ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ತೃಣಮೂಲ ಕಾಂಗ್ರೆಸ್‌ನ ಹಿರಯ ನಾಯಕ ಡೆರೆಕ್ ಒಬ್ರೈನ್ (Derek O’Brien )ಫೇಸ್ಬುಕ್ನಲ್ಲಿ ಮೀಮ್ ಶೇರ್ ಮಾಡಿದ್ದು ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು “ಬಾಂಡ್ ಪೋಸ್” ನಲ್ಲಿ ಚಿತ್ರಿಸಿದ್ದಾರೆ. “They call me 007” ಎಂದು ಶೀರ್ಷಿಕೆಯಲ್ಲಿ ಶೇರ್ ಆಗಿರುವ ಮೀಮ್ ನಲ್ಲಿ “0 ಅಭಿವೃದ್ಧಿ, 0 ಆರ್ಥಿಕ ಬೆಳವಣಿಗೆ, 7 ವರ್ಷಗಳ ಆರ್ಥಿಕ ದುರಾಡಳಿತ” ಎಂದು ಬರೆಯಲಾಗಿದೆ. ಚಲನಚಿತ್ರಗಳಲ್ಲಿ ಜೇಮ್ಸ್ ಬಾಂಡ್ “00” ಸಂಖ್ಯೆ ಹೊಂದಿದ್ದು “ಕೊಲ್ಲಲು ಪರವಾನಗಿ” ಇರುವ ಏಜೆಂಟ್ ಆಗಿದ್ದಾರೆ. ಆದಾಗ್ಯೂ ತೃಣಮೂಲದ ಕಾಂಗ್ರೆಸ್ ಆ ಸಂಖ್ಯೆಯನ್ನು “ಏಳು ವರ್ಷಗಳಲ್ಲಿ ಶೂನ್ಯ ಅಭಿವೃದ್ಧಿ ಮತ್ತು ಬೆಳವಣಿಗೆ” ಎಂದು ಹೇಳಿ ಪ್ರಧಾನಿ ಮೋದಿಯವರನ್ನು ಟೀಕಿಸಿದೆ.
ಈ ವರ್ಷದ ಆರಂಭದಲ್ಲಿ ಪ್ರಧಾನಿ ಅಧಿಕಾರದಲ್ಲಿ ಏಳು ವರ್ಷಗಳನ್ನು ಪೂರೈಸಿದರು.
ತೃಣಮೂಲವು ಯಾವುದೇ ಉದಾಹರಣೆಗಳನ್ನು ನೀಡದಿದ್ದರೂ, ನೋಟುಗಳ ನಿಷೇಧ ಮತ್ತು ಸರಕು ಮತ್ತು ಸೇವಾ ತೆರಿಗೆಯನ್ನು ಈ ಹಿಂದೆ ತೀವ್ರವಾಗಿ ಟೀಕಿಸಿತ್ತು. ಪ್ರಸ್ತುತ ದೇಶವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಎದುರಿಸುತ್ತಿದೆ. ಬಿಜೆಪಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ಓದಿ: ಪಾಕಿಸ್ತಾನದಿಂದ ನಮ್ಮ ಸೈನಿಕರು ಸತ್ತಿದ್ದಾರೆ, ನೀವು ಟಿ20 ಆಡುತ್ತೀರಾ?; ಪ್ರಧಾನಿ ಮೋದಿ ವಿರುದ್ಧ ಓವೈಸಿ ವಾಗ್ದಾಳಿ