ಜಮ್ಮು ಮತ್ತು ಕಾಶ್ಮೀರದಲ್ಲಿ 48 ಗಂಟೆಗಳ ನಂತರ ಯೋಧರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 9ಕ್ಕೆ ಏರಿಕೆ
Jammu and Kashmir ಪೂಂಚ್ ಮೆಂಧರ್ ನ ನಾರ್ ಖಾಸ್ ಅರಣ್ಯದ ದಟ್ಟ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸುಬೇದಾರ್ ಅಜಯ್ ಸಿಂಗ್ ಮತ್ತು ನಾಯ್ಕ್ ಹರೇಂದ್ರ ಸಿಂಗ್ ಹತ್ಯೆಗೀಡಾಗಿದ್ದಾರೆ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ನಲ್ಲಿ ಗುರುವಾರ ಸಂಜೆ ಉಗ್ರರ ವಿರುದ್ಧ ನಡೆದ ಭೀಕರ ಗುಂಡಿನ ಕಾಳಗದಲ್ಲಿ ನಾಪತ್ತೆಯಾಗಿದ್ದ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಸೇರಿದಂತೆ ಇಬ್ಬರು ಸೈನಿಕರ ಮೃತದೇಹಗಳನ್ನು ಸೇನಾಪಡೆ ಪತ್ತೆ ಹಚ್ಚಿದೆ. ಸೇನೆಯು ಭಯೋತ್ಪಾದಕರು ಅಡಗಿರುವ ಶಂಕೆ ಇರುವ ದಟ್ಟಅರಣ್ಯಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದ 48 ಗಂಟೆಗಳ ಯೋಧರ ಮೃತದೇಹವನ್ನು ಹೊರತೆಗೆದಿದೆ. ಈ ಮೃತದೇಹಗಳನ್ನು ಹೊರ ತೆಗೆಯುವುದರೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಸೇನಾಪಡೆ ಅನುಭವಿಸಿದ ಅತೀ ಹೆಚ್ಚು ಸಾವು-ನೋವು ಇದಾಗಿದೆ.
ಮೂಲಗಳ ಪ್ರಕಾರ, ಸೇನೆಯು ಗುರುವಾರ ಭಯೋತ್ಪಾದಕರಿಂದ ಭಾರೀ ಗುಂಡಿನ ದಾಳಿಗೆ ಒಳಗಾದ ನಂತರ ಜೆಸಿಒ ಮತ್ತು ಯೋಧ ನಾಪತ್ತೆಯಾಗಿದ್ದರು. “ಪೂಂಚ್ ಮೆಂಧರ್ ನ ನಾರ್ ಖಾಸ್ ಅರಣ್ಯದ ದಟ್ಟ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸುಬೇದಾರ್ ಅಜಯ್ ಸಿಂಗ್ ಮತ್ತು ನಾಯ್ಕ್ ಹರೇಂದ್ರ ಸಿಂಗ್ ಹತ್ಯೆಗೀಡಾಗಿದ್ದಾರೆ” ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
GOC, White Knight Corps and all ranks salute the braveheart Subedar Ajay Singh and Naik Harendra Singh, who made the supreme sacrifice in the line of duty on 14 Oct 21 at Poonch during a search operation and offer deep condolences to the family: 16 Corps, Indian Army pic.twitter.com/ZhfXkOX9MK
— ANI (@ANI) October 16, 2021
ಇದೇ ಪ್ರದೇಶದಲ್ಲಿ ಐದು ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ ನಂತರ ನಡೆದ ಎನ್ಕೌಂಟರ್ ವೇಳೆ ರೈಫಲ್‌ಮ್ಯಾನ್ ಯೋಗಂಬರ್ ಸಿಂಗ್ ಮತ್ತು ರೈಫಲ್‌ಮ್ಯಾನ್ ವಿಕ್ರಮ್ ಸಿಂಗ್ ನೇಗಿ ಎಂಬ ಇಬ್ಬರು ಯೋಧರು ಹತ್ಯೆಗೀಡಾಗಿದ್ದರು.
ಗುರುವಾರ ಸಂಜೆ ಸೇನೆಯು ಜೆಸಿಒ ಜೊತೆ ಸಂಪರ್ಕ ಕಳೆದುಕೊಂಡಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಮೆಂಧರ್‌ನ ನಾರ್ ಖಾಸ್ ಅರಣ್ಯ ಪ್ರದೇಶದಲ್ಲಿ ಒಂದು ಪ್ರಮುಖ ದಾಳಿ ಆರಂಭವಾಯಿತು. ಅರಣ್ಯದಲ್ಲಿ ಆಳವಾಗಿ ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಹೊರಹಾಕಲು ಸೇನೆ ಯತ್ನಿಸುತ್ತಿದ್ದಂತೆ ಆ ಪ್ರದೇಶದಲ್ಲಿ ಭಾರೀ ಗುಂಡಿನ ದಾಳಿ ಮತ್ತು ಸ್ಫೋಟಗಳು ಕೇಳಿಬಂದವು.
ಡೇರಾ ಕೀ ಗಲಿಯಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಸೇನೆಯು ಸೋಮವಾರ ಕಾರ್ಯಾಚರಣೆಯನ್ನು ಆರಂಭಿಸಿತು. ಆರಂಭಿಕ ಶೂಟೌಟ್‌ನಲ್ಲಿ, ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಸೇರಿದಂತೆ ಐವರು ಸೈನಿಕರು ಸಾವನ್ನಪ್ಪಿದ್ದಾರೆ. ಸುರಕ್ಷಾ ಕ್ರಮವಾಗಿ ಪೂಂಚ್-ಜಮ್ಮು ಹೆದ್ದಾರಿಯನ್ನು ಗುರುವಾರ ಸಂಜೆಯಿಂದ ಮುಚ್ಚಲಾಗಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಇಬ್ಬರು ನಾಗರಿಕರ ಹತ್ಯೆ ಮಾಡಿದ ಉಗ್ರರು; ಮೆಹಬೂಬಾ ಮುಫ್ತಿ ಆಕ್ರೋಶ