9ನೇ ದಿನಕ್ಕೆ ಕಾಲಿಟ್ಟ ಉಗ್ರ ನಿಗ್ರಹ ಕಾರ್ಯಾಚರಣೆ: ಜಮ್ಮು ಕಾಶ್ಮೀರದ ನಿವಾಸಿಗಳು ಮನೆಯಿಂದ ಹೊರಬರಬೇಡಿ ಎಂದ ಭದ್ರತಾ ಪಡೆ

9ನೇ ದಿನಕ್ಕೆ ಕಾಲಿಟ್ಟ ಉಗ್ರ ನಿಗ್ರಹ ಕಾರ್ಯಾಚರಣೆ: ಜಮ್ಮು ಕಾಶ್ಮೀರದ ನಿವಾಸಿಗಳು ಮನೆಯಿಂದ ಹೊರಬರಬೇಡಿ ಎಂದ ಭದ್ರತಾ ಪಡೆ
ಪ್ರಾತಿನಿಧಿಕ ಚಿತ್ರ

ಪೂಂಚ್ ಮತ್ತು ರಜೌರಿ ಪ್ರದೇಶದಲ್ಲಿ ಎನ್​ಕೌಂಟರ್ ನಡೆಯುತ್ತಿರುವ ವೇಳೆ ಕೆಲವು ಜನರು ಜಾನುವಾರುಗಳ ಜೊತೆಗೆ ಕಾಡಿನತ್ತ ಸಾಗುತ್ತಿರುವುದನ್ನು ನೋಡಿದ ನಂತರ ಈ ಘೋಷಣೆಗಳನ್ನು ಮಾಡಲಾಗಿದೆ. ಜನರು ಯಾವುದೇ ಸಮಯದಲ್ಲಿ ಪೊಲೀಸರನ್ನು ಸಂಪರ್ಕಿಸಬಹುದು.

TV9kannada Web Team

| Edited By: Rashmi Kallakatta

Oct 19, 2021 | 10:47 PM

ಜಮ್ಮು: ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಜೌರಿ ನಿವಾಸಿಗಳಿಗೆ (Jammu and Kashmir) ಮನೆಯಲ್ಲಿಯೇ ಇರುವಂತೆ ಸೂಚಿಸಿವೆ. ಈ ಜಿಲ್ಲೆಗಳಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಮಂಗಳವಾರ 9ನೇ ದಿನಕ್ಕೆ ಕಾಲಿಟ್ಟಿದೆ. ಪೊಲೀಸರು ಮಸೀದಿಗಳಲ್ಲಿ ಮೈಕ್ ಮೂಲಕ ಜನರಿಗೆ ಹಲವಾರು ಮನವಿಗಳನ್ನು ಮಾಡಿದ್ದು, ಜನರು ಕಾಡು ಪ್ರದೇಶಗಳತ್ತ ಹೋಗಬಾರದು ಎಂದಿದ್ದಾರೆ. ಅದೇ ವೇಳೆ ಜಾನುವಾರುಗಳನ್ನು ವಾಸಸ್ಥಾನದ ಪರಿಧಿಯಲ್ಲಿಯೇ ಇರಿಸುವಂತೆ ಹೇಳಿದ್ದಾರೆ. ಈ ಪ್ರದೇಶದಲ್ಲಿ ಎನ್​ಕೌಂಟರ್ ನಡೆಯುತ್ತಿರುವ ವೇಳೆ ಕೆಲವು ಜನರು ಜಾನುವಾರುಗಳ ಜೊತೆಗೆ ಕಾಡಿನತ್ತ ಸಾಗುತ್ತಿರುವುದನ್ನು ನೋಡಿದ ನಂತರ ಈ ಘೋಷಣೆಗಳನ್ನು ಮಾಡಲಾಗಿದೆ. ಜನರು ಯಾವುದೇ ಸಮಯದಲ್ಲಿ ಪೊಲೀಸರನ್ನು ಸಂಪರ್ಕಿಸಬಹುದು ಮತ್ತು ನಾವು 24×7 ಸಾರ್ವಜನಿಕರ ಸೇವೆಯಲ್ಲಿದ್ದೇವೆ .ಅವರಿಗೆ ತುರ್ತಾಗಿ ಅಗತ್ಯವಿರುವ ವಸ್ತುಗಳನ್ನು ಮನೆಗೆ ತಲುಪಿಸುವುದಾಗಿ  ನಾವು ಖಚಿತಪಡಿಸುತ್ತೇವೆ ಭದ್ರತಾ ಪಡೆ  ಹೇಳಿರುವುದಾಗಿ ಎಂದು ಐಎಎನ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಇಲ್ಲಿಯವರೆಗೆ 6 ಉಗ್ರರ ಹತ್ಯೆ ಮೂಲಗಳನ್ನು ಉಲ್ಲೇಖಿಸಿದ ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ ಎಂಟು ದಿನಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಇದುವರೆಗೆ ಆರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಐಎಎನ್ಎಸ್ ವರದಿಯ ಪ್ರಕಾರ ಈ ಕಾರ್ಯಾಚರಣೆಯಲ್ಲಿ ಇದುವರೆಗೆ ಎರಡು ಜೆಸಿಒಗಳು ಸೇರಿದಂತೆ ಒಂಬತ್ತು ಯೋಧರು ಹುತಾತ್ಮರಾಗಿದ್ದಾರೆ.

“ಜಂಟಿ ಭದ್ರತಾ ಜಾಲವು ಭಯೋತ್ಪಾದಕರ ವಿವಿಧ ಗುಂಪುಗಳನ್ನು ಪತ್ತೆಹಚ್ಚುತ್ತಿದೆ. ಆದರೆ ಪ್ರದೇಶದ ಭೌಗೋಳಿಕತೆಗೆ ಅನುಗುಣವಾಗಿ ಕೆಲವೊಮ್ಮೆ ಕಾರ್ಯಾಚರಣೆಗಳು ಸಮಯ ತೆಗೆದುಕೊಳ್ಳುತ್ತದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯ ಆರಂಭದ ಸಮಯದಲ್ಲಿ ಭಯೋತ್ಪಾದಕರೊಂದಿಗಿನ ಸಂಪರ್ಕವನ್ನು ಮೂರು ಸಂದರ್ಭಗಳಲ್ಲಿ ಸ್ಥಾಪಿಸಲಾಯಿತು ಎಂದು ರಜೌರಿ-ಪೂಂಚ್ ವ್ಯಾಪ್ತಿಯ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್, ವಿವೇಕ್ ಗುಪ್ತಾ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಿಂದಾಗಿ ಜಮ್ಮು-ರಜೌರಿ ಹೆದ್ದಾರಿಯಲ್ಲಿ ಮೆಂಧರ್ ಮತ್ತು ತನಮಂಡಿ ನಡುವಿನ ಸಂಚಾರವನ್ನು  ಸ್ಥಗಿತಗೊಳಿಸಲಾಗಿದೆ. ಏಜೆನ್ಸಿ ವರದಿಗಳ ಪ್ರಕಾರ, ಸೇನೆಯು ಪ್ಯಾರಾ ಕಮಾಂಡೋಗಳು ಮತ್ತು ಚಾಪರ್‌ಗಳನ್ನು ನಿಯೋಜಿಸಿದ್ದು, ಆ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ 48 ಗಂಟೆಗಳ ನಂತರ ಯೋಧರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 9ಕ್ಕೆ ಏರಿಕೆ

Follow us on

Related Stories

Most Read Stories

Click on your DTH Provider to Add TV9 Kannada