ಜಮ್ಮು-ಕಾಶ್ಮೀರದಲ್ಲಿ ಮತ್ತೆ ಇಬ್ಬರು ನಾಗರಿಕರ ಹತ್ಯೆ ಮಾಡಿದ ಉಗ್ರರು; ಮೆಹಬೂಬಾ ಮುಫ್ತಿ ಆಕ್ರೋಶ
ಉಗ್ರನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್ನನ್ನು ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿತ್ತು. ಆದರೆ ಕರೆದುಕೊಂಡುಬರುವಷ್ಟರಲ್ಲೇ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.
ದೆಹಲಿ: ಜಮ್ಮು-ಕಾಶ್ಮೀರ (Jammu-Kashmir)ದಲ್ಲಿ ಇಂದು ಮತ್ತೆ ಇಬ್ಬರು ನಾಗರಿಕರ ಹತ್ಯೆಯಾಗಿದೆ. ಅದರಲ್ಲಿ ಒಬ್ಬ ಬಿಹಾರ ಮೂಲಕ ವ್ಯಾಪಾರಿಯಾಗಿದ್ದಾರೆ ಇನ್ನೊಬ್ಬರು ಉತ್ತರಪ್ರದೇಶದ ಕಾರ್ಮಿಕ. ಮೊದಲ ಘಟನೆ ನಡೆದದ್ದು ಶ್ರೀನಗರದ ಈದಗಡ್ ಪ್ರದೇಶದಲ್ಲಿ ಇಂದು ಸಂಜೆ 6.40ರ ಹೊತ್ತಿಗೆ. ಇಲ್ಲಿ ಶಂಕಿತ ಉಗ್ರನೊಬ್ಬ 36ವರ್ಷದ, ಬಿಹಾರ ಮೂಲದ ಅರವಿಂದ್ ಕುಮಾರ್ ಎಂಬುವರ ಮೇಲೆ ದಾಳಿ ನಡೆಸಿದ್ದಾನೆ. ಇದೇ ತಿಂಗಳ ಪ್ರಾರಂಭದಲ್ಲಿ ಈ ಪ್ರದೇಶದಲ್ಲಿ ವಿರೇಂದ್ರ ಪಾಸ್ವಾನ್ ಎಂಬ ಬೀದಿ ವ್ಯಾಪಾರಿಯನ್ನು ಉಗ್ರರು ಕೊಂದಿದ್ದರು.
ಉಗ್ರನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್ನನ್ನು ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿತ್ತು. ಆದರೆ ಕರೆದುಕೊಂಡುಬರುವಷ್ಟರಲ್ಲೇ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಈ ಅರವಿಂದ್ ಕುಮಾರ್ ಮೂಲತಃ ಬಿಹಾರದ ಬಂಕಾದವರಾಗಿದ್ದು, ಶ್ರೀನಗರದಲ್ಲಿ ಬೀದಿಬದಿಯ ವ್ಯಾಪಾರಿಯಾಗಿದ್ದರು. ಅಂದಹಾಗೆ ಈ ಹಿಂದೆ ಹತ್ಯೆಯಾಗಿದ್ದ ವೀರೇಂದ್ರ ಪಾಸ್ವಾನ್ ಕೂಡ ಬಿಹಾರದವರೇ ಆಗಿದ್ದಾರೆ. ಈಗ ಅರವಿಂದ್ ಕುಮಾರ್ ಅವರನ್ನು ಹತ್ಯೆ ಮಾಡುವ ಮೊದಲು ಆ ಉಗ್ರ ಆತನ ಐಡಿ ಕಾರ್ಡ್ ನೋಡಿದ್ದಾನೆ. ನಂತರ ತಲೆಗೆ ಶೂಟ್ ಮಾಡಿದ್ದಾನೆ ಎಂದೂ ಹೇಳಲಾಗಿದೆ. ಹಾಗೇ ಎರಡನೇ ದಾಳಿಯಾಗಿದ್ದು ಪುಲ್ವಾಮಾದಲ್ಲಿ. ಸಾಗಿರ್ ಅಹ್ಮದ್ ಎಂಬುವರ ಮೇಲೆ ಶಂಕಿತ ಉಗ್ರ ದಾಳಿ ಮಾಡಿದ್ದಾನೆ. ಈ ಸಾಗಿರ್ ಮೂಲತಃ ಉತ್ತರಪ್ರದೇಶದ ಸಹರಾನ್ಪುರದವರು. ಪುಲ್ವಾಮಾದಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ಉಗ್ರನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೆಹಬೂಬಾ ಮುಫ್ತಿ ಆಕ್ರೋಶ ಹೀಗೆ ಜಮ್ಮು-ಕಾಶ್ಮೀರದಲ್ಲಿ ಪದೇಪದೆ ನಾಗರಿಕರ ಹತ್ಯೆ ನಡೆಯುತ್ತಿರುವ ಬಗ್ಗೆ ಮೆಹಬೂಬ ಮುಫ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಮುಗ್ಧ ನಾಗರಿಕರು ತಮ್ಮ ಕೆಲಸ ಮುಗಿಸಿ, ಪತ್ನಿ ಮತ್ತು ಮಕ್ಕಳನ್ನು ನೋಡಲು ಮನೆಗೆ ಹೋಗುವ ದಾರಿಯಲ್ಲಿ ಸಾಯುತ್ತಿದ್ದಾರೆ. ಹಾಗೇ, ಈಗ ಪೂಂಚ್ನಲ್ಲಿ ಸ್ಥಳೀಯನಲ್ಲದ ಒಬ್ಬ ವ್ಯಾಪಾರಿಯನ್ನು ಹತ್ಯೆ ಮಾಡಲಾಗಿದೆ. ಹೀಗೆ ಸಾಯುತ್ತಿರುವ ಅಮಾಯಕರು ನಿಜಕ್ಕೂ ಈಗಲೇ ಸಾವಿಗೆ ಯೋಗ್ಯರಲ್ಲ ಎಂದು ಹೇಳಿದ್ದಾರೆ. ಹಾಗೇ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮು-ಕಾಶ್ಮಿರದಲ್ಲಿ ಇದೀಗ ಮುಗ್ಧ ನಾಗರಿಕರನ್ನು ಕೊಲ್ಲುವ ಪ್ರವೃತ್ತಿ ಹೆಚ್ಚುತ್ತಿದೆ. ಇತ್ತೀಚೆಗಷ್ಟೇ ಒಂದು ಶಾಲೆಗೆ ನುಗ್ಗಿ ಇಬ್ಬರು ಸಿಖ್ ಶಿಕ್ಷಕರನ್ನು ಉಗ್ರರು ಹತ್ಯೆ ಮಾಡಿದ್ದರು. ಹಾಗೇ ಬೀದಿ ಬದಿಯ ವ್ಯಾಪಾರಿಗಳನ್ನೂ ಕಾರಣವಿಲ್ಲದೆ ಕೊಲ್ಲುತ್ತಿದ್ದಾರೆ. ಇಂಥ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆಯೂ ನಡೆಯುತ್ತಿದೆ. ಈ ಎನ್ಕೌಂಟರ್ನಲ್ಲಿ ಭಾರತೀಯ ಸೇನಾ ಯೋಧರೂ ಹುತಾತ್ಮರಾಗಿದ್ದಾರೆ.
A gol gappa seller Arbind Kumar Sah, from Bihar’s Banka, killed by terrorists in Eidgah area of Srinagar in Jammu & Kashmir. pic.twitter.com/xYxQlTjd4Q
— ANI (@ANI) October 16, 2021
ಇದನ್ನೂ ಓದಿ: T20 World Cup 2021: ಧೋನಿ ಎಂಟ್ರಿಯಿಂದ ಥ್ರಿಲ್ ಆಗಿದ್ದೇವೆ: ಆದರೆ ಕೋಚ್ ಯಾರೆಂದು ಗೊತ್ತಿಲ್ಲ ಎಂದ ಕೊಹ್ಲಿ
Published On - 10:05 pm, Sat, 16 October 21