IPL 2021: ಈ ಬಾರಿಯ ಐಪಿಎಲ್ನಲ್ಲಿ ಕಾರು ಸಿಕ್ಕಿದ್ದು ಯಾರಿಗೆ ಗೊತ್ತಾ?
IPL 2021 Car Winner: ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರನಿಗೆ ನೀಡಲಾಗುವ ಪ್ರಶಸ್ತಿಯನ್ನು 30 ಸಿಕ್ಸ್ ಬಾರಿಸಿದ ಕೆಎಲ್ ರಾಹುಲ್ ಪಡೆದಿದ್ದಾರೆ. ಹಾಗೆಯೇ ಪವರ್ಪ್ಲೇ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆಟಗಾರನಿಗೆ ನೀಡಲಾಗುವ ಪವರ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿ ಕೆಕೆಆರ್ ತಂಡದ ವೆಂಕಟೇಶ್ ಅಯ್ಯರ್ ಪಡೆದಿದ್ದಾರೆ.
Updated on: Oct 16, 2021 | 3:50 PM

ಐಪಿಎಲ್ ಮುಕ್ತಾಯವಾಗಿದೆ. ಈ ಬಾರಿ ಕೂಡ ಪ್ರಶಸ್ತಿ ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಬ್ಯಾಟಿಂಗ್ ಮೂಲಕ ಇಡೀ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರುತುರಾಜ್ ಗಾಯಕ್ವಾಡ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರೆ, ಬೌಲಿಂಗ್ನಲ್ಲಿ 32 ವಿಕೆಟ್ ಪಡೆದ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಪಡೆದಿದ್ದಾರೆ.

ಅದೇ ರೀತಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರನಿಗೆ ನೀಡಲಾಗುವ ಪ್ರಶಸ್ತಿಯನ್ನು 30 ಸಿಕ್ಸ್ ಬಾರಿಸಿದ ಕೆಎಲ್ ರಾಹುಲ್ ಪಡೆದಿದ್ದಾರೆ. ಹಾಗೆಯೇ ಪವರ್ಪ್ಲೇ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆಟಗಾರನಿಗೆ ನೀಡಲಾಗುವ ಪವರ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿ ಕೆಕೆಆರ್ ತಂಡದ ವೆಂಕಟೇಶ್ ಅಯ್ಯರ್ ಪಡೆದಿದ್ದಾರೆ.

ಇದಾಗ್ಯೂ ಐಪಿಎಲ್ ಸೀಸನ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಸಫಾರಿ ಕಾರು ಮಾತ್ರ ವೆಸ್ಟ್ ಇಂಡೀಸ್ ದಾಂಡಿಗನ ಪಾಲಾಗಿರುವುದು ವಿಶೇಷ.

ಹೌದು, ಸೂಪರ್ ಸ್ಟ್ರೈಕರ್ಗೆ ಘೋಷಿಸಲಾಗಿದ್ದ ಸಫಾರಿ ಕಾರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಮ್ರಾನ್ ಹೆಟ್ಮೆಯರ್ ಪಾಲಾಗಿದೆ. ಡೆಲ್ಲಿ ಪರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆಟ್ಮೆಯರ್ ಈ ಬಾರಿ 14 ಪಂದ್ಯಗಳಿಂದ 242 ರನ್ಗಳಿಸಿದ್ದರು. 168 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಹೆಟ್ಮೆಯರ್ ಈ ವರ್ಷದ ಸೂಪರ್ ಸ್ಟ್ರೈಕರ್ ಎನಿಸಿಕೊಂಡಿದ್ದಾರೆ.

ಈ ಮೂಲಕ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಅವಾರ್ಡ್ ಹೆಟ್ಮೆಯರ್ ಪಾಲಾಗಿದೆ. ಅದರಂತೆ ಟಾಟಾ ಸಫಾರಿ ಕಾರು ಈ ಬಾರಿ ಶಿಮ್ರಾನ್ ಹೆಟ್ಮೆಯರ್ಗೆ ಲಭಿಸಿದೆ.
