ಬಂಗಾಳದಲ್ಲಿ ಭಾರೀ ಮಳೆ; ಡಾರ್ಜಿಲಿಂಗ್-ಕಲಿಂಪಾಂಗ್‌ನಲ್ಲಿ ಭೂಕುಸಿತ ಎಚ್ಚರಿಕೆ
"ಪಶ್ಚಿಮ ಬಂಗಾಳ ಮತ್ತು ಪಕ್ಕದ ಉತ್ತರ ಒಡಿಶಾದಲ್ಲಿ ರೂಪುಗೊಂಡ ಕಡಿಮೆ ಒತ್ತಡದ ಪ್ರದೇಶದಿಂದ ಮಳೆಯು ಉಂಟಾಗುತ್ತಿದೆ. ಪ್ರಬಲ ಆಗ್ನೇಯ ಮಾರುತಗಳು ಬೀಸುತ್ತಿವೆ. ಪಶ್ಚಿಮ ಬಂಗಾಳದಾದ್ಯಂತ ಬುಧವಾರದವರೆಗೆ ಮಳೆ ಹೆಚ್ಚಾಗುವ ಮುನ್ಸೂಚನೆ ಇದೆ ಎಂದು ಕೊಲ್ಕತ್ತಾದ ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಲ್ಕತ್ತಾ: ದಕ್ಷಿಣ ಬಂಗಾಳದಲ್ಲಿ ಡಾರ್ಜಿಲಿಂಗ್‌ನ (Darjeeling) ಗುಡ್ಡಗಾಡು ಪ್ರದೇಶಗಳು ಮತ್ತು ಉತ್ತರ ಬಂಗಾಳದ ಕಲಿಂಪಾಂಗ್ ( Kalimpong) ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಿಂದ ಭಾರೀ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರದವರೆಗೆ ಉತ್ತರ ಬಂಗಾಳ ಪ್ರದೇಶಗಳಿಗೆ ಆರೆಂಜ್ ಎಚ್ಚರಿಕೆಯನ್ನು ನೀಡಿದ್ದು, ಸಂಭವನೀಯ ಭೂಕುಸಿತವನ್ನು ಗಮನಿಸಲು ಅಧಿಕಾರಿಗಳಿಗೆ ಸಲಹೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ಡಾರ್ಜಿಲಿಂಗ್ ಮತ್ತು ಕಲಿಂಪಾಂಗ್‌ನಲ್ಲಿ ಕ್ರಮವಾಗಿ 166 ಮಿಮೀ ಮತ್ತು 136 ಮಿಮೀ ಮಳೆಯಾಗಿದೆ. ಇದನ್ನು ಅತ್ಯಂತ ಭಾರೀ ಮಳೆ ಎಂದು ವರ್ಗೀಕರಿಸಲಾಗಿದೆ. “ಪಶ್ಚಿಮ ಬಂಗಾಳ ಮತ್ತು ಪಕ್ಕದ ಉತ್ತರ ಒಡಿಶಾದಲ್ಲಿ ರೂಪುಗೊಂಡ ಕಡಿಮೆ ಒತ್ತಡದ ಪ್ರದೇಶದಿಂದ ಮಳೆಯು ಉಂಟಾಗುತ್ತಿದೆ. ಪ್ರಬಲ ಆಗ್ನೇಯ ಮಾರುತಗಳು ಬೀಸುತ್ತಿವೆ. ಪಶ್ಚಿಮ ಬಂಗಾಳದಾದ್ಯಂತ ಬುಧವಾರದವರೆಗೆ ಮಳೆ ಹೆಚ್ಚಾಗುವ ಮುನ್ಸೂಚನೆ ಇದೆ ಎಂದು ಕೊಲ್ಕತ್ತಾದ ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಲ್ಕತ್ತಾ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೂಡ ನಿನ್ನೆಯಿಂದ ನಿರಂತರ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೊಲ್ಕತ್ತಾದಲ್ಲಿ 37 ಮಿಮೀ ಮಳೆಯಾಗಿದ್ದು ಕರಾವಳಿ ಜಿಲ್ಲೆಗಳಲ್ಲಿರುವ ಭಾರೀ ಮಳೆಯಾಗಿದೆ.
ದಕ್ಷಿಣ 24 ಪರಗಣಗಳಲ್ಲಿ ಕ್ಯಾನಿಂಗ್‌ನಲ್ಲಿ 102 ಮಿಮೀ ಮಳೆಯಾಗಿದೆ ಮತ್ತು ಪೂರ್ವ ಮಿಡ್ನಾಪುರದ ಹಲ್ದಿಯಾದಲ್ಲಿ ನಿನ್ನೆಯಿಂದ ಇವತ್ತಿನವರೆಹೆ 91 ಮಿಮೀ ಮಳೆಯಾಗಿದೆ. ರಾಜ್ಯದ ಪಶ್ಚಿಮ ಭಾಗಗಳಾದ ಪುರುಲಿಯಾದಲ್ಲಿ 82 ಮಿಮೀ ಮಳೆಯಾಗಿದೆ.
ಪಶ್ಚಿಮ ಬಂಗಾಳವು ಸೆಪ್ಟೆಂಬರ್ ಅಂತ್ಯದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದಿಂದ ತತ್ತರಿಸಿತು. ಅದೇ ವೇಳೆ ಜಾರ್ಖಂಡ್‌ನ ಅಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಯಿತು. ಜುಲೈ ಅಂತ್ಯದಲ್ಲಿ, ರಾಜ್ಯವು ಮತ್ತೊಂದು ಪ್ರವಾಹಕ್ಕೆ ತುತ್ತಾಯಿತು.
ಮಂಗಳವಾರದವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದ್ದು, ಚಂಡಮಾರುತದಿಂದಾಗಿ ಸಮುದ್ರ ಕ್ಷೋಭೆಗೊಳಗಾಗಬಹುದು. ಗುಡುಗು ಸಹಿತ ಮಿಂಚಿನೊಂದಿಗೆ ಗಂಟೆಗೆ 50 ಕಿಮೀ ವೇಗದಲ್ಲಿ ಬೀಸುವ ಗಾಳಿಯು ದಕ್ಷಿಣ ಬಂಗಾಳದ ಕರಾವಳಿಜಿಲ್ಲೆಗಳನ್ನು ಅಪ್ಪಳಿಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಈ ಮಳೆಗಾಲದಲ್ಲಿ ನಾವು ಈಗಾಗಲೇ ಎರಡು ಪ್ರವಾಹಗಳನ್ನು ಎದುರಿಸಿದ್ದೇವೆ. ಕೆಲವು ಪ್ರದೇಶಗಳಲ್ಲಿ ನೀರಿನ ಮಟ್ಟ ಇನ್ನೂ ಕಡಿಮೆಯಾಗಬೇಕಿದೆ. ಈಗ ನಾವು ಇನ್ನೊಂದು ಮಳೆಗಾಲವನ್ನು ಎದುರಿಸುತ್ತಿದ್ದೇವೆ. ಇದು ಬೆಳೆಗಳಿಗೆ ಹಾನಿ ಉಂಟುಮಾಡಬಹುದು. ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಗತ್ಯವಿದ್ದರೆ, ಜನರನ್ನು ಸ್ಥಳಾಂತರಿಸಲಾಗುತ್ತದೆ, ”ಎಂದು ರಾಜ್ಯದ ವಿಪತ್ತು ನಿರ್ವಹಣಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: Uttarakhand Rain: ಉತ್ತರಾಖಂಡದಲ್ಲಿ ಮಳೆಯಿಂದ 34 ಜನ ಸಾವು; ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ