ಕಾರಿನ ದಾಖಲೆ ಕೇಳಿದಕ್ಕೆ ಟ್ರಾಫಿಕ್ ಪೊಲೀಸ್​​ನ್ನು ಅಪಹರಿಸಿದ ವ್ಯಕ್ತಿಯ ಬಂಧನ

ಟ್ರಾಫಿಕ್ ಪೊಲೀಸ್ ದಾಖಲೆಗಳನ್ನು ಪರಿಶೀಲಿಸಲು ಕೇಳಿದಾಗ ವಾಹನದ ಒಳಗೆ ಹೋಗಿ ನೋಡಿ ಎಂದು ಆರೋಪಿ ಟ್ರಾಫಿಕ್ ಪೊಲೀಸ್​​ಗೆ ಹೇಳಿದ್ದಾನೆ. ಈ ಹೊತ್ತಲ್ಲಿ ಪೊಲೀಸನ್ನು ಕಾರೊಳಗೆ ನೂಕಿ ಸುಮಾರು ಹತ್ತು ಕಿಮೀ ದೂರ ಸಂಚರಿಸಿದ ನಂತರ ಪೊಲೀಸ್ ಪೋಸ್ಟ್ ಬಳಿ ಟ್ರಾಫಿಕ್ ಪೊಲೀಸನ್ನು ಎಸೆದು ಹೋಗಿದ್ದಾನೆ.

ಕಾರಿನ ದಾಖಲೆ ಕೇಳಿದಕ್ಕೆ ಟ್ರಾಫಿಕ್ ಪೊಲೀಸ್​​ನ್ನು ಅಪಹರಿಸಿದ ವ್ಯಕ್ತಿಯ ಬಂಧನ
ಪ್ರಾತಿನಿಧಿಕ ಚಿತ್ರ

ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ (Greater Noida) 29 ವರ್ಷದ ವ್ಯಕ್ತಿಯೊಬ್ಬ ತನ್ನ ಕಾರಿನ ದಾಖಲೆಗಳನ್ನು ಪರೀಕ್ಷಿಸಲು ತಡೆದ ಕರ್ತವ್ಯನಿರತ ಟ್ರಾಫಿಕ್ ಪೊಲೀಸ್​​ನ್ನು  ಅಪಹರಿಸಿದ್ದು,  ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರು ಕಳ್ಳತನವಾಗಿರಬಹುದೆಂದು ಶಂಕಿಸಲಾಗಿತ್ತು. ಟ್ರಾಫಿಕ್ ಪೊಲೀಸ್ ದಾಖಲೆಗಳನ್ನು ಪರಿಶೀಲಿಸಲು ಕೇಳಿದಾಗ ವಾಹನದ ಒಳಗೆ ಹೋಗಿ ನೋಡಿ ಎಂದು ಆರೋಪಿ ಟ್ರಾಫಿಕ್ ಪೊಲೀಸ್​​ಗೆ ಹೇಳಿದ್ದಾನೆ. ಈ ಹೊತ್ತಲ್ಲಿ ಪೊಲೀಸನ್ನು ಕಾರೊಳಗೆ ನೂಕಿ ಸುಮಾರು ಹತ್ತು ಕಿಮೀ ದೂರ ಸಂಚರಿಸಿದ ನಂತರ ಪೊಲೀಸ್ ಪೋಸ್ಟ್ ಬಳಿ ಟ್ರಾಫಿಕ್ ಪೊಲೀಸನ್ನು ಎಸೆದು ಹೋಗಿದ್ದಾನೆ. ಎರಡು ವರ್ಷಗಳ ಹಿಂದೆ ಹರ್ಯಾಣದ ಗುರ್ಗಾಂವ್‌ನಲ್ಲಿರುವ ಶೋರೂಂನಿಂದ ಮಾರುತಿ ಸ್ವಿಫ್ಟ್ ಡಿಜೈರ್ ಅನ್ನು ಸಚಿನ್ ರಾವಲ್ ಕಳವು ಮಾಡಿದ್ದ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ. ಗ್ರೇಟರ್ ನೋಯ್ಡಾದ ಘೋಡಿ ಬಚೆಡಾ ಗ್ರಾಮದಲ್ಲಿ ವಾಸಿಸುತ್ತಿರುವ ರಾವಲ್ ತನ್ನ ಕಾರಿನ ಮೇಲೆ ನಕಲಿ ನಂಬರ್ ಪ್ಲೇಟ್ ಹಾಕಿದ್ದ, ಅದರ ಸಂಖ್ಯೆಯು ಅದೇ ಹಳ್ಳಿಯ ನಿವಾಸಿಗಳಿಗೆ ಸೇರಿದ ಕಾರಿನ ಸಂಖ್ಯೆಯೇ ಆಗಿತ್ತು ಎಂದು ವಕ್ತಾರರು ಹೇಳಿದ್ದಾರೆ.

ಭಾನುವಾರ ಬೆಳಿಗ್ಗೆ ಟ್ರಾಫಿಕ್ ಪೊಲೀಸರು ಸೂರಜ್‌ಪುರದಲ್ಲಿ ವಾಹನ ತಪಾಸಣೆ ಅಭಿಯಾನವನ್ನು ಆರಂಭಿಸಿದ್ದರು. ಅಲ್ಲಿ ರಾವಲ್ ಕದ್ದ ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಬಂದ ನಂತರ ವಿಚಾರಣೆಗೆ ತಡೆಹಿಡಿಯಲಾಯಿತು ಎಂದು ಅಧಿಕಾರಿ ಹೇಳಿದರು.

ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಲು ಟ್ರಾಫಿಕ್ ಕಾನ್ ಸ್ಟೇಬಲ್ ವೀರೇಂದ್ರ ಸಿಂಗ್ ರಾವಲ್ ಅವರಲ್ಲಿ ಕೇಳಿದ್ದರು. ರಾವಲ್ ಅವರನ್ನು ಕಾರಿನ ಒಳಗೆ ಹೋಗುವಂತೆ ಕೇಳಿಕೊಂಡಿದ್ದು ತಮ್ಮ ಮೊಬೈಲ್ ಫೋನಿನಲ್ಲಿರುವ ದಾಖಲೆಗಳ ಸಾಫ್ಟ್ ಕಾಪಿಗಳನ್ನು ತೋರಿಸುವುದಾಗಿ ಹೇಳಿದ್ದರು.

ಆದರೆ, ಕಾನ್ ಸ್ಟೇಬಲ್ ಒಳಗೆ ಕುಳಿತು ದಾಖಲೆ ಪರೀಕ್ಷಿಸುತ್ತಿದ್ದ ವೇಳೆ ರಾವಲ್ ಕಾರನ್ನು ಲಾಕ್ ಮಾಡಿದರು. ನಂತರ ಆತ ಅಜಾಯಾಪುರ ಪೊಲೀಸ್ ಚೌಕಿಯ ಬಳಿ ಕಾನ್ ಸ್ಟೇಬಲ್ ಅನ್ನು ಎಸೆದು ವೇಗವಾಗಿ ಕಾರು ಓಡಿಸಿ ಹೋಗಿದ್ದಾನೆ “ಎಂದು ಪೊಲೀಸ್ ವಕ್ತಾರರು ಹೇಳಿದರು.

ಐಪಿಸಿ ಸೆಕ್ಷನ್ 364 (ಅಪಹರಣ), 353 (ಸಾರ್ವಜನಿಕ ಸೇವಕರನ್ನು ಕರ್ತವ್ಯ ನಿರ್ವಹಿಸದಂತೆ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಪಡೆ) ಮತ್ತು 368 (ತಪ್ಪಾಗಿ ಮುಚ್ಚಿಡುವುದು ಅಥವಾ ಬಂಧನದಲ್ಲಿಡುವುದು, ಅಪಹರಿಸಿದ ಅಥವಾ ಅಪಹರಿಸಿದ ವ್ಯಕ್ತಿ) ಅಡಿಯಲ್ಲಿ ಸೋಮವಾರ ಎಫ್ಐಆರ್ ಅನ್ನು ಸೂರಜ್‌ಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ನಂತರ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧವೆಸಗಲು ಬಳಸಿದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: PM action plan: 60 ಅಂಶಗಳ ಕ್ರಿಯಾ ಯೋಜನೆ ಸಿದ್ಧ ಪಡಿಸಿದ ಕೇಂದ್ರ ಸರ್ಕಾರ; ಇದರಲ್ಲಿ ಏನೇನಿದೆ?

Click on your DTH Provider to Add TV9 Kannada