್ಕೆ ಅವರನ್ನು ಕೊಂಡಾಡಿದರು. ನಮ್ಮ ಸಶಸ್ತ್ರ ಪಡೆಗಳನ್ನು ಬಲಪಡಿಸುವಲ್ಲಿ ಮತ್ತು ಮುಂದಿನ ದಿನಗಳಲ್ಲಿ ಅದಕ್ಕೆ ಉಂಟಾಗಬಹುದಾದ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿರುವಂತೆ ಮಾಡುವಲ್ಲಿ ಈ ಪರಿವರ್ತನಾ ನೀತಿಯು ಬಹುದೊಡ್ಡ ಪಾತ್ರ ನಿರ್ವಹಿಸಲಿದೆ ಎಂದು ಪ್ರಧಾನಿಗಳು ಹೇಳಿದರು. ಯುವ ಅಗ್ನಿವೀರರು ಸಶಸ್ತ್ರ ಪಡೆಗಳನ್ನು ಹೆಚ್ಚು ತಾರುಣ್ಯಭರಿತ ಮಾಡುವುದರ ಜೊತೆಗೆ ಅವು ತಾಂತ್ರಿಕ ಪರಿಣಿತಿ ಹೊಂದಲು ನೆರವಾಗಲಿರುವ ವಿಶ್ವಾಸವನ್ನು ಪ್ರಧಾನಿಗಳು ವ್ಯಕ್ತಪಡಿಸಿದರು.
ಇದನ್ನೂ ಓದಿ: ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವರ್ಗಾವಣೆ, ಸರ್ಕಾರದಿಂದ ನಿರ್ದೇಶನ
ಅಗ್ನಿವೀರರ ಸಾಮರ್ಥ್ಯವನ್ನು ಪ್ರಶಂಸಿದ ಪ್ರಧಾನಿಗಳು, ರಾಷ್ಟ್ರದ ಧ್ವಜವನ್ನು ಯಾವಾಗಲೂ ಎತ್ತರದಲ್ಲಿ ಹಾರಾಡುವಂತೆ ಮಾಡುವ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಚೈತನ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಈ ಅವಕಾಶದ ಮೂಲಕ ಅವರು ಪಡೆಯುವ ಅನುಭವವು ಜೀವನಕ್ಕೆ ಸ್ಫೂರ್ತಿಯ ಸೆಲೆಯಾಗಲಿದೆ ಎಂದರು.
‘ಸಶಸ್ತ್ರ ಪಡೆಗಳನ್ನು ಆತ್ಮನಿರ್ಭರ್ ಮಾಡುವ ಪ್ರಯತ್ನಗಳು ನಡೆದಿವೆ’
ನವ ಭಾರತದ ಶಕ್ತಿ ನವೀಕೃತಗೊಂಡಿದೆ ಮತ್ತು ದೇಶದ ಸಶಸ್ತ್ರ ಪಡೆಗಳನ್ನು ಆಧುನೀಕರಣಗೊಳಿಸಿ ಮತ್ತು ಆತ್ಮನಿರ್ಭರ್ ಮಾಡಲು ಪ್ರಯತ್ನಗಳು ಜಾರಿಯಲ್ಲಿವೆ ಎಂದು ಪ್ರಧಾನಿ ಮೋದಿ ಹೇಳಿದರು. 21 ನೇ ಶತಮಾನದಲ್ಲಿ ಯುದ್ಧಗಳು ನಡೆಯುವ ವಿಧಾನ ಬದಲಾಗಿದೆ ಎಂದು ಪ್ರಧಾನಿ ಹೇಳಿದರು. ಸೈಬರ್ ಯುದ್ಧಗಳ ಬಗ್ಗೆ ಮಾತಾಡಿದ ಮೋದಿಯವರು ತಾಂತ್ರಿಕ ನೈಪುಣ್ಯತೆ ಹೊಂದಿರುವ ಯೋಧರು ನಮ್ಮ ಸಶಸ್ತ್ರ ಪಡೆಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ ಎಂದರು. ವಿಶೇಷವಾಗಿ ಈಗಿನ ಕಾಲದ ಯುವಕರು ಹೆಚ್ಚು ಸಮರ್ಥ ಮತ್ತು ಯೋಗ್ಯರಾಗಿರುವುದರಿಂದ ಮುಂಬರುವ ದಿನಗಳಲ್ಲಿ ಅಗ್ನಿವೀರರು ಭಾರತದ ಮಿಲಿಟರಿ ಪಡೆಗಳ ಮುಂದಾಳತ್ವ ವಹಿಸಲಿದ್ದಾರೆ ಅಂತ ಹೇಳಿದರು.
ಇದನ್ನೂ ಓದಿ: ಮೂತ್ರ ವಿಸರ್ಜನೆಗೂ ಮುನ್ನ ಅಥವಾ ನಂತರ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕರವೇ ಅಥವಾ ಉತ್ತಮವೇ?
ಈ ಯೋಜನೆ ಹೇಗೆ ಮಹಿಳೆಯರ ಸಬಲೀಕರಣದಲ್ಲಿ ಪಾತ್ರ ನಿರ್ವಹಿಸಲಿದೆ ಅನ್ನೋದನ್ನು ಪ್ರಧಾನಿಗಳು ವಿವರಿಸಿದರು. ನೌಕಾದಳದ ಹೆಮ್ಮೆ ಮತ್ತು ಪ್ರತಿಷ್ಠೆಯನ್ನು ಮಹಿಳಾ ಅಗ್ನಿವೀರರು ಹೆಚ್ಚಿಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಪ್ರಧಾನಿಗಳು, ಎಲ್ಲ ಮೂರು ಸಶಸ್ತ್ರ ಪಡೆಗಳಲ್ಲಿ ಅವರನ್ನು ನೋಡಲು ತಾವು ತವಕಿಸುತ್ತಿರುವುದಾಗಿ ಹೇಳಿದರು. ಸಿಯಾಚೆನ್ ಪ್ರದೇಶದಲ್ಲಿ ದೇಶವನ್ನು ಕಾಯುತ್ತಿರುವ ಮಹಿಳಾ ಯೋಧರು ಮತ್ತು ಆಧುನಿಕ ಫೈಟರ್ ಜೆಟ್ ಗಳನ್ನು ಹಾರಿಸುವ ಮಹಿಳಾ ಪೈಲಟ್ ಗಳ ಶೌರ್ಯ ಮತ್ತು ಸಾಹಸಗಳನ್ನು ಈ ಸಂದರ್ಭದಲ್ಲಿ ಅವರು ಉಲ್ಲೇಖಿಸಿದರು.
ನಾನಾ ಸಂಸ್ಕೃತಿ, ಭಾಷೆಗಳ ಪರಿಚಯ
ಅಗ್ನಿವೀರರನ್ನು ಬೇರೆ ಬೇರೆ ಪ್ರಾಂತ್ಯ ಮತ್ತು ಪ್ರದೇಶಗಳಲ್ಲಿ ನಿಯುಕ್ತಿಗೊಳ್ಳುವುದರಿಂದ ಅವರಿಗೆ ದೇಶದ ನಾನಾ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ ವಿವಿಧ ಭಾಷೆಗಳನ್ನು ಕಲಿಯಲು ನೆರವಾಗುವುದು ಎಂದು ಪ್ರಧಾನಿ ಹೇಳಿದರು. ಸಾಂಘಿಕ ಪರಿಶ್ರಮ ಮತ್ತು ನಾಯಕತ್ವದ ಕಲೆಯನ್ನು ರೂಢಿಸಿಕೊಳ್ಳುವುದು ಅಗ್ನಿವೀರರ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತವೆ. ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಹೊಸ ಸಂಗತಿಗಳನ್ನು ತಿಳಿದುಕೊಳ್ಳುವ ಬಗ್ಗೆ ಅಭಿರುಚಿ ಮತ್ತು ಕುತೂಹಲವನ್ನು ಕಾಯ್ದ್ದುಕೊಳ್ಳುವ ಜೊತೆಗೆ ತಮ್ಮಲ್ಲಿರುವ ಕೌಶಲ್ಯಗಳನ್ನು ಉತ್ತಮಡಿಸಿಕೊಳ್ಳಲು ಎಡೆಬಿಡದೆ ಶ್ರಮಿಸುತ್ತಿರಬೇಕೆಂದು ಪ್ರಧಾನಿ ಸಲಗೆ ನೀಡಿದರು.
ಕೊನೆಯಲ್ಲಿ ಮತ್ತೊಮ್ಮೆ ಯುವಕರ ಮತ್ತು ಅಗ್ನಿವೀರರ ಸಾಮರ್ಥ್ಯವನ್ನು ಕೊಂಡಾಡಿದ ಪ್ರಧಾನ ಮಂತ್ರಿಗಳು, 21 ನೇ ಶತಮಾನದಲ್ಲಿ ಅವರೇ ರಾಷ್ಟ್ರಕ್ಕೆ ನಾಯಕತ್ವ ಒದಗಿಸಲಿದ್ದಾರೆ ಎಂದರು.
ಮತ್ತಷ್ಟು ದೇಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Mon, 16 January 23