AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನ್​ ಪರಿಸ್ಥಿತಿ ಚರ್ಚಿಸಲು ಎನ್​ಎಸ್​ಎಗಳ ಸಭೆ ಕರೆದ ಭಾರತ; ದೆಹಲಿಗೆ ಭೇಟಿ ನೀಡಲಿರುವ ಪಾಕಿಸ್ತಾನದ ಭದ್ರತಾ ಸಲಹೆಗಾರ

2016ರಲ್ಲಿ ಪಾಕಿಸ್ತಾನದಲ್ಲಿ ನವಾಜ್​ ಶರೀಫ್​ ಪ್ರಧಾನಮಂತ್ರಿಯಾಗಿದ್ದಾಗ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರರಾಗಿದ್ದ ಸರ್ತಾಜ್​ ಆಝೀಜ್​ ಭಾರತಕ್ಕೆ ಆಗಮಿಸಿದ್ದರು.

ಅಫ್ಘಾನ್​ ಪರಿಸ್ಥಿತಿ ಚರ್ಚಿಸಲು ಎನ್​ಎಸ್​ಎಗಳ ಸಭೆ ಕರೆದ ಭಾರತ; ದೆಹಲಿಗೆ ಭೇಟಿ ನೀಡಲಿರುವ ಪಾಕಿಸ್ತಾನದ ಭದ್ರತಾ ಸಲಹೆಗಾರ
ಮೊಯೀದ್​ ಯೂಸುಫ್
Follow us
TV9 Web
| Updated By: Lakshmi Hegde

Updated on: Oct 17, 2021 | 12:46 PM

ಅಫ್ಘಾನಿಸ್ತಾನದಲ್ಲಿ ಸದ್ಯ ಇರುವ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಸಲುವಾಗಿ ಭಾರತ ರಾಷ್ಟ್ರೀಯ ಭದ್ರತಾ ಸಲಹೆಗಾರ(National security advisor )ರ ಮಟ್ಟದ ಸಭೆಯನ್ನು ನವೆಂಬರ್​​ನಲ್ಲಿ ನಡೆಸಲಿದೆ. ಈ ಸಭೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಅಧ್ಯಕ್ಷತೆ ವಹಿಸುವ ಸಾಧ್ಯತೆ ಇದ್ದು, ರಷ್ಯಾ, ಪಾಕಿಸ್ತಾನ, ಚೀನಾ, ಇರಾನ್​, ಉಜ್ಬೇಕಿಸ್ತಾನ್​, ತಜಿಕಿಸ್ತಾನ್​​ಗಳಿಗೆ ಆಹ್ವಾನ ನೀಡಲಿದೆ. ಈ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವುದಿಲ್ಲ. ಬದಲಿಗೆ ನಾಯಕರು ಭೌತಿಕವಾಗಿಯೇ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.   ಅಫ್ಘಾನಿಸ್ತಾನದಲ್ಲಿ ಸದ್ಯ ತಾಲಿಬಾನ್​ ಆಡಳಿತ ನಡೆಯುತ್ತಿದ್ದು, ಇನ್ನೂ ಆದೇಶದಲ್ಲಿ ಸ್ಥಿರತೆ ಮೂಡಿಲ್ಲ. ಪದೇಪದೆ ಅಫ್ಘಾನ್​​ನೊಳಗೇ ದಾಳಿ ನಡೆಯುತ್ತಿದೆ. ಮಸೀದಿಗಳ ಮೇಲೆ ಬಾಂಬ್​ ಹಾಕಲಾಗುತ್ತಿದೆ. ನೂರಾರು ಜನರು ಸಾಯುತ್ತಿದ್ದಾರೆ. ಇದೇ ಹೊತ್ತಲ್ಲಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಭಾರತ ಈಗ ಕೆಲವು ರಾಷ್ಟ್ರಗಳಿಗೆ ಆಹ್ವಾನ ನೀಡಲಿದೆ.

ಈ ಮಧ್ಯೆ ಪಾಕಿಸ್ತಾನಕ್ಕೆ ಕಳೆದವಾರವೇ ಭಾರತದಿಂದ ಆಹ್ವಾನ ತಲುಪಿದೆ ಎಂದು ಮೂಲಗಳು ದೃಢಪಡಿಸಿವೆ. ಅಷ್ಟೇ ಅಲ್ಲ ಅಫ್ಘಾನ್​ ಪರಿಸ್ಥಿತಿ, ಅಲ್ಲಿನ ಬೆಳವಣಿಗೆ ಬಗ್ಗೆ ಚರ್ಚಿಸಲು ಭಾರತ ಕರೆದಿರುವ ಎನ್​ಎಸ್​ಎ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್​ ಯೂಸುಫ್​ ಇಲ್ಲಿಗೆ ಆಗಮಿಸಲಿದ್ದಾರೆ ಎಂದೂ ಹೇಳಲಾಗಿದೆ. ಹಾಗೊಮ್ಮೆ ಯೂಸುಫ್​ ಭಾರತಕ್ಕೆ ಬಂದರೆ ಅದು ಅವರ ಮೊದಲ ಭಾರತ ಭೇಟಿಯಾಗಲಿದೆ.  ಹಾಗೇ ಬರೋಬ್ಬರಿ 5ವರ್ಷಗಳ ನಂತರ ಪಾಕಿಸ್ತಾನದ ಉನ್ನತ ಅಧಿಕಾರಿಯೊಬ್ಬರು ಭಾರತಕ್ಕೆ ಬಂದಂತಾಗುತ್ತದೆ.  ಅಂದಹಾಗೆ ಈ ಸಭೆಗೆ ಭಾರತ ತಾಲಿಬಾನಿಗಳಿಗೆ ಆಹ್ವಾನ ನೀಡುವುದಿಲ್ಲ ಎಂದು ಹೇಳಲಾಗಿದೆ.

2016ರಲ್ಲಿ ಪಾಕಿಸ್ತಾನದಲ್ಲಿ ನವಾಜ್​ ಶರೀಫ್​ ಪ್ರಧಾನಮಂತ್ರಿಯಾಗಿದ್ದಾಗ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರರಾಗಿದ್ದ ಸರ್ತಾಜ್​ ಆಝೀಜ್​ ಭಾರತಕ್ಕೆ ಆಗಮಿಸಿದ್ದರು. ಅಮೃತ್​ಸರ್​​ನಲ್ಲಿ ನಡೆದ ಏಷ್ಯಾ ಮಟ್ಟದ ಸಮ್ಮೇಳನವೊಂದರಲ್ಲಿ ಅವರು ಪಾಲ್ಗೊಂಡಿದ್ದರು.  ಅದಾದ ಮೇಲೆ ಪಾಕ್​​ನಿಂದ ಉನ್ನತಮಟ್ಟದ ಅಧಿಕಾರಿಗಳಾಗಲಿ, ಸಚಿವರಾಗಲಿ ಯಾರೂ ಭಾರತಕ್ಕೆ ಬಂದಿರಲಿಲ್ಲ. ಇದೀಗ ಎನ್​ಎಸ್​ಎ ಯೂಸುಫ್​ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿದ್ದರೂ, ಅದು ದೃಢಪಡಬೇಕಿದೆ.

ಇದನ್ನೂ ಓದಿ: ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸಲು ಈ ಯೋಗ ಭಂಗಿಗಳು ಸಹಾಯಕ

ಜಮ್ಮು ಮತ್ತು ಕಾಶ್ಮೀರದಲ್ಲಿ 48 ಗಂಟೆಗಳ ನಂತರ ಯೋಧರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ