T20 World Cup 2021: ಧೋನಿ ಎಂಟ್ರಿಯಿಂದ ಥ್ರಿಲ್ ಆಗಿದ್ದೇವೆ: ಆದರೆ ಕೋಚ್ ಯಾರೆಂದು ಗೊತ್ತಿಲ್ಲ ಎಂದ ಕೊಹ್ಲಿ

T20 World Cup 2021: ಧೋನಿ ಎಂಟ್ರಿಯಿಂದ ಥ್ರಿಲ್ ಆಗಿದ್ದೇವೆ: ಆದರೆ ಕೋಚ್ ಯಾರೆಂದು ಗೊತ್ತಿಲ್ಲ ಎಂದ ಕೊಹ್ಲಿ
MS Dhoni - Virat Kohli

T20 World Cup 2021: ಟಿ 20 ವಿಶ್ವಕಪ್ ನಂತರ ಕೋಚ್ ರವಿಶಾಸ್ತ್ರಿ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಹೀಗಾಗಿ ವಿಶ್ವಕಪ್ ನಂತರ, ತಂಡಕ್ಕೆ ಹೊಸ ಕೋಚ್ ನೇಮಕವಾಗಲಿದೆ. ಕೆಲ ವರದಿಗಳ ಪ್ರಕಾರ, ರಾಹುಲ್ ದ್ರಾವಿಡ್ ಅವರನ್ನು ಹೊಸ ಕೋಚ್ ಆಗಿ ನೇಮಿಸಲು ಬಿಸಿಸಿಐ ಆಸಕ್ತಿ ಹೊಂದಿದೆ.

TV9kannada Web Team

| Edited By: Zahir PY

Oct 16, 2021 | 9:13 PM

ಟೀಮ್ ಇಂಡಿಯಾ ಟಿ20 ವಿಶ್ವಕಪ್​ಗೆ ಸಜ್ಜಾಗಿದೆ. ಪಂದ್ಯಾವಳಿಯು ಅಕ್ಟೋಬರ್ 17 ರಿಂದ ಆರಂಭವಾಗುತ್ತದೆ. ಅಕ್ಟೋಬರ್ 24 ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಲಿದೆ. ಇದು ಟೀಮ್ ಇಂಡಿಯಾ ಟಿ20 ನಾಯಕನಾಗಿ ವಿರಾಟ್ ಕೊಹ್ಲಿಗೆ ಕೊನೆಯ ಟೂರ್ನಿಯಾಗಿದ್ದು, ಹೀಗಾಗಿ ಈ ಬಾರಿ ವಿಶ್ವಕಪ್ ಕೊಹ್ಲಿ ಪಾಲಿಗೆ ಮಹತ್ವದ ಟೂರ್ನಿಯಾಗಿದೆ. ಅಷ್ಟೇ ಅಲ್ಲದೆ ಈ ಬಾರಿ ಮಹೇಂದ್ರ ಸಿಂಗ್ ಧೋನಿ ಕೂಡ ಟೀಮ್ ಇಂಡಿಯಾದ ಮೆಂಟರ್​ ಆಗಿದ್ದು, ಹೀಗಾಗಿ ಈ ಸಲ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ ಭಾರತ ತಂಡ. ಏಕೆಂದರೆ ಧೋನಿ ನಾಯಕತ್ವದಲ್ಲಿ, ಟೀಮ್ ಇಂಡಿಯಾ 2007 ರಲ್ಲಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹೀಗಾಗಿಯೇ ಬಿಸಿಸಿಐ ಅವರನ್ನು ಪ್ರಸ್ತುತ ಟೂರ್ನಿಗೆ ಮಾರ್ಗದರ್ಶಕರನ್ನಾಗಿ ಮಾಡಿದೆ.

ತಂಡಕ್ಕೆ ಧೋನಿ ಮಾರ್ಗದರ್ಶಕರಾಗಿ ಬಂದಿರುವ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ‘ಧೋನಿಗೆ ಸಾಕಷ್ಟು ಅನುಭವವಿದೆ. ಅವರು ಕೂಡ ಹೊಸ ಜವಾಬ್ದಾರಿ ಬಗ್ಗೆ ರೋಮಾಂಚನಗೊಂಡಿದ್ದಾರೆ. ಧೋನಿ ಯಾವಾಗಲೂ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ಯುವಕರಿಗೆ ತಮ್ಮ ವೃತ್ತಿಜೀವನದ ಆರಂಭದಲ್ಲೇ ಇಂತಹ ದೊಡ್ಡ ಟೂರ್ನಮೆಂಟ್ ಆಡುವುದರಿಂದ ಸಾಕಷ್ಟು ಅನುಭವ ಸಿಗುತ್ತದೆ. ತಂಡದಲ್ಲಿನ ಪ್ರಾಯೋಗಿಕ ಸಲಹೆಗಳ ಮೇಲೆ ಆಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಕೊಹ್ಲಿ ಹೇಳಿದರು. ಇನ್ನು ಧೋನಿ ಮೆಂಟ್​ ಆಗಿರುವುದರಿಂದ ನನಗೆ ತುಂಬಾ ಸಂತೋಷವಾಗಿದೆ. ಅವರ ಉಪಸ್ಥಿತಿಯು ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಶುಕ್ರವಾರ ನಾಲ್ಕನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಹೀಗಾಗಿ ಇದರ ಪ್ರಯೋಜನ ಟೀಮ್ ಇಂಡಿಯಾಗೂ ಸಿಗಲಿದೆ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟರು.

ಕೋಚ್ ಬಗ್ಗೆ ಮಾಹಿತಿ ಇಲ್ಲ: ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಹೊಸ ಕೋಚ್ ಆಗಿ ನೇಮಕ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ, ಕೋಚ್ ನೇಮಕಕ್ಕೆ ಸಂಬಂಧಿಸಿದಂತೆ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಿಲ್ಲ. ನಾವು ಈ ಬಗ್ಗೆ ಯಾರೊಂದಿಗೂ ಚರ್ಚಿಸಿಲ್ಲ. ಇದೀಗ ನಮ್ಮ ಗುರಿ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವುದು ಅಷ್ಟೇ ಎಂದರು.

ಟಿ 20 ವಿಶ್ವಕಪ್ ನಂತರ ಕೋಚ್ ರವಿಶಾಸ್ತ್ರಿ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಹೀಗಾಗಿ ವಿಶ್ವಕಪ್ ನಂತರ, ತಂಡಕ್ಕೆ ಹೊಸ ಕೋಚ್ ನೇಮಕವಾಗಲಿದೆ. ಕೆಲ ವರದಿಗಳ ಪ್ರಕಾರ, ರಾಹುಲ್ ದ್ರಾವಿಡ್ ಅವರನ್ನು ಹೊಸ ಕೋಚ್ ಆಗಿ ನೇಮಿಸಲು ಬಿಸಿಸಿಐ ಆಸಕ್ತಿ ಹೊಂದಿದೆ. ಟೀಮ್ ಇಂಡಿಯಾ ನವೆಂಬರ್-ಡಿಸೆಂಬರ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಟಿ20 ಮತ್ತು ಟೆಸ್ಟ್ ಸರಣಿಗಳನ್ನು ಆಡಬೇಕಿದ್ದು, ಈ ಸರಣಿಯ ಮೂಲಕ ದ್ರಾವಿಡ್ ಅವರಿಗೆ ಕೋಚ್ ಹುದ್ದೆ ನೀಡಲು ಬಿಸಿಸಿಐ ಚಿಂತಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ

ಇದನ್ನೂ ಓದಿ: IPL 2021: ಈ ಬಾರಿಯ ಐಪಿಎಲ್​ನಲ್ಲಿ ಕಾರು ಸಿಕ್ಕಿದ್ದು ಯಾರಿಗೆ ಗೊತ್ತಾ?

ಇದನ್ನೂ ಓದಿ: IPL 2021 award winners: ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ

Follow us on

Related Stories

Most Read Stories

Click on your DTH Provider to Add TV9 Kannada